Coastal Bulletin

ಪ್ರತಿಭೆ ಬೆಳಕಿಗೆ ಬರಬೇಕಾದರೆ ಆ ವ್ಯಕ್ತಿಯ ಪರಿಶ್ರಮದ ಜೊತೆಗೆ ಮುಖ್ಯವಾಗಿ ಬೇಕಾದದ್ದು ಹೆತ್ತವರ ಪ್ರೋತ್ಸಾಹ ಹಾಗೂ ಪ್ರತಿಭೆಗೆ ತಕ್ಕುದಾದ ವೇದಿಕೆ,ಶ್ರದ್ಧೆ, ಏಕಾಗ್ರತೆ, ಸಾಧನೆಯ ತವಕ, ಅದೇ ರೀತಿ ಹಿಂದೊಬ್ಬ ಗುರು-ಮುಂದೊಂದು ಗುರಿ,ಇವಿಷ್ಟು ನಿಶ್ಚಲವಾಗಿ ನಮ್ಮೊಳಗೆ ಮನೆಮಾಡಿ ನಿಂತದ್ದೇ ಆದಲ್ಲಿ ಆ ಸಾಧನೆಗೆ ಪೂರಕವಾದ ಪ್ರತಿಫಲದ ಮಳೆ ಖಚಿತವೇ ಸರಿ. ಈ ನಿಟ್ಟಿನಲ್ಲಿ ಕಾಣುವಾಗ ನಮ್ಮ ಕಣ್ಣ ಮುಂದೆ ಬರುವ ಕರಾವಳಿ ಪ್ರತಿಭೆ ದಕ್ಷ ಜೆ ಕುಲಾಲ್.

ಬಂಟ್ವಾಳದ  ಜಯರಾಜ್ ಎಂ ಮತ್ತು ಪುಷ್ಪಲತಾ ದಂಪತಿಗಳ ಮುದ್ದಿನ ಸುಪುತ್ರಿ.ಎಳವೆಯಿಂದಲೇ ಈಕೆಗೆ ಸಂಗೀತದ ಬಗೆಗೆ ಹೆಚ್ಚಿನ ಒಲವು,ಮಗಳ ಅನನ್ಯ ಸಾಧನೆಯು ಹಿಂದೆ ಹೆತ್ತವರ ಶ್ರಮ‌,ಬೆಂಬಲ‌ ಇದೆ.

ದಕ್ಷ ಕುಲಾಲ್ ಇವರು ಶಾಸ್ತ್ರೀಯ ಸಂಗೀತ ಜೂನಿಯರ್ ವಿಭಾಗ ದಲ್ಲಿ ಶೇ 92%ಅಂಕ ವನ್ನು ಪಡೆದು,ಕಿರಿಯ ವಯಸ್ಸಿನಲ್ಲೇ ಹಲವಾರು ಕಾರ್ಯಕ್ರಮಗಳನ್ನು ನೀಡಿ ಸೈ ಎನಿಸಿಕೊಂಡ  ದಕ್ಷ ಮುಂದೆ ಕಾಲಿಟ್ಟಿದ್ದು ರಾಜ್ಯದ ಹೆಸರಾಂತ ಟಿವಿ ರಿಯಾಲಿಟಿ ಶೋ ಗಳಿಗೆ.ಝೀ ಕನ್ನಡದ ಸರಿಗಮಪ ಮತ್ತು ಕಲರ್ಸ್ ಕನ್ನಡದ ಕನ್ನಡ ಕೋಗಿಲೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತೀರ್ಪುಗಾರರ ಪ್ರಶಂಸೆಗೆ ಪಾತ್ರರಾಗಿದ್ದಾಳೆ.ಕರಾವಳಿ ಸರಿಗಮಪ ಸೀಜನ್ ಒಂದು ಮತ್ತು ಎರಡರಲ್ಲಿ ಸೆಮಿಫೈನಲ್ಸ್ ಗೆ ಬಂದು  ಪ್ರೇಕ್ಷಕರ ಹೃದಯ ಗೆದ್ದ ಈಕೆ ಸಂಗೀತ ಕ್ಷೇತ್ರಕ್ಕೆ ತನ್ನದೇ ರೀತಿಯಲ್ಲಿ ಕೊಡುಗೆ ನೀಡುತ್ತಿರುವ ಬಾಲ ಪ್ರತಿಭೆ.


ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿರುವ ಈಕೆ, ಸಂಗೀತದ ಜೊತೆ ಜೊತೆಗೆ ಚಿತ್ರಕಲೆ,ನೃತ್ಯ,ಹಾಡಿನ ರಚನೆ,ನಾಟಕ,ಭಾಷಣ, ಹೀಗೆ ಎಲ್ಲದರಲ್ಲೂ ಆಸಕ್ತಿ ಬೆಳೆಸಿಕೊಂಡಿದ್ದಾಳೆ. ತುಮಕೂರಿನ ಸಿದ್ದಗಂಗಾ ಮಠ ದ ಶಾಲೆಯಲ್ಲಿ ನಡೆದ ರಾಜ್ಯ ಮಟ್ಟದ ವಿಜ್ಞಾನ ಮೇಳ ದಲ್ಲಿಯೂ ಭಾಗವಹಿಸಿ ಗುರುತಿಸಿಕೊಂಡಿದ್ದಾರೆ. ಹೀಗೆ ಈಕೆಯ ಬಹುಮುಖ ಪ್ರತಿಭೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದೆ.

  ಶ್ರೀಮತಿ ಸುಚಿತ್ರಾ ಹೊಳ್ಳ ಶಾಸ್ತ್ರೀಯ ಸಂಗೀತ,ಕಿರಣ್ ಕುಮಾರ್ ಪುತ್ತೂರು ಮತ್ತು ಶ್ರೀಮತಿ ಕವಿತಾ ದಿನಕರ್ ಸುಗಮ ಸಂಗೀತ ಕ್ಷೇತ್ರದಲ್ಲಿ ಆಕೆಗೆ ಗುರುವಾಗಿ ರಂಗದಲ್ಲಿ ಬೆಳಸುತ್ತಿದ್ದಾರೆ.

ಎಸ್ ವಿ ಎಸ್ ಆಂಗ್ಲ ಮಾದ್ಯಮ ಶಾಲೆ ಬಂಟ್ವಾಳ ಇಲ್ಲಿ ಹತ್ತನೇ ತರಗತಿ ಕಲಿಯುತ್ತಿರವ ದಕ್ಷ ಕುಲಾಲ್ ರ ಭವಿಷ್ಯ ಉಜ್ವಲವಾಗಲಿ ಹಾಗೂ ಇನ್ನಷ್ಟು ಸಾಧನೆಯ ಶಿಖರವೇರಲಿ ಅನ್ನೋದು ಕೋಸ್ಟಲ್ ಬುಲೆಟಿನ್ ತಂಡದ ಹಾರೈಕೆ.

Leave a Comment