ಫರಂಗಿಪೇಟೆಯಲ್ಲಿ ಸಿಎಂ ಸಿದ್ದರಾಮಯ್ಯರಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಭವ್ಯ ಸ್ವಾಗತ

Coastal Bulletin
ಫರಂಗಿಪೇಟೆಯಲ್ಲಿ ಸಿಎಂ ಸಿದ್ದರಾಮಯ್ಯರಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಭವ್ಯ ಸ್ವಾಗತ

ಬಂಟ್ವಾಳ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರು ವಿಮಾನ ನಿಲ್ದಾಣದಿಂದ ಪುತ್ತೂರಿಗೆ ತೆರಳುವ ಸಂದರ್ಭದಲ್ಲಿ ಫರಂಗಿಪೇಟೆಯಲ್ಲಿ ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್ ಫರಂಗಿಪೇಟೆ ಹಾಗೂ ಗ್ರಾ.ಪಂ.ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರ ನೇತ್ರತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಸೇರಿ ಅವರನ್ನು ಸ್ವಾಗತಿಸಿದರು.

ಫರಂಗಿಪೇಟೆಯಲ್ಲಿ ಸಿಎಂ ಕಾರಿನಿಂದ ಇಳಿದು ಗೌರವ ಸ್ವೀಕರಿಸಿ ಜತೆಗೆ ಮನವಿಯನ್ನೂ ಅವರಿಗೆ ನೀಡಲಾಯಿತು. ಜಿ.ಪಂ.ಮಾಜಿ ಸದಸ್ಯರಾದ ಉಮ್ಮರ್ ಫಾರೂಕ್, ಚಂದ್ರಪ್ರಕಾಶ್ ಶೆಟ್ಟಿ, ಪುದು ಗ್ರಾ.ಪಂ.ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಗ್ರಾ.ಪಂ.ಉಪಾಧ್ಯಕ್ಷೆ ರುಕ್ಸಾನಾ ಬಾನು ಅಮ್ಮೆಮಾರ್,ಮಂಗಳೂರು ತಾ.ಪಂ.ಮಾಜಿ ಅಧ್ಯಕ್ಷ ಮಹಮ್ಮದ್ ಮೋನು, ಮೇರಮಜಲು ಗ್ರಾ.ಪಂ.ಮಾಜಿ ಅಧ್ಯಕ್ಷೆ ವೃಂದಾ ಪೂಜಾರಿ ಪ್ರಮುಖರಾದ ಆಶಿಪ್

ಇಕ್ಬಾಲ್ ದರ್ಬಾರ್, , ಇಕ್ಬಾಲ್ ಸುಜೀರು, ಇರ್ಶಾದ್ ಪೆರಿಮಾರ್, ಮಹಮ್ಮದ್ ಬುಕಾರಿ, ಅಬುಸಾಲಿ ಉಸ್ತಾದ್ ಬದ್ರಿಯಾ ಜುಮಾ ಮಸೀದಿ ಅಮ್ಮೆಮಾರ್ ,ಸಲಾಂ ಮಲ್ಲಿ, ಇಶಾಮ್ ಫರಂಗಿಪೇಟೆ,ಮಹಮ್ಮದ್ ಮೋನು ಪರಂಗಿಪೇಟೆ, ಅನಾಸ್ ಅಮ್ಮೆಮಾರ್, ರಝಾಕ್ ಅಮ್ಮೆಮಾರ್, ರಿಯಾಜ್ ಕುಂಪಣಮಜಲು, ವಿಶುಕುಮಾರ್ ಸುಜೀರು, ಜಯಂತಿ ಕುಮ್ಡೆಲು, ಲಬೀಶಾ ಅಮ್ಮೆಮಾರ್, ಸಾರಮ್ಮ ಅಮ್ಮೆಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Comment