ಬಂಟ್ವಾಳ: ಬಂಟರ ಸಂಘ ಬಂಟವಾಳ ತಾಲೂಕು ವತಿಯಿಂದ ಆಲ್ ಕಾರ್ಗೊ ಲಾಜಿಸ್ಟಿಕ್ಸ್ ಮುಂಬೈ ಇದರ ಅಧ್ಯಕ್ಷ ಡಾ. ಶಶಿಕಿರಣ್ ಶೆಟ್ಟಿ ಇವರ ಸಹಕಾರದಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಎಲ್ಲಾ ಸಮುದಾಯದ 1200 ವಿದ್ಯಾರ್ಥಿಗಳಿಗೆ 60 ಲಕ್ಷ ರೂ.ವಿದ್ಯಾರ್ಥಿ ವೇತನ ವಿತರಣಾ ಸಮಾರಂಭಭಾನುವಾರ ಬ್ರಹ್ಮರಕೊಟ್ಟುವಿನ 'ಬಂಟವಾಳದ ಬಂಟರ ಭವನ'ದಲ್ಲಿ ಅ 19ರಂದು ಆದಿತ್ಯವಾರ ನಡೆಯಿತು.
ಸರಕಾರ ಸಹಕಾರ ಸಂಘಗಳ ಜಂಟಿ ನಿಬಂಧಕರಾದ ಯಶಸ್ವಿನಿ ಶೆಟ್ಟಿ ಕೆ.ಸಿ.ಎಸ್. ಅವರು ಸಮಾರಂಭದ ಉದ್ಘಾಟಿಸಿ ಮಾತನಾಡಿ,ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮದೊಂದಿಗೆ ಸವಾಲನ್ನು ಎದುರಿಸುವ ಆತ್ಮಸ್ಥೈರ್ಯ ಮೈಗುಡಿಸಿಕೊಂಡರೆ ಜೀವನದಲ್ಲಿ ಯಶಸ್ಸು ಸಾಧ್ಯ, ದೊಡ್ಡ ಕನಸುಗಳನ್ನು ನನಸಾಗಿಸುವ ಇಚ್ಛಾಶಕ್ತಿ ಹಾಗೂ ಛಲ ನಮ್ಮಲ್ಲಿರಲಿ, ನಾಗರಿಕ ಸೇವೆಗಳಂತಹ ಸ್ಮರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಳ್ಳಿ ಎಂದು ಹೇಳಿದರು.
ಅತಿಥಿಯಾಗಿ ಭಾಗವಹಿಸಿದ್ದ ನಿಟ್ಟೆ ಯುನಿವ ರ್ಸಿಟಿಯ ಉಪಕುಲಪತಿ ವಿಶಾಲ್ ಹೆಗ್ಡೆ ಅವರು ಮಾತನಾಡಿ,ಆಧುನಿಕ ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶವನ್ನು ನೀಡಿದ್ದು, ದೃಢಚಿತ್ತದಿಂದ ಆಸಕ್ತಿ ಇರುವ ಯಾವುದೇ ಕ್ಷೇತ್ರವನ್ನು ಆಯ್ಕೆಮಾಡಿ ಮುಂದುವರಿಯಿರಿ ಹಾಗೂ ಸಂಘದಿಂದ ಪಡೆದ ವಿದ್ಯಾರ್ಥಿ ವೇತನ ಭವಿಷ್ಯದಲ್ಲಿ ಸಂಘದ ಮೂಲಕ ಸಂದಾಯ ಮಾಡಿ ಮತ್ತೊಬ್ಬರಿಗೆ ನೇರವಾಗಿರಿ ಎಂದರು.
ಆಲ್ ಕಾರ್ಗೊ ಲಾಜಿಸ್ಟಿಕ್ಸ್ ಲಿ.ನ ಸಿಎಸ್ ಆರ್ ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ಡಾ.ನೀಲ್ ರತನ್ ಶೆಂಡೆ ಮಾತನಾಡಿ ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ ಹೀಗೆ ವಿವಿಧ ಜನಪಯೋಗಿ ಕಾರ್ಯಕ್ರಮಗಳಿಗೆ ಸಂಸ್ಥೆ ವತಿಯಿಂದ ಸಹಕರಿಸಲಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉನ್ನತ ಭವಿಷ್ಯವನ್ನು ಗುರಿಯನ್ನಿರಿಸಿಕೊಂಡು ರೂಪಿಸಿಕೊಳ್ಳಬೇಕು, ಸಶಕ್ತ ಭಾರತ, ರಾಷ್ಟ್ರನಿರ್ಮಾಣದಲ್ಲಿ ತೊಡಗಬೇಕು ಎಂದರು.
ಬಂಟ್ವಾಳ ಶಾಸಕ ರಾಜೇಶ್ ನ್ಯಾಕ್ ಉಳಿಪಾಡಿ, ಮಾಜಿ ಸಚಿವ ಬಿ.ರಮಾನಾಥ ರೈ, ಆಲ್ ಕಾರ್ಗೊ ಲಾಜಿಸ್ಟಿಕ್ಸ್ ಲಿ.ನ ವಿಭಾಗಾಧಿಕಾರಿ ಸವಿಸ್ತಾರ್
ಆಳ್ವ, ಡಾ.ಪ್ರಶಾಂತ್ ಮಾರ್ಲ, ಸಂಕಪ್ಪ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಾಧಕರಾದ ಎ ಜೆ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಾಂತಾರಾಮ ರೈ, ತುಂಬೆ ಪ.ಪೂ. ವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಜಗದೀಶ್ ರೈ, ಭಾರತೀಯ ನೌಕಪಡೆಯ ಲೆಪ್ಟಿನೆಂಟ್ ಕು.ವಿಭಾ ಶೆಟ್ಟಿ, ಪೊಲೀಸರ ಸಬ್ ಇನ್ಸ್‌ಪೆಕ್ಟರ್ ಕು.ಸುಶ್ಮಿತಾ ಶೆಟ್ಟಿ ಬದಿಗುಡ್ಡೆ ಅವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಸಮುದಾಯದ ಎಸ್ಸೆನಲ್ಲಿ ಮತ್ತು ಪಿಯುಸಿ ಅತೀ ಹೆಚ್ಚು ಅಂಕ ಗಳಿಸಿದ ಸಮುದಾ ಯದ 29 ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾ ರವನ್ನಿತ್ತುಅಭಿನಂದಿಸಲಾಯಿತು.ವಿರ್ಯಲಕ್ಷ್ಮೀ ನಾರಾಯಣ ಆಳ್ವ ದತ್ತಿನಿಧಿ ಯಿಂದ ಲಹರಿ ಕೆ. ರೈಗೆ ಸಹಾಯಧನ ವಿತರಿಸ ಲಾಯಿತು.
ಸಂಘದ ಉಪಾಧ್ಯಕ್ಷ ಐತಪ್ಪ ಆಳ್ವ ಸುಜೀರುಗುತ್ತು, ಜತೆ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ, ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕುಳ, ಜತೆ ಕೋಶಾಧಿಕಾರಿ ವಿದ್ಯಾ ಎ. ರೈ ಬಿ.ಸಿ.ರೋಡು, ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಪಿ.ರೈ, ಯುವ ವಿಭಾಗದ ಅಧ್ಯಕ್ಷ ಗೋಕುಲ್ ಭಂಡಾರಿ, ಬಿಜಂದಾರ್ ಗುತ್ತು, ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಕ್ರಮದ ಸಂಚಾಲಕ ಶಿವಪ್ರಸಾದ್ ರೈ ಮೇರಾವು ಉಪಸ್ಥಿತರಿದ್ದರು.
ಸಂಘದ ಮಾಜಿ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿ ಅವರು ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಸದಾನಂದ ಆಳ್ವ ಕಂಪ ವಂದಿಸಿ ದರು. ಬಾಲಕೃಷ್ಣ ಶೆಟ್ಟಿ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು















