ಮಾಣಿಲ: ಜು.12 ರಿಂದ ಆ.28ತನಕ ಶ್ರೀ ವರಮಹಾಕ್ಷ್ಮೀ ವ್ರತಾಚರಣೆ: ಮಾಣಿಲ ಶ್ರೀ

Coastal Bulletin
ಮಾಣಿಲ: ಜು.12 ರಿಂದ ಆ.28ತನಕ ಶ್ರೀ ವರಮಹಾಕ್ಷ್ಮೀ ವ್ರತಾಚರಣೆ: ಮಾಣಿಲ ಶ್ರೀ

ಬಂಟ್ವಾಳ :ಕಳೆದ 26ವರ್ಷಗಳಿಂದ ಶ್ರೀಧಾಮದಲ್ಲಿ ನಿರಂತರವಾಗಿ ಆಚರಿಸಿಕೊಂಡು ಬರುತ್ತಿರುವ ಶ್ರೀ ವರಮಹಾಕ್ಷ್ಮೀ ವ್ರತಾಚರಣೆಯ ಪೂರ್ವಭಾವಿಯಾಗಿ 48 ದಿನಗಳಲ್ಲಿ( ಒಂದು ಮಂಡಲ)ನಡೆಸಿಕೊಂಡು ಬರುವ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ, ನಾಗದೇವರ ಪೂಜೆ, ಗೋಮಾತಾ ಪೂಜೆ, ಬಾಲಭೋಜನ,ಕನಕಧಾರಾ ಯಾಗ, ಸಾಮೂಹಿಕ ಕುಂಕುಮಾರ್ಚನೆ,ಶ್ರೀ ದುರ್ಗಾ ಪೂಜೆ, ಆಶ್ಲೇಷಾ ಬಲಿ,ಮಹಾಪೂಜೆ,ವಾಯನದಾನ,ಅನ್ನಪ್ರಸಾದ ಸೇವೆಗಳನ್ನು ಈ ವರ್ಷವೂ ಜು.12ರಿಂದ ಆ.28ರ ತನಕ ಆಯೋಜಿಸಲಾಗಿದೆ ಎಂದು ಮಾಣಿಲ ಶ್ರೀಧಾಮದ ಯೋಗಿ ಕೌಸ್ತುಭ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಅವರು ಜು. 9ರ ಗುರುವಾರ ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮಗಳ ಮಾಹಿತಿ ನೀಡಿದರು.

ಗೊರವನಳ್ಳಿ ಕಮಲಮ್ಮನ ಪ್ರೇರಣೆಯಿಂದ ಮಾಣಿಲ ಶ್ರೀಧಾಮ ವರಮಹಾಲಕ್ಷ್ಮೀ ಕ್ಷೇತ್ರ ಸ್ಥಾಪನೆ ಆಗಿದೆ. ಇಲ್ಲಿ ನಡೆಯುವ 48 ದಿನಗಳ ವರಮಹಾಕ್ಷ್ಮೀ ವ್ರತಾಚರಣೆ ಮೂಲಕ ವಿಶ್ವಶಾಂತಿಗೆ ಪ್ರಾರ್ಥನೆ ಮಾಡಲಾಗುತ್ತದೆ .ಮಾತೃಪ್ರಧಾನ ರಾಷ್ಟ್ರದಲ್ಲಿ ಮಹಿಳೆಯರಿಗೆ ಗೌರವ ನೀಡಬೇಕು ಎಂಬ ಧನಾತ್ಮಕ ಚಿಂತನೆ ಜೊತೆಗೆ ಮತಾಂತರ, ಲವ್ ಜೆಹಾದ್, ವರದಕ್ಷಿಣೆ ಇತ್ಯಾದಿಗಳನ್ನು ತಡೆಗಟ್ಟುವ ಮಾನಸಿಕತೆಯ ಸೃಷ್ಟಿ ವರಮಹಾಕ್ಷ್ಮೀ ವ್ರತಾಚರಣೆಯ ಉದ್ದೇಶ ಎಂದವರು‌ವಿವರಿಸಿದರು.

ಮನೆ ಮನೆಯಲ್ಲಿ ಸಂಕೀರ್ತನೆ

ಮನೆ ಮನೆಯಲ್ಲಿ ದೇವರ ನಾಮ ಸಂಕೀರ್ತನೆ ವಿಶ್ವ ಶಾಂತಿಗಾಗಿ ನಡೆಯಬೇಕಾಗಿದೆ. ದೂರ ದೃಷ್ಟಿಯ ಕಲ್ಪನೆಯನ್ನಿಟ್ಟು ವ್ರತಾಚರಣೆಯನ್ನು ಮಾಡಲಾಗುತ್ತಿದೆ. ಪ್ರತಿ ನಿತ್ಯ ಗಣಪತಿ ಹವನ, ಸಾಮೂಹಿಕ ಕುಂಕುಮಾರ್ಚನೆ, ಲಕ್ಷ್ಮೀ ಪೂಜೆ ನಡೆಯಲಿದೆ. ಶುಕ್ರವಾರವಾರ ದುರ್ಗಾನಮಸ್ಕಾರ ಪೂಜೆ ನಡೆಯಲಿದೆ. ಆ.27ರಂದು ದತ್ತ ಯಾಗ, ಪಾದುಕಾ ಪೂಜೆ ನಡೆಯಲಿದೆ.

ಜು.12ರಿಂದ ಚೇವಾರು, ಬಾಯಾರು, ವಿಟ್ಲ, ಕೆಯ್ಯೂರು, ಪುತ್ತೂರು, ಪೆರ್ಲ, ಮಂಗಳೂರು, ಕನ್ಯಾನ, ಮಧೂರು, ಸೀತಂಗೋಳಿ ಭಾಗದಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ ಎಂದು ಅವರು ಹೇಳಿದರು.

ಒಟ್ಟು ಕಾರ್ಯಕ್ರಮದಲ್ಲಿ 30,000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ,ದಿನಕ್ಕೆ 600ರಿಂದ 800ಮಂದಿಯ ಭಾಗವಹಿಸಲಿದ್ದಾರೆ. ವಿವಿಧ ಕಡೆಯಲ್ಲಿ ಉಪ ಸಮಿತಿಗಳನ್ನು ಮಾಡಿ ಜನರಿಗೆ ಮಾಹಿತಿ ನೀಡುವ ಕಾರ್ಯವಾಗಿದೆ. ರಾಜಕೀಯ, ಸಾಮಾಜಿಕ ಕ್ಷೇತ್ರದವರನ್ನು ಆಮಂತ್ರಿಸಲಾಗುತ್ತಿದೆ. ಪ್ರತಿ ಭಾನುವಾರ ಬಾಲ ಭೋಜನ ಬಳಿಕ ಸತ್ಸಂಗ ನಡೆಯಲಿದೆ. ಇದರಲ್ಲಿ ವಿವಿಧ ಕ್ಷೇತ್ರಗಳ ಮುಖಂಡರು ಉಪನ್ಯಾಸ ನೀಡಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವ್ರತಾಚರಣೆ ಸಮಿತಿ ಅಧ್ಯಕ್ಷ ಡಾ ಹರೀಶ್ ಬೊಟ್ಟಾರಿ ಬಾಯಾರು, ಗೌರವಾಧ್ಯಕ್ಷ ಕೆಯ್ಯೂರು ನಾರಾಯಣ ಭಟ್, ಪ್ರಧಾನ ಕಾರ್ಯದರ್ಶಿ ರೇವತಿ ಪೆರ್ನೆ ಉಪಾಧ್ಯಕ್ಷ ನವೀನ್ ಕಾಶಿ , ಸಂಚಾಲಕವಚೆನ್ನಪ್ಪ ಕುಲಾಲ್ ಎರುಗಲ್ಲು, ಮಹಿಳಾ ಸಮಿತಿ ಅಧ್ಯಕ್ಷೆ ವನಿತಾ ಶೆಟ್ಟಿ, ಪದಾಧಿಕಾರಿ ಶ್ರೀಧರ ಬಾಳೆಕಲ್ಲು ಮೊದಲಾದವರು ಉಪಸ್ಥಿತರಿದ್ದರು.

Leave a Comment