ಕಳ್ಳಿಗೆ: ಸಾರ್ವಜನಿಕ ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿ ಅಸ್ತಿತ್ವಕ್ಕೆ.

Coastal Bulletin
ಕಳ್ಳಿಗೆ: ಸಾರ್ವಜನಿಕ ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿ ಅಸ್ತಿತ್ವಕ್ಕೆ.

ಬಂಟ್ವಾಳ: ಕಳ್ಳಿಗೆ ಗ್ರಾಮದ ಕಂಜತ್ತೂರು ಭಾಗದ ಸಾರ್ವಜನಿಕ ರುದ್ರಭೂಮಿಗೆ ಮೂಲಸೌಕರ್ಯ ಹಾಗೂ ಸರ್ವತೋಮುಖ ಅಭಿವೃದ್ಧಿ ಹಿತದೃಷ್ಟಿಯಿಂದ ಕಳ್ಳಿಗೆ ಗ್ರಾಮಸ್ಥರ ಮಹಾಸಭೆಯು ಬ್ರಹ್ಮರಕೂಟ್ಲು ಶ್ರೀ ರಾಮ ಭಜನ ಮಂದಿರದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.

ಗ್ರಾಮದ ಪ್ರಮುಖರು ಹಾಗೂ ಸಮಸ್ತ ನಾಗರಿಕರ ಸಮ್ಮುಖದಲ್ಲಿ ನಡೆದ ಈ ಸಭೆಯಲ್ಲಿ, ರುದ್ರಭೂಮಿಗೆ ತುರ್ತಾಗಿ ಕಾಂಪೌಂಡ್ ಗೋಡೆ, ಸುಸಜ್ಜಿತ ರಸ್ತೆ, ಕುಡಿಯುವ ನೀರು ಹಾಗೂ ನೆರಳಿನ ವಿಶ್ರಾಂತಿ ಶೆಡ್ ನಿರ್ಮಿಸುವ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ಈ ಅಭಿವೃದ್ಧಿ ಕಾರ್ಯಗಳನ್ನು ವ್ಯವಸ್ಥಿತವಾಗಿ ಹಾಗೂ ಪಾರದರ್ಶಕವಾಗಿ ಕೈಗೆತ್ತಿಕೊಳ್ಳಲು ಸಭೆಯಲ್ಲಿ ಸರ್ವಾನುಮತದಿಂದ "ಕಳ್ಳಿಗೆ ಗ್ರಾಮದ ಸಾರ್ವಜನಿಕ ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿ"ಯನ್ನು ಅಧಿಕೃತವಾಗಿ ರಚಿಸಲಾಯಿತು.

ನೂತನ ಪದಾಧಿಕಾರಿಗಳು:

ಅಧ್ಯಕ್ಷರಾಗಿ ಶಶಿಧರ ಬಿ ಬ್ರಹ್ಮರಕೂಟ್ಲು, ಕಾರ್ಯದರ್ಶಿ ಕವಿರಾಜ್ ಚಂದ್ರಿಗೆ ಹಾಗೂ ಖಜಾಂಚಿ ಸುಧೀರ್

ಜಾರಂದಗುಡ್ಡೆ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಇವರೊಂದಿಗೆ ಊರಿನ ವಿವಿಧ ವಾರ್ಡ್‌ಗಳನ್ನು ಪ್ರತಿನಿಧಿಸುವ ಒಟ್ಟು 37 ಜನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಹಾಗೂ ಸಮಿತಿಯ ಮಾರ್ಗದರ್ಶನಕ್ಕಾಗಿ 11 ಜನ ಪ್ರಮುಖರನ್ನು ಸಲಹೆಗಾರರನ್ನಾಗಿ ಅರಿಸಲಾಯಿತು.

ಸಂತೋಷ್ ದೇವಂದಬೆಟ್ಟು ಸ್ವಾಗತಿಸಿ  ಮನೋಜ್ ಕನಪಾಡಿ ಧನ್ಯವಾದವಿತ್ತು ಮಹೇಶ್ ಚಂದ್ರಿಗೆ ನಿರೂಪಿಸಿದರು.  

ಮುಂದಿನ ದಿನಗಳಲ್ಲಿ ಈ ನೂತನ ಸಮಿತಿಯ ನೇತೃತ್ವದಲ್ಲಿ ಕಳ್ಳಿಗೆ ಗ್ರಾಮ ಪಂಚಾಯತ್ ಹಾಗೂ ಕ್ಷೇತ್ರದ ಶಾಸಕರನ್ನು ಭೇಟಿ ಮಾಡಿ ರುದ್ರಭೂಮಿಯ ನವೀಕರಣಕ್ಕೆ ಅಗತ್ಯವಿರುವ ಸರ್ಕಾರಿ ಅನುದಾನವನ್ನು ಕೋರಿ ಅರ್ಜಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

Leave a Comment