ದೇವರಪಾಲು: ವೈದ್ಯನಾಥ ಕ್ರಿಕೆಟರ್ಸ್ ತಂಡದ ಕಛೇರಿ "ಬೆಳಕು" ಉದ್ಘಾಟನೆ.

Coastal Bulletin
ದೇವರಪಾಲು: ವೈದ್ಯನಾಥ ಕ್ರಿಕೆಟರ್ಸ್ ತಂಡದ ಕಛೇರಿ "ಬೆಳಕು" ಉದ್ಘಾಟನೆ.

ಬಂಟ್ವಾಳ :ವೈದ್ಯನಾಥ ಕ್ರಿಕೆಟರ್ಸ್ ದೇವರಪಾಲು ಸುಜೀರು ಇದರ ರಜತ ಮಹೋತ್ಸವದ ಸವಿನೆನಪಿಗಾಗಿ ತಂಡದ ಕಛೇರಿ "ಬೆಳಕು" ಇದರ ಉದ್ಘಾಟನಾ ಸಮಾರಂಭ ಪುದು ಗ್ರಾಮದ ದೇವರಪಾಲು ಎಂಬಲ್ಲಿ ನಡೆಯಿತು.

ವೇದಮೂರ್ತಿ ಶ್ರೀ ಗಣೇಶ್ ಭಟ್ ಸುಜೀರು ಇವರು ಗಣಹೋಮ ಹಾಗೂ ದೀಪ ಬೆಳಗಿಸಿ ಕಟ್ಟಡ ಉದ್ಘಾಟನೆ ಮಾಡಿ ಶುಭಾಶಯ ಕೋರಿದರು

ಫರಂಗಿಪೇಟೆ ಶ್ರೀ ವೀರಾಂಜನೇಯ ದೇವಸ್ಥಾನದ  ಆಡಳಿತ ಸಮಿತಿ ಅಧ್ಯಕ್ಷ ಚಂದ್ರಶೇಖರ ಗಾಂಭೀರ,ಸುಜೀರುಗುತ್ತು ಮುಖ್ಯ ಅತಿಥಿಯಾಗಿ ಭಾಗವಹಿಸಿದರು

ಈ ಸಂದರ್ಭದಲ್ಲಿ ಸತೀಶ್ ಪೂಜಾರಿ ಸುಜೀರು, ಜನಾರ್ದನ ದೇವರಪಾಲು, ದೇವಕಿ ಪೂಜಾರ್ತಿ,ತಂಡದ ಅಧ್ಯಕ್ಷರಾದ ಸತೀಶ್ ಮೆಜಪೆ ತನ್ನ ಹಳೆಯ ಮನೆಯನ್ನು ತಂಡದ ಕಛೇರಿಗಾಗಿ ನೀಡಿದ ಪ್ರೇಮಾ ಪೂಜಾರ್ತಿ ವೇದಿಕೆಯಲ್ಲಿದ್ದರು

ಪ್ರಮುಖರಾದ ತಂಡದ

ಗೌರವ ಅಧ್ಯಕ್ಷರಾದ ಸಂಜೀವ ಪೂಜಾರಿ ಕೇಸನಮೊಗರು,ಪ್ರಧಾನ ಕಾರ್ಯದರ್ಶಿ ವಿನೇಶ್ ಸುಜೀರು, ರಜತ ಮಹೋತ್ಸವ ಸಮಿತಿ ಅಧ್ಯಕ್ಷರಾದ ರವೀಂದ್ರ ಕಲ್ಲಾಜೆ,ಸುನೀಲ್ ಕೊಟ್ಟಾರಿ ಅಡ್ಯಾರ್,ತಾರನಾಥ ಹೊಳೆಬದಿ,ಪ್ರಕಾಶ್ ಮೆಜಪೆ, ಜಯ ದೇವರಪಾಲು, ಪ್ರಸಾದ್ ಕೇಸನಮೊಗರು, ಲೋಕೇಶ್ ಕಲ್ಲಾಜೆ,ಪಂ.ಸದಸ್ಯರಾದ ವಿಶು ಕುಮಾರ್, ಪ್ರಸಾದ್ ಸುಜೀರು,ಕೇಶವ ಪೂಜಾರಿ ಕಲ್ಲಾಜೆ, ಮಹೇಶ್ ಕೊಡಂಗೆ,ಬೇಬಿ ಬೆಳ್ಚಾಡ,ಪವನ್,ಕೀರ್ತನ್,ಕಿರಣ್ ಉಪಸ್ಥಿತರಿದ್ದರು.

ಕಳೆದ 25 ವರ್ಷಗಳಿಂದಲೂ ತಂಡದ ಸಂಪೂರ್ಣ ಜವಾಬ್ದಾರಿಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಮಾಜಿ ಅಧ್ಯಕ್ಷ ಕಿಶೋರ್ ಸುಜೀರು ಕಾರ್ಯಕ್ರಮ ನಿರ್ವಹಿಸಿದರು

Leave a Comment