ಬಂಟ್ವಾಳ :ದ ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ನವೋದಯ ಮಿತ್ರ ಕಲಾ ವೃಂದ ರಿ ನೆತ್ತರಕೆರೆ ಇದರ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಜಗದೀಶ ಎನ್ ಹಾಗೂ ಪ್ರ ಕಾರ್ಯದರ್ಶಿಯಾಗಿ ಮಹೇಶ್ ಎನ್ ಸತತ ಎರಡನೇ ಅವಧಿಗೆ ಮರು ಆಯ್ಕೆಯಾಗಿದ್ದಾರೆ. ಜು. 5ರಂದು ಸಂಘದ ಕಚೇರಿಯಲ್ಲಿ ನಡೆದ ವಾರ್ಷಿಕ ಮಹಾ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಇತರ ಪದಾಧಿಕಾರಿಗಳ ವಿವರ :
ಗೌರವಧ್ಯಕ್ಷ ಪಿ ಸುಬ್ರಮಣ್ಯ ರಾವ್, ಸಂಚಾಲಕ ದಾಮೋದರ ಎನ್, ಉಪಾಧ್ಯಕ್ಷ ಸಂತೋಷ್ ಕುಲಾಲ್ ನೆತ್ತರಕೆರೆ, ಕೋಶಾಧಿಕಾರಿ ರಂಜಿತ್ ದರ್ಖಾಸ್, ಜೊತೆ ಕಾರ್ಯದರ್ಶಿ ಚಂದ್ರಶೇಖರ ಎನ್, ಕ್ರೀಡಾ
ಕಾರ್ಯದರ್ಶಿ ಪ್ರವೀಣ್ ಎನ್ ಆಯ್ಕೆಯಾದರು.
ಸಲಹೆಗಾರರಾಗಿ ಬಿ ಸುರೇಶ್ ಭಂಡಾರಿ ಅರ್ಬಿ,ಭಾಸ್ಕರ ಕುಲಾಲ್, ಸದಾನಂದ ಪೂಜಾರಿ, ಚಂದ್ರಹಾಸ ಎನ್ , ಸುರೇಶ್ ಕುಲಾಲ್, ರಾಮ ಪೂಜಾರಿ, ಹಾಗೂ ಕಾರ್ಯಕಾರಿ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು.











