ಕಮ್ಮಾಜೆ :ನಾಗಶ್ರೀ ಮಾತೃ ವೃಂದದ ಅಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ.

Coastal Bulletin
ಕಮ್ಮಾಜೆ :ನಾಗಶ್ರೀ ಮಾತೃ ವೃಂದದ ಅಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ.

ಬಂಟ್ವಾಳ :ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಾಡುಗಳ ಮಹತ್ವವನ್ನು ಯುವ ಪೀಳಿಗೆಗೆ ತಿಳಿಸಿಕೊಡುವುದು ಅಗತ್ಯವಾಗಿದೆ. ಕಾಡಿನ ವಿನಾಶದಿಂದ ಉಂಟಾಗುವ ತೊಂದರೆಗಳನ್ನು ಪ್ರಸ್ತುತ ಜಗತ್ತಿನಲ್ಲಿ ಕಾಣಬಹುದು. ಮುಂದಿನ ದಿನಗಳಲ್ಲಿ ಆಕ್ಸಿಜನ್ ಸಿಲಿಂಡರ್  ಹಿಡಿದುಕೊಂಡು ಓಡಾಡುವ ಸ್ಥಿತಿ ಬರಬಾರದೆಂದರೆ ಸಸಿಗಳನ್ನು ನೆಡುವುದು ಅಗತ್ಯವಾಗುತ್ತದೆ. ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೊಳಲಿ ವಲಯದ ಮೇಲ್ವಿಚಾರಕಿ ರೂಪ ರೈ ತಿಳಿಸಿದರು.

ಅವರು ಜು.5ರಂದು ಭಾನುವಾರ ನಾಗಶ್ರೀ ಮಿತೃ ವೃಂದ ಚಾರಿಟೆಬಲ್ ಟ್ರಸ್ಟ್ ಮತ್ತು ನಾಗಶ್ರೀ ಮಾತೃ ವೃಂದ ಕಮ್ಮಾಜೆ ಇದರ ಜಂಟಿ ಆಶ್ರಯದಲ್ಲಿ ಕಮ್ಮಾಜೆಯ ವಿವೇಕ ಭವನದಲ್ಲಿ ವನಮಹೋತ್ಸವ 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಕ್ಷ ತೆಂಕಬೆಳ್ಳೂರು ಶಕ್ತಿ ಕೇಂದ್ರ ಮುರಳೀಧರ ಶೆಟ್ಟಿ, ನಾಗಶ್ರೀ ಮಿತೃ

ವೃಂದ ಸಂಘದ ಮತ್ತು ವನಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷ ಹರೀಶ್ ಮುಡೈಕೋಡಿ ಮತ್ತು ಮಾತೃ ವೃಂದ ಕಮ್ಮಾಜೆ ಸಂಘದ ಅಧ್ಯಕ್ಷೆ ಸೌಮ್ಯಾ ತಿಮ್ಮಪ್ಪ ಕಮ್ಮಾಜೆ ಉಪಸ್ಥಿತರಿದ್ದರು.ಅತಿಥಿಗಳು ಸಸಿಯನ್ನು ನೆಟ್ಟು ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಗ್ರಾಮಸ್ಥರಿಗೆ ಸಸಿಯನ್ನು ವಿತರಿಸಲಾಯಿತು.

ಬಾಲಗೋಕುಲದ ವಿದ್ಯಾರ್ಥಿನಿಯರು ಪ್ರಾರ್ಥಸಿ, ನಾಗಶ್ರೀ ಸಂಘದ ಕ್ರೀಡಾ ಕಾರ್ಯದರ್ಶಿ ರಂಜಿತ್ ಸ್ವಾಗತಿಸಿ ವಂದಿಸಿದರು.

Leave a Comment