ಬಂಟವಾಳ ಬಂಟರ ಸಂಘ ಅಶ್ರಯದಲ್ಲಿ ಕ್ರೀಡೋತ್ಸವ ಉದ್ಘಾಟನೆ. ಕ್ರೀಡೆ ಹಾಗೂ ಅರೋಗ್ಯ ಒಂದೇ ನಾಣ್ಯದ ಮುಖ: ಸದಾನಂದ ಭಂಡಾರಿ

Coastal Bulletin
ಬಂಟವಾಳ ಬಂಟರ ಸಂಘ ಅಶ್ರಯದಲ್ಲಿ ಕ್ರೀಡೋತ್ಸವ ಉದ್ಘಾಟನೆ. ಕ್ರೀಡೆ ಹಾಗೂ ಅರೋಗ್ಯ ಒಂದೇ ನಾಣ್ಯದ ಮುಖ: ಸದಾನಂದ ಭಂಡಾರಿ

ಬಂಟ್ವಾಳ:ಕ್ರೀಡೆ ಹಾಗೂ ಅರೋಗ್ಯ ಒಂದೇ ನಾಣ್ಯದ ಎರಡು ಮುಖಗಳು, ಕ್ರೀಡಾ ಹವ್ಯಾಸ ಬೆಳೆಸಿಕೊಂಡು ಅರೋಗ್ಯ ಕಾಪಾಡಿಕೊಳ್ಳಿ, ಸಮುದಾಯದ ಎಲ್ಲಾ ವರ್ಗದವರನ್ನು ಒಟ್ಟು ಸೇರಿಸಿ ಒಗಟ್ಟಿನಿಂದ ಬೆರೆಯುವ ಮೂಲಕ ಬಂದುಗಳ ನಡುವಿನ ಬಾಂದವ್ಯದ ಸಂಕೇತವಾಗಿ ಕ್ರಿಡೋತ್ಸವ ಆಯೋಜಿಸಿರುವುದು ಶ್ಲಾಘನೀಯ, ನಿರಂತರ ಸಮಾಜದ ಕಟ್ಟ ಕಡೆಯ ವ್ಯಕ್ತಿಗೋ ಸಹಾಯ ಮಾಡುವ ಮೂಲಕ ಬಂಟವಾಲ ಬಂಟರ ಸಂಘ ಮಾದರಿಯಾಗಿದೆ ಎಂದು ಬೆಂಗಳೂರರಿನ ಉದ್ಯಮಿ ಸದಾನಂದ ಭಂಡಾರಿ ಹೇಳಿದರು.

ಅವರು ಬಂಟರ ಸಂಘ ಬಂಟವಾಳ ತಾಲೂಕು (ರಿ) ಇದರ ನೇತೃತ್ವದಲ್ಲಿ ಬಂಟವಾಳ ತಾಲೂಕಿನ ಎಲ್ಲಾ ವಲಯ ಬಂಟರ ಸಂಘಗಳ ಸಹಯೋಗದೊಂದಿಗೆ "ಬಂಟವಾಳದ ಬಂಟರ ಭವನ”ದ ವಠಾರದಲ್ಲಿ ಜ. 11ರಂದು ಆದಿತ್ಯವಾರ ಜರುಗಿದ "ಕ್ರೀಡೋತ್ಸವ" ಉದ್ಘಾಟಿಸಿ ಮಾತನಾಡಿದರು.


ತಾಲೂಕು ಬಂಟರ ಸಂಘದ ಅಧ್ಯಕ್ಷ ಬದಿಗುಡ್ಡೆ ಜಗನ್ನಾಥ ಚೌಟ ಪ್ರಾಸ್ತವಿಕವಾಗಿ ಮಾತನಾಡಿ 2005ರಲ್ಲಿ ಪ್ರಾರಂಭವಾದ ತಾಲೂಕು ಬಂಟರ ಸಂಘವು ನಿರಂತರ ಸಾಮಾಜಿಕ,ಆರ್ಥಿಕ, ಶೈಕ್ಷಣಿಕ ಸೇವೆಯನ್ನು ಸಮಾಜಕ್ಕೆ ನೀಡುತ್ತಾ ಬಂದಿದೆ, ವಿದ್ಯಾರ್ಥಿ ವೇತನ, ಶೈಕ್ಷಣಿಕ, ಔದ್ಯೋಗಿಕ ಮಾಹಿತಿ ಕಾರ್ಯಾಗಾರವನ್ನು ನಡೆಸುತ್ತ ಬರುತ್ತಿದ್ದೆ, ತಾಲೂಕಿನ 84ಗ್ರಾಮದ 15ವಲಯಗಳನ್ನು ತಾಲೂಕು ಸಂಘ ಹೊಂದಿದೆ ಎಂದು ಹೇಳಿ, ಅತಿಥಿಗಳನ್ನು

ಸ್ವಾಗತಿಸಿದರು.

ಈ ಸಂದರ್ಭದಲ್ಲಿ 15ವಲಯಗಳಿಂದ ಆಕರ್ಷಕ ಪಥಸಂಚಲನೆ ನಡೆಯಿತು.

ವೇದಿಕೆಯಲ್ಲಿ ಸ್ಥಾಪಕ ಅಧ್ಯಕ್ಷರಾದ ಕಿರಣ್ ಹೆಗ್ಡೆ, ನಿಕಟ ಪೂರ್ವ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಉಪಾಧ್ಯಕ್ಷ ಐತಪ್ಪ ಆಳ್ವ ಸುಜೀರುಗುತ್ತು, ಕಾರ್ಯದರ್ಶಿ ಸದಾನಂದ ಆಳ್ವ ಕಂಪ, ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕುಳ, ಜೊತೆ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಸಜಿಪ, ಜೊತೆ ಕೋಶಾಧಿಕಾರಿ ವಿದ್ಯಾ ಎ ರೈ, ಮಹಿಳಾ ವಿಭಾಗದ ಅಧ್ಯಕ್ಷೆ ಸುಜಾತ ಪಿ ರೈ,ಯುವ ವಿಭಾಗದ ಅಧ್ಯಕ್ಷ ಗೋಕುಲ್ ಭಂಡಾರಿ ಬಿಜಂದಾರಗುತ್ತು, ಕ್ರೀಡೋತ್ಸವ ಸಮಿತಿಯ ಸಂಚಾಲಕ ಗಂಗಾಧರ ರೈ ತುಂಗೆರೆಕೊಡಿ ಹಾಗೂ 15ವಲಯಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕುಳ ಧನ್ಯವಾದವಿತ್ತು, ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.

Leave a Comment