Coastal Bulletin

ಮಂಗಳೂರಿನಲ್ಲಿ ಐಟಿ ಪಾರ್ಕ್ ನಿರ್ಮಾಣವಾಗಬೇಕೆಂಬ ಬೇಡಿಕೆ ಇದ್ದು, ಮುಂದಿ‌ನ ದಿನಗಳಲ್ಲಿ ಕೇಂದ್ರ ಸರ್ಕಾರ ಈ ಭಾಗದಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ವಿಶೇಷ ಒತ್ತು ನೀಡಲಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಾಶೀರ್ವಾದ ಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜೀವ ಚಂದ್ರಶೇಖರ್ 'ನಾನು ಮಣಿಪಾಲದಲ್ಲಿ ಕಂಪ್ಯೂಟರ್ ಇಂಜಿನಿಯರ್ ಮಾಡಿದ್ದು, ಕರಾವಳಿಯ ಭಾಗದ ಜೊತೆಗೆ ಉತ್ತಮ ಸಂಬಂಧವಿದೆ.ಈ ಭಾಗಕ್ಕೆ ಸಾಧ್ಯವಾದಷ್ಟು ನೆರವು ನೀಡುವುದು ನನ್ನ ಕರ್ತವ್ಯ. ಮಂಗಳೂರಿನಲ್ಲಿ ಐಟಿ ಪಾರ್ಕ್ ಸ್ಥಾಪನೆಯ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಈ ಹಿಂದೆಯೇ ಬೇಡಿಕೆ ಸಲ್ಲಿಸಿದ್ದಾರೆ. ಆದಷ್ಟು ಶೀಘ್ರ ಐಟಿ ಪಾರ್ಕ್ ತರುವ ಎಲ್ಲಾ ಪ್ರಯತ್ನ ಮಾಡಲಾಗುವುದು. ಅಲ್ಲದೆ ಐಟಿ ಉದ್ದಿಮೆಗೆ ಬೇಕಾದ ಮೂಲಸೌಕರ್ಯಗಳ ಅಭಿವೃದ್ಧಿಗೆ ಕೇಂದ್ರ ಸಾಧ್ಯವಾದಷ್ಟು ನೆರವು ನೀಡಲಿದೆ' ಎಂದರು.

ದೇಶವನ್ನು ಸತತವಾಗಿ ಕೋರೋನಾ

ಕಾಡಿದೆ. ಕೊರೋನೋತ್ತರ ಭಾರತದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೂ ಇಂಟರ್‌ನೆಟ್ ಅವಶ್ಯಕತೆ ಇದೆ. ಆದ್ದರಿಂದ ಭಾರತ್ ನೆಟ್ ಯೋಜನೆಯಲ್ಲಿ ಪ್ರತಿ ಜಿಲ್ಲೆಯ ಒಂದು ಹಳ್ಳಿಗೆ ಇಂಟರ್‌ನೆಟ್ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ.ತಂತ್ರಜ್ಞಾನದಲ್ಲಿ ನಾವು ಜಗತ್ತಿಗೇ ನಾಯಕರಾಗಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿಯವರ ಗುರಿಯಾಗಿದೆ. ಡಿಜಿಟಲ್ ಗ್ರಾಮ ಎನ್ನುವ ಕಲ್ಪನೆ ಸರ್ಕಾರದ ಪೈಲೆಟ್ ಪ್ರಾಜೆಕ್ಟ್ ಆಗಿದ್ದು, ಕರ್ನಾಟಕದ ಪ್ರತಿ ಹಳ್ಳಿಗೂ ಇಂಟರ್ ನೆಟ್ ಸಂಪರ್ಕ ಈ ಯೋಜನೆಯ ಉದ್ದೇಶ. ಎಲ್ಲ ಜಿಗಳಲ್ಲೂ ಒಂದು ಹಳ್ಳಿಯನ್ನು ಈ ಯೋಜನೆಗೆ ಆಯ್ಕೆ ಮಾಡಿದ್ದೇವೆ. ಈಗಾಗಲೇ ಈ ಡಿಜಿಟಲ್ ಗ್ರಾಮ ಯೋಜನೆ ಆರಂಭವಾಗಿದೆ ಎಂದು ಸಚಿವರು ಹೇಳಿದರು.

Leave a Comment