ಬೆಂಗಳೂರು:ಪದವಿ ಪೂರ್ವ ಕಾಲೇಜು ಆರಂಭಕ್ಕೆ ಮಾರ್ಗಸೂಚಿ ಪ್ರಕಟ ಮಾಡಲಾಗಿದೆ. ಕಾಲೇಜು ಆರಂಭಿಸುವ ಕುರಿತು ಸರ್ಕಾರದಿಂದ ಗೈಡ್ಲೈನ್ಸ್ ಬಿಡುಗಡೆ ಆಗಿದ್ದು ಶೇಕಡಾ 2 ಕ್ಕಿಂತ ಕಡಿಮೆ ಕೊರೋನಾ ಪಾಸಿಟಿವಿಟಿ ಇರುವ ಜಿಲ್ಲೆಗಳಲ್ಲಿ ಕಾಲೇಜು ತೆರೆಯಲು ಸೂಚಿಸಲಾಗಿದೆ.
1.ವಾರದ ಮೊದಲ 3ದಿನ ಶೇಕಡಾ 50 ರಷ್ಟು ವಿದ್ಯಾರ್ಥಿಗಳಿಗೆ ಕ್ಲಾಸ್ ಮಾಡಬೇಕು.
2.ಶೇಕಡಾ 50 ರಷ್ಟು ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರು ಆಗಬೇಕು. ಉಳಿದ ಶೇಕಡಾ 50 ರಷ್ಟು ವಿದ್ಯಾರ್ಥಿಗಳಿಗೆ ಮನೆಯಲ್ಲೇ ಆನ್ಲೈನ್ ತರಗತಿ ನಡೆಸುವುದು.
3.ಗುರುವಾರ, ಶುಕ್ರವಾರ, ಶನಿವಾರ ಉಳಿದ ಮಕ್ಕಳಿಗೆ ಕ್ಲಾಸ್ ನಡೆಸುವ ಬಗ್ಗೆ ಸೂಚನೆ ಕೊಡಲಾಗಿದೆ. ಹೀಗೆ ಮೊದಲ ಮೂರು ದಿನ ಭೌತಿಕ ತರಗತಿಗೆ, ನಂತ್ರದ ಮೂರು ದಿನ ಆನ್ ಲೌನ್ ತರಗತಿಗೆ ಶೇ.50ರಂತೆ ಹಾಜರಾಗಿ, ನಿರಂತರ ಪಾಠ ಕೇಳಿಕೊಳ್ಳುವಂತೆ ಕ್ರಮವಹಿಸುವುದು.
4.ಯಾವುದೇ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 100ಕ್ಕಿಂತ ಕಡಿಮೆಯಿದ್ದು, ವಿಶಾಲವಾದ ಕೊಠಡಿಗಳು ಲಭ್ಯವಿದ್ದಲ್ಲಿ, ಎಲ್ಲ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನು ಎಲ್ಲಾ ಸರಕ್ಷತಾ ಕ್ರಮಗಳೊಂದಿಗೆ ಪೂರ್ಣ ಪ್ರಮಾಣದಲ್ಲಿ ನಡೆಸುವುದು. ಅಂದರೆ ವಾರ ಪೂರ್ಣ ಭೌತಿಕ ತರಗತಿಗಳು
ನಡೆಯುತ್ತವೆ. ವಿದ್ಯಾರ್ಥಿಗಳ ಹಾಜರಾತಿಯನ್ನು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಕಡ್ಡಾಯಗೊಳಿಸುವುದು.
5.ಪ್ರತಿ ತರಗತಿ, ಕೊಠಡಿಯಲ್ಲಿ ನಿಯಮಾನುಸಾರ ಅಂತರ ಕಾಪಾಡಿಕೊಂಡು ಕೊಠಡಿಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳ ಸಂಖ್ಯೆಯನ್ನು ನಿಗದಿ ಪಡಿಸಿಕೊಳ್ಳುವುದು. 6.ಉಪನ್ಯಾಸಕರು ಮತ್ತು ಕಾಲೇಜಿನ ಸಿಬ್ಬಂದಿಗಳಿಗೆ ಕಡ್ಡಾಯ ಸೂಚನೆ ಪ್ರಥಮ ಆದ್ಯತೆಯಾಗಿ ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಗಳು ವ್ಯಾಕ್ಸಿನೇಷನ್ ಪಡೆದುಕೊಳ್ಳುದು ಕಡ್ಡಾಯ
6.ವಿದ್ಯಾರ್ಥಿಗಳು ತರಗತಿ ಮತ್ತು ಕಾಲೇಜು ಆವರಣದಲ್ಲಿ ಗುಂಪುಗೂಡಬಾರದು ಕನಿಷ್ಠ 6 ಅಡಿಗಳ ಭೌತಿಕ ಅಂತರದ ನಿಯಮವನ್ನು ಪಾಲಿಸುವುದು. ಮುಖ ಕವಚ, ಮಾಸ್ಕ್ ಗಳನ್ನು ಕಡ್ಡಾಯವಾಗಿ ಬಳಕೆ ಮಾಡುವುದು. ಪದೇ ಪದೇ ಕೈಗಳನ್ನು ಸೋಪಿನಿಂದ ತೊಳೆಯುವುದು. ಕೆಮ್ಮುವಾಗ, ಸೀನುವಾಗ ಕಡ್ಡಾಯವಾಗಿ ಮುಖಕ್ಕೆ ಕರವಸ್ತ್ರ, ಟಿಶ್ಯು ಪೇಪರ್ ಬಳಸಬೇಕು. ಎಲ್ಲೆಂದರಲ್ಲಿ ಉಗುಳುವುದನ್ನು ಕಡ್ಡಾಯವಾಗಿ ನಿಷೇಧಿಸುವುದು.














