ಕಡಬ: ಯುವತಿಯೊಬ್ಬಳ ಹೆಸರು ಮತ್ತು ಪೋಟೋ ಬಳಸಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ತೆರೆದ ಆರೋಪದಲ್ಲಿ ಕಡಬದ ಯುವಕನೋರ್ವನನ್ನು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದಾರೆ.
ಕಡಬ ತಾಲೂಕಿನ ನೂಜಿಬಾಳ್ತಿಲ ನಿವಾಸಿ,ಮಂಗಳೂರಿನಲ್ಲಿ ಟ್ರೇಡಿಂಗ್ ವ್ಯವಹಾರ ನಡೆಸುತ್ತಿರುವ ಸಂಜಯ್ ಕೃಷ್ಣ ಬಂಧಿತ ಆರೋಪಿ.
ಪಶ್ಚಿಮ ಬಂಗಾಳ ಮೂಲದ, ಸದ್ಯ ಬೆಂಗಳೂರಿನಲ್ಲಿ ಎಮ್ ಬಿ ಬಿ ಎಸ್ ವ್ಯಾಸಂಗ ಮಾಡುತ್ತಿರುವ ಯುವತಿಯೊಬ್ಬಳ ಹೆಸರಿನ ನಕಲಿ ಸಾಮಾಜಿಕ ಜಾಲತಾಣ ಖಾತೆ ತೆರೆದ ಆರೋಪದಲ್ಲಿ ಈತನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ತನ್ನ
ಹೆಸರು ಮತ್ತು ಪೋಟೋ ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ತೆರದ ಬಗ್ಗೆ ಯುವತಿಯು ಪಶ್ಚಿಮ ಬಂಗಾಳದಲ್ಲಿ ಸೈಬರ್ ಕ್ರೈಂನಡಿ ದೂರು ದಾಖಲಿಸಿದ್ದಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಕತ್ತಾ ಪೊಲೀಸರು ಇಂದು ಬಾಡಿ ವಾರೆಂಟ್ ಪಡೆದು ಕಡಬಕ್ಕೆ ಆಗಮಿಸಿ ಆರೋಪಿ ಸಂಜಯ್ ಕೃಷ್ಣನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.















