Coastal Bulletin

ಜಮ್ಮು & ಕಾಶ್ಮೀರ : ಕೋವಿಡ್ ಎರಡನೇ ಅಲೆಯಿಂದಾಗಿ ಏಪ್ರಿಲ್ 1 ರಿಂದ ಪ್ರಾರಂಭವಾದ ಯಾತ್ರೆಯ ನೋಂದಣಿಯನ್ನು ಏಪ್ರಿಲ್ 22 ರಿಂದ ತಡೆಹಿಡಿಯಲಾಗಿತ್ತು ಹಾಗೂ ಇಂದು ಯಾತ್ರೆಯನ್ನು ರದ್ದುಗೊಳಿಸಲಾಗಿದೆ.

ದೇಶದ ಪ್ರಸ್ತುತ ಕೋವಿಡ್ ಪರಿಸ್ಥಿತಿಯಿಂದಾಗಿ, ಜಮ್ಮು ಮತ್ತು ಕಾಶ್ಮೀರ ಸರ್ಕಾರ ಸೋಮವಾರ ವಾರ್ಷಿಕ ಅಮರನಾಥ ಯಾತ್ರೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ.  ಹಿಂದಿನ ಪದ್ಧತಿಯಂತೆ ಎಲ್ಲಾ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳನ್ನು ಪವಿತ್ರ ಗುಹೆ ದೇಗುಲದಲ್ಲಿ ನಡೆಸಲಾಗುವುದು ಎಂದು

ಶೈನ್ ಬೋರ್ಡ್ ತಿಳಿಸಿದೆ.  ದೇಗುಲ ಮಂಡಳಿಯೊಂದಿಗೆ ಚರ್ಚಿಸಿದ ನಂತರ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

 ಆದರೆ, ಭಕ್ತರಿಗೆ “ಆರತಿ” ಆನ್‌ಲೈನ್‌ನಲ್ಲಿ ಮೂಲಕ ದೊರಕಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

Leave a Comment