Coastal Bulletin

ಮಂಗಳೂರು : ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಆಡಳಿತ ಇದ್ದರೂ ಒಳ್ಳೆ‌ ಸರ್ಕಾರ ಕೊಡೋಕೆ ಆಗಿಲ್ಲ. ಹಾಗಾಗಿ ಮುಖ್ಯಮಂತ್ರಿ ಬದಲಾವಣೆ ಮಾಡುತ್ತಿದ್ದಾರೆ.‌ ಡಬಲ್ ಇಂಜಿನ್ ಸರ್ಕಾರ ಇದ್ರು ಒಳ್ಳೆ ಆಡಳಿತ ಸಾಧ್ಯವಾಗಿಲ್ಲ ಅಂದ್ರ ಇವ್ರು ಆಡಳಿತದಲ್ಲಿ ಯಾಕಿರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ  ಸಿದ್ದರಾಮಯ್ಯ, ಮುಖ್ಯಮಂತ್ರಿ ಗಳು ಎದ್ದು ಹೋಗುವ ಸಂದರ್ಭದಲ್ಲಿ ತರಾತುರಿಯಲ್ಲಿ ಎಲ್ಲಾ ಫೈಲ್ ಗಳ ಸಹಿ ಆಗ್ತಿದೆ. ಅದರಲ್ಲೂ  ನೀರಾವರಿ ಇಲಾಖೆಯಲ್ಲಿ ಎಷ್ಟೋ ಫೈಲ್ ಕ್ಲಿಯರ್ ಆಗ್ತಿದೆ. ಅಸೆಂಬ್ಲಿ ಬಂದಾಗ ದಾಖಲೆಯೆಲ್ಲ ತೆಗೆದು ಮಾತಾಡ್ತೇನೆ ಅಂತ ಹೇಳಿದ್ದಾರೆ.

ಕಾಂಗ್ರೆಸ್ ಸೇರೋರನ್ನು ಸೇರಿಸ್ತೀರಾ

ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ ಯಾರಾದರೂ ಕಾಂಗ್ರೆಸ್ ಬರೋರಿದ್ರೆ ಅರ್ಜಿ ಸಲ್ಲಿಸಲಿ ಆಮೇಲೆ ಕೂತು ಮಾತಾನಾಡೋಣ. ಕಾಂಗ್ರೆಸ್ ಪಾರ್ಟಿಗೆ ಬರಬೇಕು ಅಂತಾ ಇಷ್ಟ ಇರೋರು ಬಹಳಷ್ಟು ಜನ ಇದ್ದಾರೆ. ಅವರ ಹೆಸರು ಹೇಳೋದಕ್ಕೆ ಹೋಗಲ್ಲ ಎಂದರು.


Leave a Comment