Coastal Bulletin

ಕೇರಳದಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿದ್ದು, ಕಣ್ಣೂರಿನಲ್ಲಿ ಬೀದಿನಾಯಿಗಳ ದಾಳಿಯಿಂದ ಮಗು ಸಾವನ್ನಪ್ಪಿದ ಬೆನ್ನಲ್ಲೇ ಬೀದಿ ನಾಯಿಗಳಿಗೆ ದಯಾಮರಣ ನೀಡಲು ಅನುಮತಿ ನೀಡುವಂತೆ ಸ್ಥಳೀಯ ಪಂಚಾಯತಿ ಆಡಳಿತಗಳು ಸುಪ್ರೀಂ ಕೋರ್ಟ್ ಮೊರೆಹೋಗಿವೆ.

 ಸಲ್ಲಿಸಿರುವ ಅರ್ಜಿಯಲ್ಲಿ ಅರ್ಜಿದಾರರು ಹಲವು ಅಂಶಗಳನ್ನು ಉಲ್ಲೇಖಿಸಿದ್ದು, ಪ್ರಮುಖವಾಗಿ ಜೂನ್ 11 ,2023 ರಂದು ಕಣ್ಣೂರಿನಲ್ಲಿ  11 ವರ್ಷದ ಮಗುವನ್ನು ಬೀದಿನಾಯಿಗಳ ಗುಂಪೊ0ದು ದಾಳಿ ಮಾಡಿ ಕಚ್ಚಿ ಎಳೆದಾಡಿ ಕೊಂಡು ಹಾಕಿದ್ದವು. ಕಳೆದ ವರ್ಷ ಕೇರಳ ಕೊಟ್ಟಾಯಂ ಜಿಲ್ಲೆಯಲ್ಲಿ 12 ವರ್ಷ ವಯಸ್ಸಿನ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ಗಂಭೀರವಾಗಿ ಹಾನಿ ಮಾಡಿದ್ದವು. 

2019ಲ್ಲಿ 5794ಬೀದಿ ನಾಯಿ ದಾಳಿ

ಪ್ರಕರಣಗಳು, 2020 ರಲ್ಲಿ 3951 ಪ್ರಕರಣಗಳು, 2021ರಲ್ಲಿ 7927 ಪ್ರಕರಣಗಳು, 2022ರಲ್ಲಿ ಅತೀ ಹೆಚ್ಚು ಅಂದರೆ 11776ಪ್ರಕರಣಗಳು ದಾಖಲಾಗಿವೆ. 2023ರಲ್ಲಿ ಜೂನ್ 19ರವರೆಗೆ 6276 ಪ್ರಕರಣಗಳು ಕಣ್ಣೂರಿನಲ್ಲಿ ವರದಿಯಾಗಿವೆ. 

ಅರ್ಜಿಯನ್ನು ಅಡ್ವೊಕೇಟ್ ಆನ್ ರೆಕಾರ್ಡ್ ಬಿಜು ಪಿ ರಾಮನ್ ಮೂಲಕ ರವಾನಿಸಲಾಗಿದೆ. ೨೦೧೫ರ ಕೇರಳ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಸಿವಿಲ್ ಮೇಲ್ಮನವಿಯಲ್ಲಿ ಮಧ್ಯಂತರ ಅರ್ಜಿಯನ್ನು ಸಲ್ಲಿಸಲಾಗಿದೆ.      


Leave a Comment