ಮು0ದಿನ ಎರಡು ವರ್ಷಗಳಲ್ಲಿ ಕೇರಳದ ಪ್ರತಿ ತಾಲೂಕಿನಲ್ಲಿ ಕನಿಷ್ಠ ಒಂದಾದರೂ ನಂದಿನಿ ಮಳಿಗೆಗಳನ್ನು ಆರಂಭ ಮಾಡುವ ಗುರಿ ಇರಿಸಿಕೊಂಡಿದ್ದೇವೆ. ಇದು ಇದು ಕೇರಳದ ಮಿಲ್ಮಾದೊಂದಿಗೆ ಪೈಪೋಟಿಯಲ್ಲಿಲ್ಲ, ಆದರೆ ಕೇರಳದಲ್ಲಿರುವ ಎರಡೂವರೆ ಲಕ್ಷ ಲೀಟರ್ ಹಾಲಿನ ಕೊರತೆಯ ಲಾಭವನ್ನು ಬಳಸಿಕೊಳ್ಳುತ್ತಿದ್ದೇವೆ ಎಂದು ಕೆಎಂಎಫ್ ಹೇಳಿದೆ.
ಕೇರಳ ಸಹಕಾರ ಹಾಲು ಒಕ್ಕೂಟದ ಅಥವಾ ಮಿಲ್ಮಾದಿಂದ ಕೊಂಚ ಪ್ರತಿರೋಧ ಎದುರಿಸಿದ್ದ ಕರ್ನಾಟಕದ ಕೆಎಂಎಫ್, ಕೇರಳದಲ್ಲಿ ದೊಡ್ಡ ಮಟ್ಟದಲ್ಲಿ ಮಾರುಕಟ್ಟೆ ವಶ ಮಾಡಿಕೊಳ್ಳುವ ನಿರ್ಧಾರ ಮಾಡಿದೆ. ಕರ್ನಾಟಕದ ಹಾಲು ಮಹಾಮಂಡಲದ ಬ್ರಾö್ಯಡ್ ಆಗಿರುವ ನಂದಿನಿ, ಮುಂದಿನ ಆರು ತಿಂಗಳಲ್ಲಿ ಕೇರಳದಲ್ಲಿ ಕನಿಷ್ಠ 25 ಮಳಿಗೆಗಳನ್ನು ಆರಂಭ ಮಾಡುವ ನಿರ್ಧಾರ ಕೈಗೊಂಡಿದೆ.
ಈ 25 ಮಳಿಗೆಗಳ
ಮೂಲಕ ನಿತ್ಯ 25,000 ಲೀಟರ್ ಹಾಲು ಪೂರೈಕೆ ಮಾಡುವ ಗುರಿ ಹೊಂದಲಾಗಿದೆ. ಎರಡು ವರ್ಷಗಳಲ್ಲಿ ಪ್ರತಿ ತಾಲ್ಲೂಕಿನಲ್ಲಿ ಒಂದು ಮಳಿಗೆಯನ್ನು ಆರಂಭ ಮಾಡಲಾಗುವುದು ಎಂದು ತಿಳಿಸಿದೆ. ಪ್ರಸ್ತುತ, ಎರ್ನಾಕುಲಂ ಜಿಲ್ಲೆಯ ಕಾಕ್ಕನಾಡ್ ಮತ್ತು ಎಲಮಕರ, ಮತ್ತನಂತಿಟ್ಟ ಪಂದಲ, ಇಡುಕ್ಕಿ ಜಿಲ್ಲೆಯ ತೊಡುಪುಳದಲ್ಲಿ ಮಳಿಗೆಗಳಿ ಕಾರ್ಯನಿರ್ವಹಿಸುತ್ತಿವೆ. ಶೀಘ್ರದಲ್ಲೇ ಕೋಝಿಕ್ಕೋಡ್, ತಲಶ್ಯೇರಿ ಮತ್ತು ಗುರುವಾಯೂರ್‌ನಲ್ಲಿಯೂ ಔಟ್‌ಲೇಟ್‌ಗಳನ್ನು















