ಬಾಯಾರು : ಹದಗೆಟ್ಟ ರಸ್ತೆ, ಕೇರಳ - ಕರ್ನಾಟಕ ಗಡಿಭಾಗದ ಜನರ ಪರದಾಟ!

Coastal Bulletin
ಬಾಯಾರು : ಹದಗೆಟ್ಟ ರಸ್ತೆ, ಕೇರಳ - ಕರ್ನಾಟಕ ಗಡಿಭಾಗದ ಜನರ ಪರದಾಟ!

ಬಾಯಾರು : ಹದಗೆಟ್ಟಿರುವ ರಸ್ತೆಗಳ ದುರಸ್ತಿಗೆ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯದಿಂದಾಗಿ ಗುಂಡಿ ಸಮಸ್ಯೆಯು ಕೇರಳ ಹಾಗೂ ಕರ್ನಾಟಕ ಗಡಿಭಾಗದ ಜನರನ್ನು ಬೆಂಬಿಡದೆ ಕಾಡುತ್ತಿದ್ದು, ಹಿಡಿ ಶಾಪ ಹಾಕುತ್ತಿದ್ದಾರೆ.

ಉಪ್ಪಳದಿಂದ ಬಾಯಾರು, ಒಡಿಯೂರು, ಕನ್ಯಾನದ ಮೂಲಕ ವಿಟ್ಲ, ಪುತ್ತೂರು ಹೋಗುವ ರಸ್ತೆಯು ಮಿತ್ತನಡ್ಕ, ಪಾದೆಕಲ್ಲು  ರಸ್ತೆಯು ತೀವ್ರ ಹದಗೆಟ್ಟಿದ್ದು, ರಸ್ತೆಯಲ್ಲಿನ ಗುಂಡಿಗಳು ಸುಗಮ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿವೆ. 

ದಿನದಿಂದ ದಿನಕ್ಕೆ ರಸ್ತೆಯ ಈ ರಸ್ತೆಯ ಮೂಲಕ ಅಸಂಖ್ಯಾತ ಸಾರ್ವಜನಿಕರು ಖಾಸಗಿ ವಾಹನ ಹಾಗೂ ಸಾರ್ವಜನಿಕ ವಾಹನಗಳನ್ನು ಅವಲಂಬಿತರಾಗಿದ್ದು ಮಳೆಗಾಲದ ಈ ಸಮಯದಲ್ಲಿ ರಸ್ತೆಯು ತೀವ್ರವಾಗಿ ಹಡೆಗೆಟ್ಟಿದೆ.  ರಸ್ತೆಯಲ್ಲಿ ಸೃಷ್ಟಿಯಾಗಿರುವ ದೊಡ್ಡ ಗುಂಡಿಗಳಿಂದ ಚಾಲಕರು ಜೀವಭಯದಿಂದ ವಾಹನ ಚಾಲನೆ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಬಾಯಾರು - ಕನಿಯಾಲ ಒಳ ರಸ್ತೆ

ಗುಂಡಿಮಯ

ಬಾಯಾರು ಪದವು ಕಲ್ಲಗದ್ದೆ ದಳಿಕುಕ್ಕು ಮೂಲಕ ಕನಿಯಾಲ ಸೇರುವ ಒಳ ರಸ್ತೆಯಲ್ಲಿ ರಸ್ತೆಯನ್ನು ಹುಡುಕಿ ವಾಹನ ಸಂಚಾರ ಮಾಡಬೇಕಾದ ಪರಿಸ್ಥಿತಿ ಇದೆ. ರಸ್ತೆ ಹಾಳಾಗಿ ವರ್ಷಗಳೇ ಕಳೆದರೂ ದುರಸ್ತಿಗೆ ಅಧಿಕಾರಿಗಳು ಇನ್ನೂ ಮನಸ್ಸು ಮಾಡಿಲ್ಲ. ಹೀಗಾಗಿ ರಸ್ತೆ ಮಧ್ಯೆ ದೊಡ್ಡ ಗುಂಡಿಗಳು ನಿರ್ಮಾಣವಾಗಿ ಸಂಚಾರಕ್ಕೆ ಅಸಾಧ್ಯದ ಪರಿಸ್ಥಿತಿ ತಂದೊಡ್ಡಿವೆ. ನೀರು ಹರಿದುಹೋಗಲು ಜಾಗವಿಲ್ಲದೆ ರಸ್ತೆಯಲ್ಲೇ ನೀರು ನಿಲ್ಲುತ್ತಿದೆ.


ಸಂಬಂಧಪಟ್ಟ ಅಧಿಕಾರಿಗಳು ಅದಷ್ಟು ಬೇಗ ಸುಗಮ ಸಂಚಾರಕ್ಕೆ ರಸ್ತೆಗಳನ್ನು ದುರಸ್ತಿ ಮಾಡುವತ್ತ ಗಮನಹರಿಸಬೇಕಾಗಿದೆ.

Leave a Comment