ಬಂಟ್ವಾಳ :ಭಾರತದ ದೇಶದ ಗೌರವಾನ್ವಿತ ಪ್ರಧಾನ ಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀಯವರು ಹಿಂದಿನ ಪ್ರಧಾನ ಮಂತ್ರಿಗಳ ಆಡಳಿತವಾಧಿಯ ಎಲ್ಲ ದಾಖಲೆಗಳನ್ನು ಹಿಂದಿಕ್ಕುವ ಮೂಲಕ ಭಾರತದ ರಾಜಕೀಯ ಇತಿಹಾಸದ ಪುಟಗಳಲ್ಲಿ ಅತ್ಯಂತ ಸುಧೀರ್ಘಾವಾಗಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ, ಇನ್ನಷ್ಟು ವರ್ಷಗಳ ಕಾಲ ದೀರ್ಘಾವಧಿ ಅಧಿಕಾರ ನಡೆಸಲು ಅದಲ್ಲದೆ ಭಾರತ ದೇಶದ ಹಿರಿಮೆಯನ್ನು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಗುರುತಿಸಿಕೊಳ್ಳುವ ಮೂಲಕ ವಿಶ್ವಗುರು ಭಾರತ ಮತ್ತು ಆತ್ಮ ನಿರ್ಭರ ಭಾರತ ಕಲ್ಪನೆ ಈಡೇರಲಿ ಎಂಬ ಆಶಯದೊಂದಿಗೆ ದೀರ್ಘಾಯಸ್ಸು ಆಯುರಾರೋಗ್ಯ ಸುಖ ಶಾಂತಿ ನೆಮ್ಮದಿ ಪ್ರಾಪ್ತಿಗೋಸ್ಕರ ಮೋಗರ್ನಾಡು ಸಾವಿರ ಸೀಮೆಯ ಒಡೆಯ ಶ್ರೀ ನೀಟಿಲಾಕ್ಷ ಸದಾಶಿವ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆಯೊಂದಿಗೆ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಭಾ.ಜ.ಪಾ ಜಿಲ್ಲಾ ಕಾರ್ಯದರ್ಶಿ ಹಾಗೂ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರು ದಿನೇಶ್ ಅಮ್ಟೂರು, ಬಂಟ್ವಾಳ ಮಂಡಲ ರೈತ ಮೋರ್ಚಾದ ಉಪಾಧ್ಯಕ್ಷರು ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಪ್ರಭಾಕರ ಶೆಟ್ಟಿ, ಬೈದರಡ್ಕ ಓ.ಬಿ.ಸಿ ಮೋರ್ಚಾದ ಜಿಲ್ಲಾ ಪ್ರಮುಖರಾದ ಗೋಪಾಲ ಪೂಜಾರಿ, ಬಂಟ್ವಾಳ ಮಂಡಲ ಯುವ ಮೋರ್ಚಾದ ಕಾರ್ಯದರ್ಶಿ ಕೌಶಿಲ್ ಶೆಟ್ಟಿ. ಬಂಟ್ವಾಳ ಮಂಡಲ ಓಬಿಸಿ
ಕಾರ್ಯದರ್ಶಿ ಯತೀಶ್ ಮೂಳೀಕೊಡಂಗೆ, ಶಕ್ತಿ ಕೇಂದ್ರದ ಪ್ರಮುಖರಾದ ಪ್ರವೀಣ್ ಕುಮಾರ್, ಬೂತ್ ಅಧ್ಯಕ್ಷರಾದ ಮಹಾಬಲ ಸಾಲಿಯನ್ ಮೂಳಿಕೊಡಂಗೆ, ಶೇಖರ್ ಕೊಟ್ಟಾರಿ ಅಮ್ಟೂರು, ಕಾರ್ಯದರ್ಶಿಗಳಾದ ಸಂದೀಪ್ ಶೆಟ್ಟಿ ಬೈದರಡ್ಕ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಆನಂದ ಎ ಶಂಭೂರು, ಜಿಲ್ಲಾ ಓ.ಬಿ.ಸಿ ಮೋರ್ಚಾದ ಪ್ರಮುಖರಾದ ಚಿದಾನಂದ ಪಟ್ಟೆಕೋಡಿ. ವಾಣಿ ಶೆಟ್ಟಿ. ಪ್ರಮುಖರಾದ ಉಮೇಶ್ ಟಿ ಪೂಜಾರಿ ಜೀತೇಶ್ ಶೆಟ್ಟಿ ಬಾಳಿಕೆ ಪವನ್ ಶೆಟ್ಟಿ ಬಾಳಿಕೆ ಪ್ರಮುಖರು ಉಪಸ್ಥಿತರಿದ್ದರು.















