ಪ್ರಧಾನಿ ನರೇಂದ್ರ ಮೋದಿ ಸುಧೀರ್ಘಾವಧಿ ಆಡಳಿತ ಸೇವೆ: ಶ್ರೀ ಕ್ಷೇತ್ರ ಪೊಳಲಿಯಲ್ಲಿ ವಿಶೇಷ ಪೂಜೆ, ಸಿಹಿ ಹಂಚಿ ಸಂಭ್ರಮ.

Coastal Bulletin
ಪ್ರಧಾನಿ ನರೇಂದ್ರ ಮೋದಿ ಸುಧೀರ್ಘಾವಧಿ ಆಡಳಿತ ಸೇವೆ: ಶ್ರೀ ಕ್ಷೇತ್ರ ಪೊಳಲಿಯಲ್ಲಿ ವಿಶೇಷ ಪೂಜೆ, ಸಿಹಿ ಹಂಚಿ ಸಂಭ್ರಮ.

ಬಂಟ್ವಾಳ :ಭಾರತದ ದೇಶದ ಗೌರವಾನ್ವಿತ ಪ್ರಧಾನ ಮಂತ್ರಿ  ಶ್ರೀ ನರೇಂದ್ರ ಮೋದಿಜೀಯವರು ಹಿಂದಿನ ಪ್ರಧಾನ ಮಂತ್ರಿಗಳ ಆಡಳಿತವಾಧಿಯ ಎಲ್ಲಾ  ದಾಖಲೆಗಳನ್ನು ಹಿಂದಿಕ್ಕುವ ಮೂಲಕ ಭಾರತದ ರಾಜಕೀಯ ಇತಿಹಾಸದ ಪುಟಗಳಲ್ಲಿ ಅತ್ಯಂತ ಸುಧೀರ್ಘಾವಾಗಿ  ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆ ಪಾತ್ರರಾಗಿ, ಇನ್ನಷ್ಟು ವರ್ಷಗಳ ಕಾಲ ದೀರ್ಘಾವಧಿ ಅಧಿಕಾರ ನಡೆಸಲು ಹಾಗೂ ಭಾರತ ದೇಶದ ಹಿರಿಮೆಯನ್ನು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಗುರುತಿಸಿಕೊಳ್ಳುವ ಮೂಲಕ ವಿಶ್ವಗುರು ಭಾರತ ಮತ್ತು ಆತ್ಮ ನಿರ್ಭರ ಭಾರತ ಕಲ್ಪನೆ ಈಡೇರಲಿ ಎಂಬ ಆಶಯದೊಂದಿಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ದೇವಿಗೆ ಸರ್ವಾಲಂಕಾರ ಪೂಜೆಯೊಂದಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು ಹಾಗೂ ಸಿಹಿ ಹಂಚಿ ಸಂಭ್ರಮಿಸಲಾಯಿತು.

ಈ ಸಂದರ್ಭದಲ್ಲಿ ಬಾ ಜ ಪ ಬಂಟ್ವಾಳ ಕ್ಷೇತ್ರದ ಪ್ರ ಕಾರ್ಯದರ್ಶಿ ಸುದರ್ಶನ್ ಬಜ, ಜಿಲ್ಲಾ ಕಾರ್ಯದರ್ಶಿ ದೇವಪ್ಪ ಪೂಜಾರಿ, ಆಮ್ಟಾಡಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ವೆಂಕಟೇಶ್

ನಾವಡ ಪೊಳಲಿ, ಪ್ರಮುಖರಾದ ಹರೀಶ್ ಶೆಟ್ಟಿ ಪಡು, ಯಶವಂತ ಪೂಜಾರಿ ಪೊಳಲಿ, ಲೋಕೇಶ್ ಭರಣಿ, ಕಾರ್ತಿಕ್ ಬಲ್ಲಾಳ್, ವಾಮನ ಆಚಾರ್ಯ ಅಂಮುಂಜೆ, ಲೋಕೇಶ್ ಪಲಿಪಾಡಿ,ಯಶೋದರ ಕಲ್ಕುಟ ಮತ್ತಿತರು ಉಪಸ್ಥಿತರಿದ್ದರು.

Leave a Comment