ಬಂಟ್ವಾಳ :ಕುಲಾಲ ಸಮುದಾಯದ ಭವನಕ್ಕೆ ರೂ 1ಕೋಟಿ ಅನುದಾನ ಮಂಜೂರು.

Coastal Bulletin
ಬಂಟ್ವಾಳ :ಕುಲಾಲ ಸಮುದಾಯದ ಭವನಕ್ಕೆ ರೂ 1ಕೋಟಿ ಅನುದಾನ ಮಂಜೂರು.

ಬಂಟ್ವಾಳ ಕುಲಾಲ ಸುಧಾರಕ ಸಂಘದ ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ಸಮುದಾಯದ ಅಭಿವೃದ್ಧಿ ಕಾರ್ಯಕ್ರಮದಡಿ ರೂ 1ಕೋಟಿ ಅನುದಾನ ಮಂಜೂರು ಮಾಡಿ ಅದೇಶಿಸಿದೆ.

ಈ ಬಗ್ಗೆ ಅನುದಾನ ಮಂಜೂರಾತಿಗಾಗಿ ನಿರಂತರ ಶ್ರಮಪಟ್ಟ ಮಂಗಳೂರು ವಿ ವಿ ಸಿಂಡಿಕೇಟ್ ಸದಸ್ಯರು ಹಾಗೂ ಬಂಟ್ವಾಳ ಕುಲಾಲ ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷರು ಆಗಿರುವ ಸುರೇಶ್ ಕುಮಾರ್ ನಾವೂರ ಮಾತನಾಡಿ, ಅನುದಾನ ಮಂಜೂರಾತಿಗಾಗಿ

ನಮ್ಮ ಸಮುದಾಯ ಬಗ್ಗೆ ವಿಶೇಷ ಕಾಳಜಿಯಿಂದ ಮಾಜಿ ಸಚಿವ ಬಿ ರಮಾನಾಥ ರೈ ಅವರು ನಿರಂತರ ನಮ್ಮ ಸಂಪರ್ಕದಲ್ಲಿದ್ದು, ಅವರ ಅವಿರತ ಪರಿಶ್ರಮ ಹಾಗೂ ತನ್ನೊಂದಿಗೆ ಸಮಾಜ ಬಾಂದವರ ಸಹಕಾರವನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.


Leave a Comment