ಹಿರಿಯ ಪತ್ರಕರ್ತರು, ನಿವೃತ್ತ ಪ್ರಾಂಶುಪಾಲ ಪ್ರೊ.ಕೆ. ಬಾಲಕೃಷ್ಣ ಗಟ್ಟಿ ವಿಧಿವಶ.

Coastal Bulletin
ಹಿರಿಯ ಪತ್ರಕರ್ತರು, ನಿವೃತ್ತ ಪ್ರಾಂಶುಪಾಲ ಪ್ರೊ.ಕೆ. ಬಾಲಕೃಷ್ಣ ಗಟ್ಟಿ ವಿಧಿವಶ.

ಬಂಟ್ವಾಳ:ಜೂ.12 ಬಂಟ್ವಾಳ ಎಸ್.ವಿ. ಎಸ್.ಕಾಲೇಜಿನಲ್ಲಿ‌ ಅರ್ಥಶಾಸ್ತ್ರ ಉಪನ್ಯಾಸಕರಾಗಿ ,ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದ ಪ್ರೊ.ಬಾಲಕೃಷ್ಣ ಗಟ್ಟಿ (83)ಯವರು ಮಂಗಳೂರಿನಲ್ಲಿ ನೆಲೆಸಿದ್ದು ಇಂದು ಬೆಳಿಗ್ಗೆ ನಿಧನರಾದರು.

ಮೂಲತಃ ಕಾಸರಗೋಡಿನ ಕುಂಬಳೆಯ ಹಿರಿಯ ಸಾಮಾಜಿಕ ಮುಖಂಡ ದಿ.ಮಹಾಲಿಂಗ ಗಟ್ಡಿಯವರ ಪುತ್ರ. ಕೇರಳದ ಕಣ್ಣೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಬಂಟ್ವಾಳ ಎಸ್.ವಿ.ಎಸ್.ಕಾಲೇಜಿನಲ್ಲಿ ಸುದೀರ್ಘ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯ‌ ಅರ್ಥಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿದ್ದರು. ಕೆಲವು ಕಾಲೇಜೊಂದರಲ್ಲಿ ಆಡಳಿತಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು.

ಜೊತೆಗೆ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ‌ಪತ್ರಿಕೆಯ ಬಂಟ್ವಾಳದಲ್ಲಿ ವರದಿಗಾರರಾಗಿದ್ದರು. ನೇತ್ರಾವತಿ ವಾರ್ತೆ ದಿನಪತ್ರಿಕೆ ಯನ್ನು ಪ್ರಾರಂಭಿಸಿ‌ ಸಂಪಾದಕರಾಗಿ ಮನ್ನಡೆಸಿದ್ದು ಅನೇಕ ಕಿರಿಯ ಪತ್ರಕರ್ತರಿಗೆ ಮಾರ್ಗದರ್ಶಕರಾಗಿದ್ದರು. 1998

ರಿಂದ‌2003ರ ವರೆಗೆ ಜನವಾಹಿನಿ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ಪತ್ರಿಕೆಯನ್ನು ಮುನ್ನಡೆಸಿದ್ದರು.ಸರಳ, ನಿಷ್ಠುರ ಬರೆವಣಿಗೆಗಳ ಮೂಲಕ ಪತ್ರಿಕಾರಂಗದಲ್ಲಿ ದಶಕಗಳ ಕಾಲ ಗುರುತಿಸಲ್ಪಟ್ಡಿದ್ದ ಅವರು ಬಂಟ್ವಾಳ ತಾಲೂಕು ಗ್ರಾಮೀಣ ಪತ್ರಕರ್ತರ ‌ಸಂಘ‌ವನ್ನು ಸ್ಥಾಪನೆ ಮಾಡಿ ಸ್ಥಾಪಕಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಉತ್ತಮ ವಾಗ್ಮಿಯಾಗಿದ್ದ ‌ಅವರು ಎಡಪಂಥೀಯ ಚಿಂತನೆ ಗಳಿಂದ ಆಕರ್ಷಿತರಾಗಿದ್ದರು. ಬಂಟ್ವಾಳ ತಾಲೂಕಿನ ಅಮ್ಮುಂಜೆಯಲ್ಲಿ 2024 ನ.12 ರಂದು ನಡೆದ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರಾಗಿ ಸಾಹಿತ್ಯ ಪರಿಷತ್ತಿನಿಂದ ಗೌರವಿಸಲ್ಪಟ್ಡಿದ್ದರು.

ಪತ್ನಿ ಹಾಗೂ ವಿದೇಶದಲ್ಲಿರುವ ಓರ್ವ ಪುತ್ರ , ಪುತ್ರಿಯನ್ನು ಅಗಲಿದ್ದಾರೆ.

Leave a Comment