ಕಾಸರಗೋಡಿನ ಪ್ರಗತಿಯ ನೆಗೆತ್ತಕ್ಕೆ 100 ಕೋಟಿ ರೂ.ಗಳ ಅಭಿವೃದ್ಧಿ ಪ್ಯಾಕೇಜ್ ಕರಡು ಸಮರ್ಪಣೆ

Coastal Bulletin
ಕಾಸರಗೋಡಿನ ಪ್ರಗತಿಯ ನೆಗೆತ್ತಕ್ಕೆ 100 ಕೋಟಿ ರೂ.ಗಳ ಅಭಿವೃದ್ಧಿ ಪ್ಯಾಕೇಜ್ ಕರಡು ಸಮರ್ಪಣೆ

ಕಾಸರಗೋಡು: ಈ ಆರ್ಥಿಕ ವರ್ಷದಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ಗಾಗಿರುವ 100 ಕೋಟಿ ರೂ.ಗಳ ಕರಡು ವಾರ್ಷಿಕ ಯೋಜನೆಯನ್ನು ಸಲ್ಲಿಸಲಾಗಿದೆ. ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯ ಅಭಿವೃದ್ಧಿ ಪ್ರವಾಸೋ ಧ್ಯಮ, ಕೃಷಿ ಮೊದಲಾದ ವಲಯಗಳಲ್ಲಿ ಭಾರೀ ಪ್ರಗತಿಯನ್ನು ಗುರಿ ಇರಿಸಿ 27 ಪ್ರಧಾನ ಯೋಜನೆಗಳನ್ನು ಸಮಗ್ರವಾದ ಈ ಕರಡುನಲ್ಲಿ ಸೇರಿಸಿಕೊಳ್ಳಲಾಗಿದೆ.

ಜಿಲ್ಲೆಯ ದೀರ್ಘಕಾಲದ ಬೇಡಿಕೆಗಳಿಗೆ ಪರಿಹಾರ ಕಾಣುವ ರೀತಿಯಲ್ಲಿ ಯೋಜನೆಗಳಿಗೆ ರೂಪು ನೀಡಲಾಗಿದೆ. ಆರೋಗ್ಯ ವಲಯಕ್ಕೆ ಎಂಡೋಸಲ್ಫಾನ್ ಸಂತ್ರಸ್ತರಿಗೆ ಯೋಜನೆಯಲ್ಲಿ ಬಹುಪಾಲು ಪರಿಗಣನೆ ನೀಡಲಾಗಿದೆ. ಕಾಸರಗೋಡು ಸರಕಾರಿ ಮೆಡಿಕಲ್‌ ಕಾಲೇಜಿನಲ್ಲಿ ಹೆಚ್ಚು ಸೌಕರ್ಯಗಳನ್ನು ಏರ್ಪಡಿಸುವುದಕ್ಕಾಗಿ 10 ಕೋಟಿ ರೂ.ಗಳ ಹೊಸ ಅಪಘಾತ ಟ್ರೋಮಾಕೇರ್ ಸೌಕರ್ಯಕ್ಕಾಗಿ 5ಕೋಟಿ ರೂ. ಕರಡು ವಾರ್ಷಿಕ ಯೋಜನೆಯಲ್ಲಿ ಮೀಸಲಿಡಲಾಗಿದೆ.

ಎಂಡೋಸಲ್ಫಾನ್ ಸಂತ್ರಸ್ತರ ಆರೋಗ್ಯ ಸಂರಕ್ಷಣೆಗೆ, ಜೀವನ ನಿರ್ವಹಣೆಗಾಗಿ ಮೆಡಿಕಲ್ ಕಾಲೇಜಿನಲ್ಲಿ ಸಮಗ್ರ ಕ್ಲಿನಿಕಲ್ ಬೋಕ್ ಸ್ಥಾಪಿಸಲು 10 ಕೋಟಿ ರೂ. ಮೀಸಲಿಡಲಾಗಿದೆ. ಇದರ ಹೊರತಾಗಿ ಸಾಮಾಜಿಕ ನೀತಿ ಇಲಾಖೆಯ ಅಧೀನದಲ್ಲಿ ವಯೋಜನ ಆಸ್ಪತ್ರೆ ಶ್ಲೋಕ್ ಸ್ಥಾಪಿಸಲು 2.65 ಕೋಟಿ ರೂ. ಕರಡು ಯೋಜನೆಯಲ್ಲಿ ಮೀಸಲಿಡಲಾಗಿದೆ.

ಶಿಕ್ಷಣ ವಲಯದ ಮೂಲಭೂತ ಅಭಿವೃದ್ಧಿಗೆ ಆದ್ಯತೆ ನೀಡುವುದು ಇನ್ನೊಂದು ಪ್ರಧಾನ ಘೋಷಣೆ ಯಾಗಿದೆ. ತಾರಸಿಯಲ್ಲದ ಪ್ರೈಮರಿ ಶಾಲಾ ಕಟ್ಟಡಗಳನ್ನು ನವೀಕರಿಸಲು 11 ಕೋಟಿ ರೂ., ಸ್ಮಾರ್ಟ್ ಅಂಗನವಾಡಿ ಗಳಿಗೆ, ಸೋಶ್ಯಲ್ ರಿಸೋರ್ಸ್ ಸೆಂಟರ್‌ಗಳಿ ಗಾಗಿ 6 ಕೋಟಿ ರೂ. ಮೀಸಲಿಡಲಾಗಿದೆ.

ಸೆಕೆಂಡರಿ, ಹೈಯರ್ ಸೆಕೆಂಡರಿ ಶಾಲೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ 12 ಕೋಟಿ ರೂ., ಆಧುನಿಕ ಲೆಬೋರೇಟರಿಗಳಿಗೆ 2 ಕೋಟಿ ರೂ, ಕಾಸರಗೋಡು ಸರಕಾರಿ ಕಾಲೇಜಿನ ಹೊಸ ಜಿಯೋಲಜಿ ಬೋಕ್‌ಗೆ 3 ಕೋಟಿ ರೂ. ಮೀಸಲಿಡಲಾಗಿದೆ. ತಾಂತ್ರಿಕ ಶಿಕ್ಷಣ ನವೀಕರಣೆಗೆ 3 ಕೋಟಿ ರೂ, ಸ್ಪರ್ಧಾ ಪರೀಕ್ಷಾ ತರಬೇತಿ ಯೋಜನೆಯಾದ 'ಮುನ್ನೋಟ್‌'ಗೆ 35ಲಕ್ಷ ರೂ. ಮೀಸಲಿಡಲಾಗಿದೆ. ಕ್ರೀಡಾ ವಲಯದ ಉತ್ತೇಜನಕ್ಕಾಗಿ ಕಾಸರಗೋಡು ನಗರಸಭಾ ಮೈದಾನದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಲು ೩ ಕೋಟಿ ರೂ.

ತೆಗೆದಿರಿಸಲಾಗಿದೆ.

ಸಾರಿಗೆ ಸೌಕರ್ಯ ಉತ್ತಮ ಪಡಿಸುವುದರಂಗವಾಗಿ ಹೊಸ ಸೇತುವೆಗಳು, ರಸ್ತೆಗಳು ಯೋಜನೆಯಲ್ಲಿ ಸ್ಥಾನ ಪಡೆದಿವೆ. ಉದಯಪುರಂ -ಮೂನಾಡ್ ರಸ್ತೆಯಲ್ಲಿ ಪಿಂಡಿಕಡವ್ ಸೇತುವೆ ನಿರ್ಮಿಸಲು 4 ಕೋಟಿ ರೂ., ಬೇಡಡ್ಕದ ಪಾಯಂ ಪಯ೦ಜಾಡ್ ಸೇತುವೆಗೆ 3,5 ಕೋಟಿ ರೂ., ವಿವಿಧ ನಗರಗಳ ಬೈಪಾಸ್ ಅಭಿವೃದ್ಧಿಗೆ 3 ಕೋಟಿ ರೂ., ನೆಲ್ಲಿಕುಂಜೆ ಸಹಿತದ ಟ್ರಾಫಿಕ್ ಜಂಕ್ಷನ್‌ಗಳ ನವೀಕರಣೆಗೆ, ಸಿವಿಲ್ ಸ್ಟೇಷನ್ ಪರಿಸರದ ಮಾನವೀ ಯಂ ವೀಥಿ ಸರ್ಕ್ಯುಲರ್ ಗಳಿಗೆ 2 ಕೋಟಿ ರೂ.ನಂತೆ ಕೆಡಿಪಿ ಮೀಸಲಿರಿಸಿದೆ.

ತೀರದೇಶ ಗ್ರಾಮೀಣ ಪ್ರವಾ ಸೋಧ್ಯಮ ಕೇಂದ್ರಗಳ ನವೀಕರಣೆಗೆ ಯೋಜನೆಯಲ್ಲಿ ಮೊತ್ತ ಮೀಸಲಿಡಲಾಗಿದೆ. ಕೈಕಡಪ್ಪುರಂ, ವಲಿಯಪರಂಬ್ ಬೀಚ್‌ಗಳ ಅಭಿವೃದ್ಧಿಗೆ 2 ಕೋಟಿ ರೂ.ನಂತೆಯೂ, ಮಂಞಂಪೊದಿಕುನ್ ಹಿಲ್ ಟೂರಿಸಂಗೆ 1 ಕೋಟಿ ರೂ. ಮೀಸಲಿಡ ಲಾಗಿದೆ. ಕೃಷಿ, ಮೃಗ ಸಂರಕ್ಷಣೆ ವಲಯಗಳಲ್ಲಿ ನೀಲೇಶ್ವರಂ ಪಾಲಾಯಿ ಭತ್ತ ಉತ್ಪಾದಕ ಗದ್ದೆಗಳಿಗೆ ನೀರಾವರಿ ಸೌಕರ್ಯಕ್ಕಾಗಿ 3 ಕೋಟಿ ರೂ., ಮೃಗ ಸಂರಕ್ಷಣೆ ಲ್ಯಾಬ್‌ಗಳು, ಆಸ್ಪತ್ರೆಗಳನ್ನು ಬಲ ಪಡಿಸುವುದಕ್ಕೆ 2 ಕೋಟಿ ರೂ., ಜನವಾಸ ಕೇಂದ್ರಗಳಿಗಿರುವ ವನ್ಯಜೀವಿಗಳ ಆಕ್ರಮಣವನ್ನು ವೈಜ್ಞಾನಿಕವಾಗಿ ತಡೆಯುವುದಕ್ಕೆ 1 ಕೋಟಿ ರೂ. ಪ್ಯಾಕೇಜ್‌ನಲ್ಲಿ ಮೀಸಲಿಡಲಾಗಿದೆ.

ಆಧುನಿಕ ರಸ್ತೆ ಬದಿ ವಿಶ್ರಾಂತಿ ಕೇಂದ್ರಗಳನ್ನು ಸ್ಥಾಪಿಸಲು, ಕಾಸರಗೋಡು ಫಯರ್ ಸ್ಟೇಷನ್‌ನ ದ್ವಿತೀಯ ಹಂತದ ನಿರ್ಮಾಣಕ್ಕೆ ಅನಂತಪುರ ಕೈಗಾರಿಕಾ ಪ್ರಾಂಗಣದ ತ್ಯಾಜ್ಯ ಸಂಸ್ಕರಣಾ ಪ್ಲಾಂಟ್‌ಗೆ 2 ಕೋಟಿ ರೂ.ನಂತೆ ಮೀಸಲಿಡಲಾಗಿದೆ. ಇದರ ಹೊರತಾಗಿ ತುರ್ತು ರಕ್ಷಣಾ ಚಟುವಟಿಕೆಗಳಿಗೆ, ಸ್ಪೀಡ್ ಬೋಟ್ ಜೀವ ರಕ್ಷಕ ಉಪಕರಣಗಳ ಖರೀದಿಗೆ 50 ಲಕ್ಷ ರೂ. ಯೋಜನೆಯಲ್ಲಿ ಮೀಸಲಿಡಲು ನಿರ್ದೇಶಿಸಲಾಗಿದೆ.

Leave a Comment