ಕೈಯೂರು: ಶಾಸಕ ರಾಜೇಶ್ ನಾಯ್ಕ್ ರಿಂದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ.

Coastal Bulletin
ಕೈಯೂರು: ಶಾಸಕ ರಾಜೇಶ್ ನಾಯ್ಕ್ ರಿಂದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ.

ಬಂಟ್ವಾಳ: ಶಾಸಕರಾದ ರಾಜೇಶ್ ನ್ಯಾಕ್ ಉಳಿಪಾಡಿಯವರು  ಇಂದು ಶಾಸಕರ ಅನುದಾನದ ಕೈಯೂರು ಅಂಗನವಾಡಿ ಕಟ್ಟಡ ಮತ್ತು ಸಂಪರ್ಕ ರಸ್ತೆ ಒಟ್ಟು 16 ಲಕ್ಷ ರೂ, ವಿಧಾನಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಅವರ ಅನುದಾನದ ಕೆಯ್ಯೂರು ಸ್ಥಾನಮೂಲೆ ರಸ್ತೆ ಕಾಂಕ್ರೀಟೀಕರಣ 5 ಲಕ್ಷ ರೂ ಕಾಮಗಾರಿಗಳನ್ನು ಉದ್ಘಾಟಿಸಿ ಮಂಚಿ ಗ್ರಾಮದಲ್ಲಿ ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ 8.50 ಕೋಟಿ ರೂ ಅನುದಾನದಲ್ಲಿ ಬಹುತೇಕ ಕಾಮಗಾರಿಗಳು ನಡೆದಿದ್ದು ಬಾಕಿ ಉಳಿದ ಸಣ್ಣಪುಟ್ಟ ಅಭಿವೃದ್ಧಿ ಕಾಮಗಾರಿಗಳು ಈಗ ನಡೆದು ಉದ್ಘಾಟನೆಗೊಳ್ಳುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಪಂಚಾಯತ್‌ ಸದಸ್ಯರುಗಳಾದ ಮೋಹನ್ ದಾಸ್ ಶೆಟ್ಟಿ, ಮೋಹನ್‌ ಪ್ರಭು ಕೆ, ಶ್ರೀಮತಿ ಪ್ರಮೀಳ.ಶ್ರೀಮತಿ ಉಷಾ ಶೆಟ್ಟಿ .ಮಂಚಿ ವ್ಯವಸಾಯ

ಸಹಕಾರಿ ಸಂಘದ ಅಧ್ಯಕ್ಷರು ಕೇಶವ ರಾವ್,ಪ್ರಭಾಕರ್ ಶೆಟ್ಟಿ,ಸಿಡಿಪಿಒ ಮುಮ್ತಾಜ್, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ನಿರ್ಮಾಲಾ,ಅಂಗನವಾಡಿ ಶಿಕ್ಷಕಿ ಚಂದ್ರಿಕಾ,ಅಂಗನವಾಡಿ ಸಹಾಯಕಿ ಪೂರ್ಣಿಮಾ ಸೇರಿದಂತೆ ಗ್ರಾಮಸ್ಠರು ಉಪಸ್ಥಿತರಿದ್ದರು.

Leave a Comment