ಕುರಿ ಮಟನ್ ಬದಲಾಗಿ ದನದ ಮಾಂಸ ನೀಡ್ತಿದ್ದ ರೆಸ್ಟೋರೆಂಟ್‌ಗೆ ಬೀಗ; ಇಬ್ಬರ ಬಂಧನ

Coastal Bulletin
ಕುರಿ ಮಟನ್ ಬದಲಾಗಿ ದನದ ಮಾಂಸ ನೀಡ್ತಿದ್ದ ರೆಸ್ಟೋರೆಂಟ್‌ಗೆ ಬೀಗ; ಇಬ್ಬರ ಬಂಧನ

ಬೆಂಗಳೂರಿನ ಬೂದಿಗೆರೆ ಕ್ರಾಸ್‌ನಲ್ಲಿರುವ ಕಾಯಲೋರಂ ರೆಸ್ಟೋರೆಂಟ್‌ನಲ್ಲಿ ಮಟನ್ ಎಂದು ನಂಬಿಸಿ ಗ್ರಾಹಕರಿಗೆ ದನದ ಮಾಂಸವನ್ನು ನೀಡಲಾಗುತ್ತಿತ್ತು. ಅನುಮಾನಗೊಂಡ ಯುವಕರು ಪೊಲೀಸರಿಗೆ ಮಾಹಿತಿ ನೀಡಿದಾಗ ಈ ವಂಚನೆ ಬಯಲಾಗಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿ ರೆಸ್ಟೋರೆಂಟ್‌ಗೆ ಬೀಗ ಹಾಕಿದ್ದಾರೆ.

ಕಾಯಲೋರಂ ರೆಸ್ಟೊರೆಂಟ್ ವಿರುದ್ಧ ಗಂಭೀರ ಆರೋಪ

ಬೆಂಗಳೂರಿನ ಬೂದಿಗೆರೆ ಕ್ರಾಸ್ ಬೊಮ್ಮೇನಹಳ್ಳಿಯ ಐಸಿರಿ ಹಬ್ ನಲ್ಲಿರುವ ಕಾಯಲೋರಂ ರೆಸ್ಟೊರೆಂಟ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಈ ಸಂಬಂಧ ಆವಲಹಳ್ಳಿ ಠಾಣೆಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಜೀಜು ಮತ್ತು ಶಿಬು ಎಂದು ಗುರುತಿಸಲಾಗಿದೆ. ಕಳೆದ ಒಂದೂವರೆ ವರ್ಷದಿಂದ ಕಾಯಲೋರಂ ಹೆಸರಿನಲ್ಲಿ ಈ ರೆಸ್ಟೋರೆಂಟ್ ನಡೆಸಲಾಗುತ್ತಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಕೆಲವು ದಿನಗಳ ಹಿಂದೆ ಯುವಕರು ಕಾಯಲೋರಂ ರೆಸ್ಟೋರೆಂಟ್‌ಗೆ

ಊಟಕ್ಕೆ ಬಂದು ಮಟನ್ ಮೀಲ್ಸ್ ಆರ್ಡರ್ ಮಾಡಿದ್ದಾರೆ. ಈ ವೇಳೆ ರೆಸ್ಟೋರೆಂಟ್ ಸಿಬ್ಬಂದಿ, ಮಟನ್ ಬದಲಿಗೆ ದನದ ಮಾಂಸವನ್ನು ನೀಡಿದ್ದಾರೆ. ಅನುಮಾನಗೊಂಡ ಯುವಕರು ಸಿಬ್ಬಂದಿಯನ್ನು ಪ್ರಶ್ನೆ ಮಾಡಿದ್ದಾರೆ. ಕೂಡಲೇ ಆವಲಹಳ್ಳಿ ಪೊಲೀಸರಿಗೂ ಸಹ ಈ ಮಾಹಿತಿಯನ್ನು ನೀಡಿದ್ದಾರೆ.

ಬಂಧಿತರ ವಿಚಾರಣೆ, ತನಿಖೆ ಮುಂದುವರಿಕೆ

ವಿಷಯ ತಿಳಿದು ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ದನದ ಮಾಂಸ ನೀಡಿರೋದು ಪತ್ತೆಯಾಗಿದೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ರೆಸ್ಟೋರೆಂಟ್‌ನನ್ನು ಬಂದ್ ಮಾಡಿದ್ದಾರೆ. ಈ ಸಂಬಂಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment