ನವದೆಹಲಿ: ದೇಶದಲ್ಲಿ ಕೃಷಿ ಚಟುವಟಿಕೆಯನ್ನು ಉತ್ತಮಗೊಳಿಸಲು, ಮುಖ್ಯವಾಗಿ ಯೂರಿಯಾ ರಸಗೊಬ್ಬರವನ್ನು ಎಲ್ಲರಿಗೂ ತಲುಪುವಂತೆ ಮಾಡಲು ಕೇಂದ್ರ ಸರ್ಕಾರ 3.70 ಲಕ್ಷಕೋಟಿ ರೂ ಬಿಡುಗಡೆ ಮಾಡಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರವವನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವ ಮನ್‌ಸುಖ್‌ಮಾಂಡವಿಯಾ ಹೇಳಿದರು.
ಈ ಭಾರೀ ಮೊತ್ತವನ್ನು ನೀಡಲು ಪ್ರಮುಖ ಕಾರಣವೆಂದರೆ ಪ್ರಧಾನಿ ನರೇಂದ್ರ ಮೋದಿಯವರು ರೈತರು ಸರಾಗವಾಗಿ ಯೂರಿಯ ಪಡೆಯಬೇಕು. ಕೃಷಿ ಚಟುವಟಿಕೆಗಳು ಸುಸ್ಥಿರವಾಗಿ ಮುಂದುವರಿಯಬೇಕು ಎಂದು ಬಯಸಿದ್ದಾರೆ. ಆದ್ದುದರಿಂದ ರೈತರಿಗಾಗಿ 3.70 ಲಕ್ಷಕೋಟಿ ರೂ.ಗಳಲ್ಲಿ 3.68 ಲಕ್ಷಕೋಟಿ ರೂ.ಗಳನ್ನು ಯೂರಿಯಾ ಸಬ್ಸಿಡಿಗೆಂದೇ ಎತ್ತಿಡಲಾಗಿದೆ. ಇದರಿಂದ 45 ಕೆ.ಜಿ ಗಳ ಒಂದು ಯೂರಿಯ ಚೀಲ 242 ರೂ.ಗಳು ಸಿಗಲಿದೆ ಎಂದು ಹೇಳಿದ್ದಾರೆ.
ಒಂದು
ರಾಜ್ಯ 10 ಲಕ್ಷ ಟನ್ ರಾಸಾಯನಿಕ ಗೊಬ್ಬರ ಉಪಯೋಗಿಸುತ್ತಿದ್ದು, ಅದನ್ನು 3 ಲಕ್ಷ ಟನ್ ಇಳಿಸಿದರೆ, ಅದರ ಸಬ್ಸಿಡಿ ಉಳಿತಾಯ 3,000 ಕೋಟಿ ರೂ ಆಗಲಿದೆ. ಈ ಪೈಕಿ ಶೇ.50 ರಷ್ಟು ಅಂದರೆ 1,500 ಕೋಟಿ ರೂ.ಗಳನ್ನು ಕೇಂದ್ರ ಸರಕಾರ ಸಂಬಂಧಪಟ್ಟ ರಾಜ್ಯಕ್ಕೆ ನೀಡಲಿದೆ. ಇದನ್ನು ಪರ್ಯಾಯ ಗೊಬ್ಬರ ಮತ್ತು ಇತರ ಅಭಿವೃದ್ಧಿ ಕೆಲಸಗಳಿಗೆ ಬಳಸಬಹುದು ಎಂದು ತಿಳಿಸಿದ್ದಾರೆ.















