ಪುತ್ತೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಇದೀಗ ರಾಷ್ಟ್ರೀಯ ತನಿಖಾದಳ ತನ್ನ ಹೊಸ ಅಸ್ತ್ರ ಪ್ರಯೋಗಿಸಿದ್ದು, ಆರೋಪಿಗಳು ಎರಡು ದಿನದಲ್ಲಿ ಶರಣಾಗದಿದ್ದರೆ ಆರೋಪಿಗಳ ಮನೆಗಳಿಗೆ ಜಪ್ತಿ ಮಾಡಲು ಮುಂದಾಗಿದ್ದಾರೆ.
ಇಂದು ಸುಳ್ಯ ನಗರದ ಬೀದಿಗಳಲ್ಲಿ ಈ ಬಗ್ಗೆ ಧ್ವನಿವರ್ಧಕ ಬಳಸಿ ಪ್ರಕಟಣೆ ಹೊರಡಿಸಿದ ಮೂಲಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ಜೂನ್ 30 ರೊಳಗೆ ಶರಣಾಗದೇ ಇದ್ದಲ್ಲಿ ಅವರ ಮನೆಗಳನ್ನು ಮುಟ್ಟುಗೋಲು ಮಾಡಲಾಗುವುದು ಎಂದು ಎನ್‌ಐಎ ನ್ಯಾಯಾಲದ ಅಧಿಕಾರಿಗಳು ಹಾಗೂ ಸುಳ್ಯದ ಪೊಲೀಸ್
ಸಿಬ್ಬಂದಿ ಜಂಟಿಯಾಗಿ ಘೋಷಣೆಯನ್ನು ಮಾಡಿದೆ.
ಸುಳ್ಯದ ಕಲ್ಲುಮುಟ್ಟುನಲ್ಲಿ ವಾಸವಿದ್ದ ಆರೋಪಿ ಉಮ್ಮರ್ ಫಾರೂಕ್ ಮನೆಗೂ ಹೋಗಿ ನ್ಯಾಯಾಲಯದ ಆದೇಶ ಪ್ರತಿಯನ್ನು ಅಂಟಿಸಿ ಬಂದಿದ್ದಾರೆ. ನಿನ್ನೆಯೂ ಬೆಳ್ಳಾರೆಯಲ್ಲಿ ಧ್ವನಿವರ್ಧಕದ ಮೂಲಕ ಎನ್‌ಐಎ ನ್ಯಾಯಾಲಯದ ಆದೇಶವನ್ನು ಘೋಷಿಸಿ ಆರೋಪಿ ಮುಸ್ತಫ ಎಂಬಾವನ ಮನೆಗೂ ಆದೇಶ ಪ್ರತಿ ಅಂಟಿಸಲಾಗಿದೆ.















