ಟೊಮೆಟೊ ಬೆಲೆ ಏರಿಕೆಯ ಜೊತೆಗೆ ಈರುಳ್ಳಿ ಬೆಲೆಯು ಹೆಚ್ಚಳ ಸಾಧ್ಯತೆ

Coastal Bulletin
ಟೊಮೆಟೊ ಬೆಲೆ ಏರಿಕೆಯ ಜೊತೆಗೆ ಈರುಳ್ಳಿ ಬೆಲೆಯು ಹೆಚ್ಚಳ ಸಾಧ್ಯತೆ

ಆಗಸ್ಟ್ ತಿಂಗಳ ಕೊನೆಯಲ್ಲಿ ದೇಶದ ರಿಟೇಲ್ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಹೆಚ್ಚಳ ಶುರುವಾಗಲಿದ್ದು, ಕೆಜಿಗೆ 60 ರಿಂದ 70 ರೂಪಾಯಿಗಳವರೆಗೆ ಏರಿಕೆ ಕಾಣಲಿದೆ ಎಂದು ಹೇಳಲಾಗಿದ್ದು, ಬೆಲೆ ಏರಿಕೆಗೆ ಪೂರೈಕೆಯ ಕೊರತೆ ಕಾರಣವಾಗಲಿದೆ ಎಂದು ಕ್ರಿಸಿಲ್ ಸಂಸ್ಥೆಯ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

ಮಾರುಕಟ್ಟೆಯಲ್ಲಿ ಹಿಂಗಾರು ಬೆಳೆಯ ಈರುಳ್ಳಿ ಸಂಗ್ರಹ ಆಗಸ್ಟ್ ಅಂತ್ಯದ ವೇಳೆಗೆಗ ಗಣನೀಯವಾಗಿ ಕಡಿಮೆ ಆಗಲಿದ್ದ ಎನ್ನಲಾಗಿದ್ದು, ಮುಂಗಾರು ಅವಧಿಯ ಈರುಳ್ಳಿ ಬೆಳೆ ಅಕ್ಟೋಬರ್ ನಿಂದ ಮಾರುಕಟ್ಟೆಗೆ ಬರಲಿದೆ. ಹೀಗಾಗಿ

ಬೇಡಿಕೆಗೆ ಅನುಗುಣವಾಗಿ ಪೂರೈಕೆ ಸಾಧ್ಯವಾಗದ ಕಾರಣ ಆಗಸ್ಟ್ ಅಂತ್ಯದ ವೇಳೆಗೆ ಬೆಲೆ ಏರಿಕೆಯಾಗಲಿದ್ದು, ಅಕ್ಟೋಬರ್-ಡಿಸೆಂಬರ್ ವೇಳೆಗೆ ಬೆಲೆ ಸ್ಥಿರತೆ ಹಂತ ತಲುಪುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿದೆ. 


Leave a Comment