ಕಾಂತಾರ ಚಿತ್ರದ ಬಳಿಕ ರಿಷಬ್ ಶೆಟ್ಟಿ ಅವರ ಖ್ಯಾತಿಯು ಹೆಚ್ಚಾಗಿದ್ದು, ಅಮೇರಿಕ ವಾಷೀಂಗ್ವನ್‌ನ ಸಿಯಾಟಲ್‌ನಲ್ಲಿರುವ ಪ್ಯಾರಾಮೌಂಟ್ ಥಿಯೇಟರ್‌ನಲ್ಲಿ ರಿಷಬ್‌ಗೆ ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಬಿರುದನ್ನು ನೀಡಿ ಗೌರವಿಸಲಾಗಿದೆ.
ವಾಷಿಂಗ್ವನ್ ರಾಜ್ಯದ ಕನ್ನಡಿಗರಾದ ಮನು ಗೌರವ್ ಮತ್ತು ತಂಡದವರು, ಸಿಯಾಟಲ್‌ನಲ್ಲಿರುವ ಸಹ್ಯಾದ್ರಿ ಕನ್ನಡ ಸಂಘ ರಿಷಬ್ ಶೆಟ್ಟಿ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಜೊತೆಗೆ ರಿಷಬ್ ಶೆಟ್ಟಿ ಅವರ ಮಡದಿ ಪ್ರಗತಿ ಶೆಟ್ಟಿ ಕೂಡ ಈ ಸಂದರ್ಭದಲ್ಲಿ
ಹಾಜರಿದ್ದರು.
ಈ ಸಂದರ್ಭದಲ್ಲಿ ಸೆನೆಟರ್ ಡಾ.ದೆರೀಕ್ ಟ್ರಸ್ಪರ್ಡ್ ಸಹ ಉಪಸ್ಥಿತರಿದ್ದರು. ಆಮೆರಿಕ ಹಾಗೂ ವಾಷಿಂಗ್ವನ್ ನಗರಕ್ಕೆ ಕನ್ನಡಿಗರು ನೀಡುತ್ತಿರುವ ಕೊಡುಗೆಯನ್ನು ಸ್ಮರಿಸಿದ ಟ್ರಸ್ಪರ್ಡ್, ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾವನ್ನು ಯುನಿವರ್ಸಲ್ ಸಿನಿಮಾ ಎಂದು ಹೇಳಿದ್ದಾರೆ.















