ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತ್ತೂರು ಗ್ರಾಮದಲ್ಲಿ ಆಡು ನುಂಗಲು ಸಾಧ್ಯವಾಗದೇ ಆಡನ್ನು ಬಿಟ್ಟು ಹೆಬ್ವಾವು ತೆರಳಿದ ಘಟನೆ ನಡೆದಿದೆ. ಆಹಾರ ಅರಸಿ ನಾಡಿಗೆ ಬಂದಿದ್ದ ಭಾರೀ ಗಾತ್ರದ ಹೆಬ್ಬಾವು ಬ್ರಾಂತಿಕಟ್ಟೆ ಕೊಡೆಂಕಿರಿ ಎಂಬಲ್ಲಿ ಆಡೊಂದನ್ನು ಬೇಟೆಯಾಡಿದ್ದು ಹಿಡಿದ ಆಡನ್ನು ನುಂಗಲು ಸುಮಾರು ಒಂದು ತಾಸು ಸೆಣಸಾಡಿ ವಿಫಲವಾಗಿ ನುಂಗಲು ಸಾಧ್ಯವಾಗದೆ ತೆರಳಿದೆ.
ಜಾರ್ಜ್ ಕುಟ್ಟಿ ಎಂಬವರಿಗೆ ಸೇರಿದ ಸುಮಾರು 40 ಕೆಜಿ ತೂಕದ ಗಂಡು ಆಡು ಹೆಬ್ಬಾವಿನ ಉರುಳಿಗೆ ಸಿಕ್ಕಿ ಉಸಿರುಗಟ್ಟಿ ಪ್ರಾಣ
ಬಿಟ್ಟಿದೆ.
ಕೊನೆಗೂ ಆಡನ್ನು ನುಂಗಲಾರದ ಹೆಬ್ಬಾವು ಆಡನ್ನು ಬಿಟ್ಟು ಪೊದೆಯೊಳಗೆ ಸೇರಿಕೊಂಡಿದೆ. ಸ್ಥಳೀಯರು ದೃಶ್ಯವನ್ನು ಸೆರೆಹಿಡಿದಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ.















