ಕಳೆದ ಕೆಲವು ದಿನಗಳಿಂದ ಟೊಮೆಟೊ ಬೆಲೆ ತೀವ್ರ ಏರಿಕೆಗೆ ಹವಮಾನ ಬದಲಾವಣೆಯೇ ಕಾರಣ ಎಂದು ಹೇಳಿದೆ. ಜೊತೆಗೆ ಸದ್ಯದಲ್ಲೇ ಟೊಮೆಟೊ ಬೆಲೆ ಇಳಿಕೆಯೂ ಆಗಲಿದೆ ಎಂದು ಭರವಸೆಯನ್ನು ನೀಡಿದೆ. ದೇಶದ ಹಲವು ನಗರಗಳಲ್ಲಿ ಟೊಮೆಟೊ ಗರಿಷ್ಠ ಬೆಲೆಯೂ ದಾಖಲಾಗಿದ್ದು, ಕೆಜಿಗೆ 120 ರೂ ಆಗಿದೆ.
ದೆಹಲಿ-ಎನ್ ಸಿ ಆರ್‌ನಲ್ಲಿ ಹಾಲು ಮತ್ತು ಹಣ್ಣುಗಳು ಮತ್ತು ತರಕಾರಿಗಳನ್ನು ಮಾರಾಟ ಮಾಡುವ ಮದರ್ ಡೈರಿಯ ಅಂಗಡಿಯಲ್ಲಿಯೂ ಸಹ ಟೊಮೆಟೊ ದರವು ಕೆಜಿಗೆ ಸುಮಾರು 80ರೂ. ಗೆ ದ್ವಿಗುಣಗೊಂಡಿದೆ. ಪ್ರಮುಖ ಉತ್ಪಾದಕ ಪ್ರದೇಶಗಳಲ್ಲಿ ಮಳೆಯಿಂದಾಗಿ ಟೊಮೆಟೊ ಪೂರೈಕೆಯಲ್ಲಿ ವ್ಯತ್ಯಯ
ಉಂಟಾಗಿದ್ದು ಅದರ ಬೆಲೆ ಗಗನಕ್ಕೇರಿದೆ.
ಮುಂಗಾರು ಆರಂಭದ ಕಾರಣ ಟೊಮೆಟೊ ಬೆಳೆ ಪ್ರಸ್ತುತ ಋತುಮಾನದ ಬದಲಾವಣೆಗಳ ಮೂಲಕ ಸಾಗುತ್ತಿದೆ. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮಳೆಯಿಂದಾಗಿ ಟೊಮೆಟೊ ಬೆಳೆ ಹಾನಿಯಾಗಿದೆ ಮತ್ತು ಬೇಡಿಕೆ ಹೋಲಿಸಿದರೆ ಅದೆ ಪೂರೈಕೆಯೂ ಕಡಿಮೆಯಾಗಿದೆ ಎಂದಿದ್ದಾರೆ.















