ಮಂಗಳೂರು: ಡಿಪ್ಲೊಮಾ ವಿದ್ಯಾರ್ಥಿಯೊಬ್ಬ ಕಾಲೇಜಿಗೆ ಸೇರಿದ ಮೊದಲ ದಿನವೇ ಮನೆಯವರು ಖರ್ಚಿಗೆ ಕಾಸ ಕೊಟ್ಟಿಲ್ಲವೆಂಬ ಕಾರಣಕ್ಕೆ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುತ್ತಾರ್ ಸುಭಾಷ್‌ನಗರದಲ್ಲಿ ನಡೆದಿದೆ.
ಕಾಲೇಜಿಗೆ ಹೋಗುವಾಗ ಖರ್ಚಿಗೆ ರೂ.500 ಕೊಡುವಂತೆ ಕೇಳಿದಾಗ ಹೆತ್ತವರು ನಿರಾಕರಿಸಿದ ಕಾರಣಕ್ಕೆ ಕೋಪದಲ್ಲಿ ಮನೆಯಲ್ಲೇ ಉಳಿದುಕೊಂಡ ಸುಶಾಂತ್ ತಂದೆ ಮನೆ ಹೊರಡೆ ಹಾಗೂ ತಾಯಿ ಅಡುಗೆ
ಕೋಣೆಯಲ್ಲೇ ಇದ್ದ ಸಂದರ್ಭ ಕೋಣೆಯೊಳಗೆ ಮನೆಯ ಪಕ್ಕಾಸಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸುಭಾಷ್‌ನಗರದ ಭಾಸ್ಕರ್ ಪೂಜಾರಿ ಮತ್ತು ದಾಕ್ಷಾಯಿಣಿ ಎಂಬವರ ಪುತ್ರ ಸುಶಾಂತ್ (17) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
















