ದಿ ಕೇರಳ ಸ್ಟೋರಿ ಚಿತ್ರದ ಮೂಲಕ ಭಾರಿ ಸದ್ದು ಮಾಡಿದ ನಟಿ ಆದಾ ಶರ್ಮಾ ಇದೀಗ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಮಾಂಡೋ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲು ಆಗಮಿಸಿದ ಆದಾ ಶರ್ಮಾ ತೀವ್ರ ಅಸ್ವಸ್ಥಗೊಂಡಿದ್ದಾರೆ. ಇಂದು ಬೆಳಗ್ಗೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಂಪೂರ್ಣ ಪಾಲ್ಗೋಳದೆ ಕಾರ್ಯಕ್ರಮದ ನಡುವೆ ವಿಶ್ರಾಂತಿ ಕೊಠಡಿಗೆ ತೆರಳಿದ್ದಾರೆ. ಈ ಸಮಯದಲ್ಲಿ ಅತಿಸಾರ
ಹಾಗೂ ವಾಂತಿಯಿಂದ ಬಳಲಿದ ಇವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ತುರ್ತು ನಿಘಾ ಘಟಕದಲ್ಲಿ ಆದಾ ಶರ್ಮಾಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆರೋಗ್ಯ ಸ್ಥಿರವಾಗಿದೆ. ಆಹಾರದಲ್ಲಿ ಏರುಪೇರಾಗಿರುವ ಕಾರಣ ಅತಿಸಾರ ಹಾಗೂ ವಾಂತಿಗೆ ಕಾರಣವಾಗಿದೆ. ಎಂದು ವೈದ್ಯರು ಹೇಳಿದ್ದಾರೆ.















