340 ಕೆಜಿಯ ಅಪರೂಪದ ಅಂಬೂರು ಮೀನು ಪತ್ತೆ

Coastal Bulletin
340 ಕೆಜಿಯ ಅಪರೂಪದ ಅಂಬೂರು ಮೀನು ಪತ್ತೆ

ಚಿಕ್ಕಮಗಳೂರು ನಗರದ ಖಾಸಗಿ ಮೀನು ಅಂಗಡಿಗೆ ಮಂಗಳೂರಿನಿಂದ 340 ಕೆ.ಜಿ ತೂಕದ ಬೃಹತ್ ಸಮುದ್ರ ಮೀನು ಬಂದಿದೆ. ಈ ಬೃಹತ್ ಮೀನು ಖರೀದಿ ಮಾಡಲು ಗ್ರಾಹಕರು ಮುಗಿಬಿದ್ದಾರೆ.

ಇದು ಮತ್ಸ್ಯ ಜಾತಿಯಲ್ಲೇ ಅಪರೂಪ ತಳಿಯಾದ ಅಂಬೂರು ಸಮುದ್ರ ಮೀನು ಆಗಿದೆ. ಈ ಮೀನು ಹೆಚ್ಚಾಗಿ ಸೌದಿ ಅರೇಬಿಯಾ ಸೇರಿದಂತೆ ವಿವಿಧ ದೇಶಘಳಿಗೆ ಭಾತರದಿಂದ ರಫ್ತಾಗುತ್ತದೆ. ಮೊದಲ ಬಾರಿಗೆ ಚಿಕ್ಕಮಗಳೂರಿನ ಗ್ರಾಹಕರ

ಬೇಡಿಕೆಗೆ ಮಣಿದು ಅಂಗಡಿ ಮಾಲೀಕ ತರಿಸಿ ಮಾರಾಟಕ್ಕೆ ಮುಂದಾದಾಗ ಗ್ರಾಹಕರ ಉತ್ಸಾಹ ಹಾಗೂ ಬೇಡಿಕೆ ಹೆಚ್ಚಾಗಿದೆ. 

ಅಪರೂಪದ ಮೀನಿಗಾಗಿ ಗ್ರಾಹಕರು ಹೆಚ್ಚಾದಂತೆ ಬೇಡಿಕೆ ಸಹ ಹೆಚ್ಚಾಗುತ್ತದೆ. 600ರೂಪಾಯಿಗೆ ನಿಗದಿಯಾಗಿದ್ದ ಬೇಡಿಕೆ ಈಗ ಸಾವಿರ ದಾಟಿದೆ. 


Leave a Comment