ಭಾರತದ ಚಂದ್ರಯಾನ-3 ರ ಲ್ಯಾಂಡರ್ ವಿಕ್ರಂ ಮತ್ತೊಮ್ಮೆ ವೇಗವನ್ನು ತಗ್ಗಿಸುವಲ್ಲಿ ಯಶಸ್ವಿಯಾಗಿದೆ. ಈಗ ಅದು ಚಂದ್ರನಿಂದ ಕೇವಲ25 ಕಿಲೋಮೀಟರ್ ದೂರದಲ್ಲಿ ಸುತ್ತುತ್ತಿದೆ. ಬರುವ ಆಗಸ್ಟ್ 23ರಂದು ಸಂಜೆ 5.47ಕ್ಕೆ ಚಂದ್ರನ ಮೇಲೆ ಇಳಿಯಲಿದೆ.
ಈಗ 100 ಕಿ.ಮೀ ಕಕ್ಷೆಯನ್ನು ಸಮೀಪಿಸುತ್ತಿದೆ, ಅದು 30 ಕಿ.ಮೀ.ಗೆ ಬಂದ ನಂತರ ಚಂದ್ರನಲ್ಲಿಗೆ ಇಳಿಯಲು ಪ್ರಾರಂಭಿಸಿತು. ಇದು ಶೇಕಡಾ 100 ರಷ್ಟು ಯಶಸ್ವಿಯಾಗಲಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ
ಸಂಸ್ಥೆ ಮಾಜಿ ಮುಖ್ಯ ನಿಯಂತ್ರಕ ಅಪತುಕಥಾ ಪಿಳ್ಳೆöÊ ತಿಳಿಸಿದ್ದಾರೆ.
ಚಂದ್ರಯಾನ ೩ ಬಾಹ್ಯಾಕಾಶ ನೌಕೆಯ ಸಾಫ್ಟ್ ಲ್ಯಾಂಡಿಂಗ್ ಸಮಯದಲ್ಲಿ ನಿರ್ಣಾಯಕ ಭಾಗವು ಬಾಹ್ಯಾಕಾಶ ನೌಕೆಯ ದಿಕ್ಕಾಗಿರುತ್ತದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ.















