18 ವರ್ಷಕ್ಕೆ ವಿಶ್ವದ ಅತಿದೊಡ್ಡ ಇಂಟರ್‌ನೆಟ್ ಚೆಸ್ ಸಂಸ್ಥೆಯ ಮಾಲೀಕನಾದ ಪ್ರಜ್ಞಾನಂದ

Coastal Bulletin
18 ವರ್ಷಕ್ಕೆ ವಿಶ್ವದ ಅತಿದೊಡ್ಡ ಇಂಟರ್‌ನೆಟ್ ಚೆಸ್ ಸಂಸ್ಥೆಯ ಮಾಲೀಕನಾದ ಪ್ರಜ್ಞಾನಂದ

ಭಾರತದ ಯುವ ಚದುರಂಗ ಪ್ರತಿಭೆ ಆರ್. ಪ್ರಜ್ಞಾನಂದ ಅಮೋಘ ನಿರ್ವಹಣೆಯ ನಡುವೆ ಫಿಡೆ ಚೆಸ್ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟರು. ವಿಶ್ವ ನಂ.1 ಮ್ಯಾಗ್ನಸ್ ಕಾರ್ಲ್ಸೆನ್ ವಿರುದ್ಧದ ಪ್ರಶಸ್ತಿ ಸುತ್ತಿನ ಹೋರಾಟದ ಟೈ ಬ್ರೇಕರ್‌ನಲ್ಲಿ ಎಡವಿದ ಪ್ರಜ್ಞಾನಂದ ೦.5-15 ರಿಂದ ಮಣಿದರು.

ಇದರ ನಡುವೆಯೂ ಟೂರ್ನಿಯಲ್ಲಿ ತೋರಿದ ಅದ್ಬುತ ಆಟದಿಂದಾಗಿ 18 ವರ್ಷದ ತರುಣ ಪ್ರಜ್ಞಾನಂದ ಕ್ರೀಡಾಪೇಮಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾದರು. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸಹಿತ ಗಣ್ಯರು ಪ್ರಜ್ಞಾನಂದ ಅವರನ್ನು ಹೊಗಳಿದ್ದಾರೆ. 

ಮಾತ್ರವಲ್ಲ ಪ್ರಜ್ಞಾನಂದ 18 ವರ್ಷ ತುಂಬುವ ಮುನ್ನವೇ ಕೋಟ್ಯಾಧಿಪತಿಯಾಗಿದ್ದಾನೆ. ಈತನು ಒಂದು ಚೆಸ್ ಸಂಸ್ಥೆಗೆ ಮಾಲೀಕನೂ ಹೌದು ಎಂದು ಮೂಲಗಳು ತಿಳಿಸಿದೆ. ಪ್ರಜ್ಞಾನಂದ ಹೆಸರಲ್ಲಿ ಒಂದು ಸಂಸ್ಥೆಯಿದೆ. ಅದರ ಹೆಸರು ಪ್ಲೇ ಮ್ಯಾಗ್ನಸ್.

ಇದು, ವಿಶ್ವದ ಅತಿ ದೊಡ್ಡ ಇಂಟರ್‌ನೆಟ್ ಚೆಸ್ ಬ್ಯುಸಿನಸ್ ಸಂಸ್ಥೆ. ಈ ಸಂಸ್ಥೆಯ ಮೌಲ್ಯ 83ಲಕ್ಷ ರೂಪಾಯಿ ಇದೆ ಎಂಬ ಮಾಹಿತಿ ಲಭ್ಯವಾಗಿದೆ. 

ಆದರೆ, ಅವರು ನಿಖರವಾಗಿ ಎಷ್ಟು ಆದಾಯ ಗಳಿಸುತ್ತಾರೆ ಎನ್ನುವುದರ ಬಗ್ಗೆ ಮಾಹಿತಿ ಇಲ್ಲ. ಭಾರತದಲ್ಲಿ ಚೆಸ್ ಗ್ರ‍್ಯಾಂಡ್‌ಮಾಸ್ಟರ್  ವೇತನ ವಾರ್ಷಿಕ 75 ಲಕ್ಷದಿಂದ 1ಕೋಟಿವರೆಗೂ ಇದೆ. ಇದು 2019 ರ ಮಾಹಿತಿ. ಸದ್ಯದ ಮಟ್ಟಿಗೆ ಈ ಸಂಬಳ ಇನ್ನಷ್ಟು ಹೆಚ್ಚಗಿರಬಹುದು ಎಂದು ಮೂಲಗಳು ತಿಳಿಸಿವೆ.  


Leave a Comment