ಚಂದ್ರನ ಅಧ್ಯಯನಕ್ಕೆ ಲ್ಯಾಂಡರ್‌ನಿಂದ ಹೊರಬಂದ ಪ್ರಗ್ಯಾನ್ ರೋವರ್

Coastal Bulletin
ಚಂದ್ರನ ಅಧ್ಯಯನಕ್ಕೆ ಲ್ಯಾಂಡರ್‌ನಿಂದ ಹೊರಬಂದ ಪ್ರಗ್ಯಾನ್ ರೋವರ್

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ವಿಜ್ಞಾನಿಗಳು ಚಂದ್ರಯಾನ-3 ನೌಕೆಯನ್ನು ಚಂದ್ರನ ಅಂಗಳದಲ್ಲಿ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಂದ್ರನ ಮೇಲೆ ಸಾಫ್ಟ್ ಲ್ಯಾಂಡ್ ಮಾಡಲಾದ ಬಳಿಕ ಮೊದಲ ಪೋಟೋವನ್ನು ಲ್ಯಾಂಡರ್ ಕಳುಹಿಸಿತ್ತು. ಇದೀಗ ವಿಕ್ರಮ್ ಲ್ಯಾಂಡರ್‌ನಿಂದ ಪ್ರಗ್ಯಾನ್ ರೋವರ್ ಅನ್ನು ಯಶಸ್ಸಿನಿಂದ ಹೊರ ತರಲಾಗಿದೆ.

ಚಂದ್ರನ ಮೇಲಿನ ಸಂಶೋಧನೆಯು 14 ದಿನಗಳವರೆಗೆ ನಡೆಯಲಿದ್ದು, ಸೌರಶಕ್ತಿಯ ಸಹಾಯದಿಂದ, ರೋವರ್ ಮತ್ತು ಲ್ಯಾಂಡರ್ ಹವಾಮಾನ ಪರಿಸ್ಥಿತಿಗಳು ಮತ್ತು ಜಾರ್ ಮೇಲಿನ ಮೇಲ್ಮೆöÊ ರಚನೆಯನ್ನು ಅನ್ವೇಷಿಸುತ್ತದೆ. ಇದಕ್ಕಾಗಿ ಇಸ್ರೋ ಅಧುನಿಕ ಉಪಕರಣಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ. 

ಚಂದ್ರಯಾಣ-3 ಮಿಷನ್ ಭಾಗವಾಗಿ, ವಿಕ್ರಮ್ ಲ್ಯಾಂಡರ್ ಚಂದ್ರನ

ಮೇಲ್ಮೆöÊಯಲ್ಲಿ ಇಳಿದ ಕೆಲವೇ ಗಂಟೆಗಳ ನಂತರ ತನ್ನ ರ್ಯಾಂಪ್ ಅನ್ನು ತೆರೆಯಿತು. ಇಸ್ರೋ ವಿಜ್ಞಾನಿಗಳು ಲ್ಯಾಂಟರ್‌ನಲ್ಲಿದ್ದ ಆರು ಚಕ್ರಗಳ ಪ್ರಜ್ಞಾನ್ ರೋವರ್ ಅನ್ನು ಚಂದ್ರನ ಮೇಲ್ಮೆöÊಗೆ ತಂದಿದ್ದಾರೆ. ಚಂದ್ರನ ನೆಲದ ಮೇಲೆ, ಅದು ಸೆಕೆಂಡಿಗೆ ಸೆ.ಮೀ ವೇಗದಲ್ಲಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.


Leave a Comment