ಲಂಚ ಆರೋಪದ ಮೇರೆಗೆ ಕೇರಳ ಸಿಎಂ ಪಿಣರಾಯಿ ಹಾಗೂ ಪುತ್ರಿ ವಿರುದ್ದ ತನಿಖೆ ಕೋರಿ ವಿಚಕ್ಷಣಾ ನ್ಯಾಯಾಲಕ್ಕೆ ಅರ್ಜಿ

Coastal Bulletin
ಲಂಚ ಆರೋಪದ ಮೇರೆಗೆ ಕೇರಳ ಸಿಎಂ ಪಿಣರಾಯಿ ಹಾಗೂ ಪುತ್ರಿ ವಿರುದ್ದ ತನಿಖೆ ಕೋರಿ ವಿಚಕ್ಷಣಾ ನ್ಯಾಯಾಲಕ್ಕೆ ಅರ್ಜಿ

ಪಿಣರಾಯಿ ಅವರ ಪುತ್ರಿ ವೀಣಾ ಥೈಕಂಡಿಯಿಲ್ ಒಡೆತನದ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಎಕ್ಸಾಲಾಜಿಕಲ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸಿಎಂಆರ್‌ಎಲ್ ರೂ 1.72ಕೋಟಿಗಳಷ್ಟು ಹಣವನ್ನು ಅಕ್ರಮವಾಗಿ ಪಾವತಿ ಮಾಡಿದೆ ಎಂದು ಆದಾಯ ತೆರಿಗೆ ಅಧಿಕಾರಿಗಳು ಇತ್ತಿಚೆಗೆ ಮಾಹಿತಿಯನ್ನು ತಿಳಿಸಿದರು. ಈ ಹಿನ್ನಲೆಯಲ್ಲಿ ಮುವಾಟ್ಟುಪುಳದ ವಿಚಕ್ಷಣಾ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.

ವೀಣಾ ಅವರು ಅನಧಿಕೃತ ಲಾಭಕ್ಕಾಗಿ ಹಣ ಪಡೆದಿದ್ದಾರೆ ಎಂದು ಅರ್ಜಿದಾರರಾದ ಗಿರೀಶ್ ಬಾಬು ಅವರು ಆರೋಪಿಸಿದ್ದಾರೆ. ಮಾತ್ರವಲ್ಲ ಕೊಚ್ಚಿನ್‌ನ ಗಣಿಗಾರಿಕೆ ಮತ್ತು ರುಟೈಲ್ ಲಿಮಿಟೆಡ್‌ನೊಂದಿಗೆ ಗಣಿಗಾರಿಕೆ ಹಾಗೂ ಇತರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಉನ್ನತ ಹುದ್ದೆಯಲ್ಲಿರುವವರು ಲಂಚ ಪಡೆದಿದ್ದು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪಗಳ ಕುರಿತಾಗಿ ತನಿಖೆ ನಡೆಸಲಾಗಿದೆ. 

ಪಿಣರಾಯಿ ಅವರಲ್ಲದೆ ವಿರೋಧ ಪಕ್ಷದ ನಾಐಕ ಮತ್ತು ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ, ರಾಜಕಾರಣಿಗಳಾದ ಕುಂಜಾಲಿ ಕಟ್ಟಿ, ವಿ ಕೆ ಇಬ್ರಾಹಿಂ ಕುಂಜು ಮತ್ತು ಎ ಗೋವಿಂದನ್ ಸೇರಿದಂತೆ ಉನ್ನತ ಹುದ್ದೆಯಲ್ಲಿರವವರು ಲಂಚ ಪಡೆದಿದ್ದಾರೆ ಎಂದು ಬಾಬು ಆರೋಪಿಸಿದ್ದಾರೆ. 


Leave a Comment