ಮಂಗಳೂರು: ವಿಶ್ವ ಜೂನಿಯರ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್-2023. 59 ಕೆ.ಜಿ. ವಿಭಾಗದಲ್ಲಿ ಆದರ್ಶ್ ಬಿ ಅತ್ತಾವರ ಚಿನ್ನದ ಪದಕದ ಸಾಧನೆ.

Coastal Bulletin
ಮಂಗಳೂರು: ವಿಶ್ವ ಜೂನಿಯರ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್-2023. 59 ಕೆ.ಜಿ. ವಿಭಾಗದಲ್ಲಿ ಆದರ್ಶ್ ಬಿ ಅತ್ತಾವರ ಚಿನ್ನದ ಪದಕದ ಸಾಧನೆ.

ಮಂಗಳೂರು: ರೊಮೇನಿಯಾದ ಕ್ಲುಜ್ ನಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್-2023(equipped) ನ 59 ಕೆ.ಜಿ. ವಿಭಾಗದಲ್ಲಿ ಗುರುವಾರ(ಆಗಸ್ಟ್ 24) ಮಂಗಳೂರಿನ ಆದರ್ಶ್ ಬಿ ಅತ್ತಾವರ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಮಂಗಳೂರು ಅತ್ತಾವರ ನಿವಾಸಿ ಭರತ್ ಕುಮಾರ್ ಹಾಗೂ ಚಂದ್ರಾಕ್ಷಿ ದಂಪತಿ ಪುತ್ರರಾದ ಇವರು ಚೆನ್ನೈ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ(ICF) ನಲ್ಲಿ ಉದ್ಯೋಗಿಯಾಗಿದ್ದಾರೆ.

2021-22ರಲ್ಲಿ ಟರ್ಕಿಯಲ್ಲಿ ನಡೆದ ಏಷಿಯನ್ ಹಾಗೂ ವರ್ಲ್ಡ್‌ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿಯೂ ಚಿನ್ನದ ಪದಕ

ಜಯಿಸಿದ್ದರು. ಇವರು ಏಕಲವ್ಯ ಪ್ರಶಸ್ತಿ ಪುರಸ್ಕೃತ ಸತೀಶ್ ಕುಮಾರ್ ಕುದ್ರೋಳಿ ಅವರಿಂದ ಬಾಲಾಂಜನೇಯ ವ್ಯಾಯಾಮ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

Leave a Comment