ಚಂದ್ರಯಾನ-3 ಯಶಸ್ವಿಯಾಗಿದೆ. ಅದರಲ್ಲಿ ಕಳುಹಿದ್ದಂತ ಪ್ರಜ್ಞಾನ್ ರೋವರ್ ಹೊರಬಂದು, ಚಂದ್ರನ ಚುಂಬನ ಮಾಡಿದೆ. ಇಂತಹ ಐತಿಹಾಸಿಕ ದಾಖಲೆ ಬರೆದಂತ ಭಾರತದ ಹೆಮ್ಮೆಯನ್ನು ನಟ ಪ್ರಕಾಶ್ ರಾಜ್ ಕೂಡ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಇಂದು ಇಡೀ ದೇಶವೇ ಸಂಭ್ರಮಾಚರಣೆಯಲ್ಲಿ ಮುಳುಗಿದೆ. ವಿಶ್ವದ ನಾನಾಕಡೆಗಳಿಂದ ಭಾರತಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಮಹೋನ್ನತ ಸಾಧನೆಗೆ
ಇಸ್ರೋ ವಿಜ್ಞಾನಿಗಳನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.
ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಎಕ್ಸ್ ಖಾತೆಯ ಮೂಲಕ ಇಸ್ರೋಗೆ ಅಭಿನಂದನೆ ತಿಳಿಸಿದ್ದಾರೆ.















