ಚಂದ್ರಯಾನ 3 ಯಶಸ್ವಿ ಉಡಾವನೆಯಲ್ಲೂ ಕಾಂಗ್ರೆಸ್ ಕೆಳಮಟ್ಟದ ರಾಜಕೀಯ- ವ್ಯಾಪಕ ಆಕ್ರೋಶ.

Coastal Bulletin
ಚಂದ್ರಯಾನ 3 ಯಶಸ್ವಿ ಉಡಾವನೆಯಲ್ಲೂ ಕಾಂಗ್ರೆಸ್ ಕೆಳಮಟ್ಟದ ರಾಜಕೀಯ- ವ್ಯಾಪಕ ಆಕ್ರೋಶ.

ನವದೆಹಲಿ: ಚಂದ್ರನ ದಕ್ಷಿಣ ದ್ರುವದಲ್ಲಿ ಲ್ಯಾಂಡರ್ ಇಳಿಸಿದ ಮೊದಲ ದೇಶ ಅನ್ನೋ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇಸ್ರೋ ಚಂದ್ರಯಾನ 3 ಮಿಷನ್ ಯಶಸ್ವಿಯಾಗಿದೆ. ನಿನ್ನೆ ಸಂಜೆ 6.04ರ ಹೊತ್ತಿಗೆ ವಿಕ್ರಮ್ ಲ್ಯಾಂಡರ್‌ನ್ನು ಯಶಸ್ವಿಯಾಗಿ ಇಳಿಸಲಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಇಡೀ ವಿಶ್ವವೇ ಕಾದು ಕುಳಿತಿತ್ತು. ಯಶಸ್ವಿಯಾಗಿ ಲ್ಯಾಂಡರ್ ಇಳಿಯುತ್ತಿದ್ದಂತೆ ಸಂಭ್ರಮ ಮನೆ ಮಾಡಿತ್ತು. ಇದರ ಬೆನ್ನಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ಶುಭಾಶಯ, ಅಭಿನಂದನೆಗಳು ಹರಿದಾಡಿದೆ. ಇನ್ನು ಕಾಂಗ್ರೆಸ್ ಕೂಡ ಚಂದ್ರಯಾನ ಯಶಸ್ಸಿನ ಬೆನ್ನಲ್ಲೇ ಟ್ವೀಟ್ ಮಾಡಿದೆ. ಆದರೆ ಇದೇ ಅಭಿನಂದನೆಗಳ ಟ್ವೀಟ್‌ನಿಂದ ಸತಃ ಕಾಂಗ್ರೆಸ್ ಪೇಚಿಗೆ ಸಿಲುಕಿದೆ.

ಕಾಂಗ್ರೆಸ್ ಚಂದ್ರಯಾನ 3 ಯಶಸ್ಸಿನ ಬೆನ್ನಲ್ಲೇ ಕಾಂಗ್ರೆಸ್ ಟ್ವೀಟ್ ಮಾಡಿದೆ. ಈ ಟ್ವೀಟ್‌ನಲ್ಲಿ ಜವಾಹರ್ ಲಾಲ್ ನೆಹರೂ ದೂರದೃಷ್ಟಿ, ನೆಹರೂ ಹಾಕಿ ಕೊಟ್ಟ ಅಡಿಪಾಯ, ನೆಹರೂ ಹಾಗೂ ಕಾಂಗ್ರೆಸ್ ಸರ್ಕಾರದ ಪ್ರಯತ್ನವೇ ಚಂದ್ರಯಾನ 3 ಫಲಿತಾಂಶ ಎಂದು ಟ್ವೀಟ್ ಮಾಡಿದೆ. ಶುಭಾಶಯದಲ್ಲೂ ಕಾಂಗ್ರೆಸ್ ರಾಜಕೀಯ ಮಾಡಿ ಟೀಕೆಗೆ ಗುರಿಯಾಗಿದೆ. ಚಂದ್ರಯಾನ

ಯಶಸ್ಸಿನ ಬಳಿಕ ಕಾಂಗ್ರೆಸ್ ಹಾಗೂ ಬಿಜೆಪಿ ಮಾಡಿದ ಟ್ವೀಟ್ ಪೋಸ್ಟ್ ಮಾಡಿ ಹಲವರು ಕಾಂಗ್ರೆಸ್ ವಿರುದ್ದ ಮುಗಿ ಬಿದ್ದಿದ್ದಾರೆ.

ಕಾಂಗ್ರೆಸ್ ಒಂದು ಕುಟುಂಬ ಹೊರತು ಇನ್ನೇನು ಯೋಚನೆ ಮಾಡುವುದಿಲ್ಲ. ಕಾಂಗ್ರೆಸ್‌ಗೆ ಒಂದು ಕುಟುಂಬವೇ ಎಲ್ಲಾ. ಕಾಂಗ್ರೆಸ್ ಈ ಪ್ರಯತ್ನ ಮಾಡಿದ್ದರೆ ಚಂದ್ರನಲ್ಲೂ ನೆಹರೂ ಹೆಸರು ಇಡುತ್ತಿದ್ದರು ಎಂದು ಹಲವರು ಕಮೆಂಟ್ ಮಾಡಿದ್ದಾರೆ.

Leave a Comment