ಇಂದು ಚೆಸ್‌ಪಟು ಆರ್ ಪ್ರಜ್ಞಾನಂದ ಇತಿಹಾಸ ಸೃಷ್ಟಿಸುವ ನಿರೀಕ್ಷೆಯಲ್ಲಿ ಭಾರತ

Coastal Bulletin
ಇಂದು ಚೆಸ್‌ಪಟು ಆರ್ ಪ್ರಜ್ಞಾನಂದ ಇತಿಹಾಸ ಸೃಷ್ಟಿಸುವ ನಿರೀಕ್ಷೆಯಲ್ಲಿ ಭಾರತ

ಇಂದು ಭಾರತೀಯರು ಚಂದ್ರಯಾನದ ಯಶಸ್ವಿ ಲ್ಯಾಂಡಿಂಗ್ ಆದ ಕಾರಣದಿಂದ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಜೊತೆಗೆ ಇಂದು 18 ವರ್ಷದ ಭಾರತದ ಯುವ ಚೆಸ್ ಆಟಗಾರ ಆರ್ ಪ್ರಜ್ಞಾನಂದ ಚೆಸ್ ವಿಶ್ವಕಪ್ ಫೈನಲ್ ಪಂದ್ಯ ಆಡುತ್ತಿರುವುದು ಭಾರತೀಯರ ಸಂತೋಷಕ್ಕೆ ಇನ್ನೊಂದು ಕಾರಣವಾಗಿದೆ.

ವಿಶ್ವಕಪ್ ಚೆಸ್ ಪಂದ್ಯಾವಳಿಯ ಪೈನಲ್ ಪಂದ್ಯದಲ್ಲಿ ಸತತ ಎರಡನೇ ದಿನವೂ ಭಾರತದ ಗ್ರ‍್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ವಿಶ್ವ ನಂ.1 ಮ್ಯಾರ್ಗ್ನಸ್ ಕಾರ್ಲ್ಸನ್ ವಿರುದ್ದ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇಂದು ಕಡಿಮೆ

ಅವಧಿಯ ಟೈಬ್ರೇಕರ್ ಪಂದ್ಯ ನಡೆಯಲಿದ್ದು, ಇಂದಿನ ಪಂದ್ಯವಲ್ಲಿ ವಿಜೇತರ ತೀರ್ಮಾನವಾಗಲಿದೆ. ಒಂದು ವೇಳೆ ಇಂದು ಪ್ರಜ್ಞಾನಂದ ಗೆದ್ದರೆ ವಿಶ್ವನಾಥನ್ ಆನಂದ್ ಬಳಿಕ ಸಾಧನೆ ಮಾಡಿದ ಭಾರತೀಯ ಎಂಬ ಹೆಮ್ಮೆಗೆ ಪಾತ್ರರಾಗಿದ್ದಾರೆ. 


Leave a Comment