ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಈಗ ದೇಶ ವ್ಯಾಪಿಯಾಗಿ ಸುದ್ದಿಯಾಗುತ್ತಿತ್ತು. ರಾಜ್ಯದಲ್ಲಿ ಹಲವಾರು ಸಂಘಸಂಸ್ಥೆಗಳು ಈಗ ಸೌಜನ್ಯ ಹತ್ಯೆಯನ್ನು ಖಂಡಿಸಿ ಧ್ವನಿ ಎತ್ತಿದ್ದಾರೆ. ಆದರೆ ಇದೀಗ ರಾಜ್ಯದ ಸಿನಿಮಾ ನಟರು ಕೂಡ ಸೌಜನ್ಯ ಹತ್ಯೆ ಖಂಡಿಸಿ ಧ್ವನಿ ಎತ್ತಿದ್ದಾರೆ.
ಸತ್ಯ ಅನ್ನುವುದು ಸೂರ್ಯನ ಬೆಳಕು ಇದ್ದಂತೆ. ಹೆಚ್ಚು ಸಮಯ ಮರೆಮಾಚಲು ಸಾಧ್ಯವಿಲ್ಲ. ಅದೇ ರೀತಿ ಸೌಜನ್ಯ ಕೊಲೆ ಪ್ರಕರಣದಲ್ಲಿ ಬಹಳಷ್ಟು ವಿಚಾರಗಳು ಇಂದಿಗೂ ರಹಸ್ಯವಾಗಿಯೇ ಉಳಿದಿದೆ. ಆದುದರಿಂದ ಆಕೆಯ ಸಾವಿಗೆ ಸರಿಯಾದ ನ್ಯಾಯ ಸಿಗುವ ವರೆಗೆ ಆ ದೇವರ ದರ್ಶನ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಈ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಸೌಜನ್ಯನನ್ನು ಹತ್ಯೆ ಮಾಡಿರುವುದು ಯಾರೇ ಆಗಲಿ ಅವರನ್ನು ಆದಷ್ಟು ಬೇಗ ಬಂಧಿಸುವಂತಹ ಕೆಲಸ ಮಾಡಬೇಕು. ಈ ದೇಶದ ಕಾನೂನು ಎಲ್ಲರಿಗೂ ಒಂದೇ. ಸತ್ಯದ ಕಣ್ಣಿಗೆ ಮಣ್ಣೆರಚಿ ಅಡಗಿ ಕುಳಿತಿರುವ ಸೌಜನ್ಯ ಹಂತಕರಿಗೆ ಶಿಕ್ಷೆ ಆಗಲೇಬೇಕು ಎಂದು ಹೇಳಿದ್ದಾರೆ.















