ಮೇಷ ಮನಸ್ಸಿಗೆ ಒಂದು ರೀತಿಯ ಸಂತೋಷ ಇರುತ್ತದೆ. ಹಣದ ಒಳಹರಿವು ಉತ್ತಮವಾಗಿರುತ್ತದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ನಡುವಳಿಕೆಯಿಂದ ಜನರ ಮನಸ್ಸನ್ನು ಗೆದ್ದು ಕಾರ್ಯಸಾಧನೆ ಮಾಡುವಿರಿ. ಸ್ಥಿರಾಸ್ತಿಯ ವಿಷಯದಲ್ಲಿ ಸಂತೋಷ ಪಡುವಂತಹ ವಿಚಾರವೊಂದನ್ನು ಕೇಳುವಿರಿ.
ವೃಷಭ
ಮಾತಿನಲ್ಲಿ ಬಹಳ ಕಾಠಿಣ್ಯತೆ ಇರುತ್ತದೆ. ಹಣದ ಒಳಹರಿವು ಅವಶ್ಯಕತೆ ಪೂರೈಸುವಷ್ಟು ಇರುತ್ತದೆ. ಒಡಹುಟ್ಟಿದವರಿಗಾಗಿ ಹಣ ಖರ್ಚು ಮಾಡುವಿರಿ. ವಿದ್ಯಾರ್ಥಿಗಳಿಗೆ ಅವರ ಅಭ್ಯಾಸದಲ್ಲಿ ನಿರೀಕ್ಷಿತ ಫಲಿತಾಂಶವನ್ನು ಪಡೆಯುವ ಯೋಗವಿದೆ.
ಮಿಥುನ
ಸ್ವತಂತ್ರ ಉದ್ಯೋಗದಲ್ಲಿ ಶ್ರಮಪಟ್ಟು ಮೇಲುಗೈ ಸಾಧಿಸುವಿರಿ. ಹೆಣ್ಣುಮಕ್ಕಳಿಗೆ ಬೇಗ ವಿವಾಹ ನಿಗದಿಯಾಗುವ ಸಂದರ್ಭವಿದೆ. ಆಸ್ತಿ ವಿಚಾರದಲ್ಲಿ ಸರಿಯಾದ ನಿರ್ಧಾರವನ್ನು ಕೈಗೊಳ್ಳುವುದು ಒಳ್ಳೆಯದು. ರಾಜಕಾರಣಿಗಳಿಗೆ ಅವರ ನಾಯಕರುಗಳಿಂದ ಹೆಚ್ಚಿನ ಒತ್ತಡ ಬರುತ್ತದೆ.
ಕಟಕ
ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ದೊರೆಯುವ ಲಕ್ಷಣಗಳಿವೆ. ಹೆಚ್ಚಿನ ವ್ಯಾಸಂಗಕ್ಕಾಗಿ ಸ್ಥಳ ಬದಲಾವಣೆಯಾಗಬಹುದು. ಆರ್ಥಿಕ ಸ್ಥಿತಿಯು ಸಾಮಾನ್ಯ ಮಟ್ಟದಲ್ಲಿರುತ್ತದೆ. ಹಿತೈಷಿಗಳಿಂದ ಸ್ವಲ್ಪ ಮಟ್ಟಿನ ಆರ್ಥಿಕ ಸಹಾಯ ದೊರೆಯುತ್ತದೆ.
ಸಿಂಹ
ಎಣ್ಣೆ ಮತ್ತು ಎಣ್ಣೆ ಕಾಳುಗಳನ್ನು ಮಾರಾಟ ಮಾಡುವವರ ವ್ಯವಹಾರದಲ್ಲಿ ಹೆಚ್ಚಿನ ಲಾಭವಿರುತ್ತದೆ. ಸಾಮಾಜಿಕ ಕಾರ್ಯಗಳನ್ನು ಹೆಚ್ಚು ಮಾಡಿ ತನ್ಮೂಲಕ ರಾಜಕೀಯ ಪ್ರವೇಶ ಮಾಡುವಿರಿ. ಕಾರ್ಖಾನೆಯ ಕೆಲಸಗಾರರಿಗೆ ಬೇಡಿಕೆಗಳು ಈಡೇರುವ ಸಂದರ್ಭ. ಸಂಗಾತಿಯನ್ನು ಹುಡುಕುವ ಬಗ್ಗೆ ಮನೆಯಲ್ಲಿ ಹೆಚ್ಚಿನ ಮಾತುಗಳಾಗುತ್ತವೆ.
ಕನ್ಯಾ
ಹೊಸ ಉದ್ಯೋಗದ ವಿಷಯದಲ್ಲಿ ಆತ್ಮೀಯರಿಂದ ಸೂಕ್ತ ಸಲಹೆ ದೊರೆಯುತ್ತದೆ. ಸಂಗಾತಿ ನಡೆಸುತ್ತಿದ್ದ ಭೂ ವ್ಯಾಜ್ಯಗಳಲ್ಲಿ ಜಯದೊರೆಯುತ್ತದೆ. ವಿನಾಕಾರಣ ಇತರರ ವಿಷಯದಲ್ಲಿ ಅನಗತ್ಯ ಚರ್ಚೆ ಮಾಡುವುದು ಒಳಿತಲ್ಲ. ಇದು ನಿಮಗೆ ತಿರುಗುಬಾಣವಾಗಬಹುದು.
ತುಲಾ
ಪ್ರೇಮಿಗಳ ಇಷ್ಟಾರ್ಥಗಳು ಈಡೇರದೆ ಮುನಿಸಿಕೊಳ್ಳಬಹುದು. ಉದ್ಯೋಗ ರಂಗದಲ್ಲಿ ಇದ್ದ
ಒತ್ತಡಗಳು ಕಡಿಮೆಯಾಗಿ ಮನಸ್ಸಿಗೆ ಸಂತೋಷವೆನಿಸುತ್ತದೆ. ಮಕ್ಕಳಿಂದ ಧನಸಹಾಯ ದೊರೆಯುವ ಸಾಧ್ಯತೆ ಇದೆ. ಶಿಕ್ಷಣ ಕ್ಷೇತ್ರದಲ್ಲಿರುವ ಕೆಲವರಿಗೆ ಗೌರವಗಳು ದೊರೆಯುತ್ತವೆ.
ವೃಶ್ಚಿಕ
ಹಣ್ಣು ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ದೊರೆಯುತ್ತದೆ. ಅರಣ್ಯಾಧಿಕಾರಿಗಳಿಗೆ ಪ್ರೋತ್ಸಾಹಧನ ಬರುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿಯಲ್ಲಿ ಸ್ವಲ್ಪ ಸಫಲತೆಯನ್ನು ಕಾಣಬಹುದು. ಕಾಡುತ್ತಿದ್ದ ರಾಜಕೀಯ ಅನಿಶ್ಚಿತತೆ ನಿವಾರಣೆಯಾಗುತ್ತದೆ.
ಧನು
ಮಕ್ಕಳ ಶ್ರೇಯಸ್ಸಿನ ಬಗ್ಗೆ ಸಾಕಷ್ಟು ಸಂತೋಷವಾದ ವಾರ್ತೆಗಳನ್ನು ಕೇಳುವಿರಿ. ಆರ್ಥಿಕ ವಿಚಾರದಲ್ಲಿ ಚೇತರಿಕೆ ಕಾಣಬಹುದು. ಉನ್ನತ ಶಿಕ್ಷಣದ ವಿಷಯದಲ್ಲಿ ಸ್ನೇಹಿತರಿಂದ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ದೊರೆಯುತ್ತದೆ.
ಮಕರ
ದೊಡ್ಡ ದೊಡ್ಡ ಹೂಡಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಬರುತ್ತದೆ. ನೀರಾವರಿ ಗುತ್ತಿಗೆದಾರರಿಗೆ ಹೊಸ ಗುತ್ತಿಗೆಗಳು ಸಿಗುವ ಸಂದರ್ಭವಿದೆ. ಔಷಧಿ ವಿತರಕರಿಗೆ ಹೊಸ ಹೊಸ ಜಾಗಗಳಲ್ಲಿ ವಿತರಣೆ ಮಾಡುವ ಅವಕಾಶ ದೊರೆಯುತ್ತದೆ.
ಕುಂಭ
ಲೇವಾದೇವಿ ನಡೆಸುತ್ತಿದ್ದವರಿಗೆ ಹಳೆಯ ಬಾಕಿ ವಸೂಲಿಗಳು ಈಗ ಆಗುತ್ತದೆ. ನಿಮ್ಮ ಪ್ರಭಾವದಿಂದ ನಿಮ್ಮೊಡನೆ ಕೆಲಸ ಮಾಡುತ್ತಿರುವವರನ್ನು ಹುರಿದುಂಬಿಸಿ ಉತ್ತಮ ಕೆಲಸ ಮಾಡಿಸುವಿರಿ. ಸೋದರಿಯ ಸಹಾಯ ಸಕಾಲಕ್ಕೆ ದೊರೆಯುತ್ತದೆ
ಮೀನ
ಧನಾದಾಯವು ತೃಪ್ತಿಕರವಾಗಿರುತ್ತದೆ. ಸಂಗೀತಗಾರರಿಗೆ ಉತ್ತಮ ಸಂಭಾವನೆ ದೊರೆಯುತ್ತದೆ. ಲೆಕ್ಕಪರಿಶೋಧಕರಿಗೆ ಬಿಡುವಿಲ್ಲದ ಕೆಲಸವಿದ್ದು ಸಂಪಾದನೆ ಹೆಚ್ಚುತ್ತದೆ. ಮಕ್ಕಳ ಅನುಕೂಲಕ್ಕೋಸ್ಕರ ಹೆಚ್ಚು ಹಣ ಖರ್ಚು ಮಾಡುವಿರಿ. ಕೇಶಾಲಂಕಾರ ಮಾಡುವವರಿಗೆ ಹೆಚ್ಚು ಕೆಲಸ ದೊರೆತು ಸಂಪಾದನೆ ಹೆಚ್ಚುತ್ತದೆ.














