ಬಂಟ್ವಾಳ: ನಮ್ಮ ನಿರೀಕ್ಷೆಗಿಂತಲೂ ಹೆಚ್ಚಾಗಿ ದೇವಂದಬೆಟ್ಟು ಬ್ರಹ್ಮಕಲಶ ಯಶಸ್ವಿಯಾಗಿದೆ. ಎಲ್ಲಾ ವಿಭಾಗಗಳಲ್ಲೂ ಸ್ವಯಂಸೇವಕರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಕೆಲಸ ಸುಗಮವಾಗಿ ಸಾಗಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಉಪಾಧ್ಯಾಯ ತಿಳಿಸಿದರು.ಅವರು ಭಾನುವಾರ ದೇವಂದಬೆಟ್ಟು ಬ್ರಹ್ಮಕಲಶ ಅವಲೋಕನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಭಗವಂತನ ಅನುಗ್ರಹವಿಲ್ಲದೆ ಒಂದು ಹುಲ್ಲುಕಡ್ಡಿಯೂ ಅಲುಗಾಡಲು ಸಾಧ್ಯವಿಲ್ಲ. ಎಲ್ಲವು ಸಾನಿಧ್ಯ ದೇವರ ಮಹಿಮೆಯಿಂದಲೇ ನಡೆದಿದೆ ಎಂದು ಶಿವರಾಮ ಶಿಬರಾಯ ನುಡಿದರು.
ದೇವಸ್ಥಾನದ ಹಿಂದಿನ ವ್ಯವಸ್ಥೆ, ಜನರ ಪರಿಸ್ಥಿತಿ ಹಾಗೂ ಪ್ರಸ್ತುತ ಸ್ಥಿತಿ ಮತ್ತು ನಡೆದಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗೌರವಾಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಮುಂಡಾಜೆಗುತ್ತು ಮಾಹಿತಿ ನೀಡಿದರು.
ಸಂಚಾಲಕ ತೇವು ತಾರಾನಾಥ ಕೊಟ್ಟಾರಿ ಫರಂಗಿಪೇಟೆ ಅವರು ಮಾತನಾಡಿ, ವಿವಿಧ ವಿಭಾಗಗಳಲ್ಲಿ ಸ್ವಯಂಸೇವಕರು ಸಲ್ಲಿಸಿರುವ ಸೇವೆಗಳನ್ನು ಸ್ಮರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ನಿರಂತರ ಸಭೆಗಳನ್ನು ನಡೆಸಿ, ಹಲವು ಭಾರಿ ಚರ್ಚಿಸಿ ಅಗತ್ಯ ಕಾಮಗಾರಿಗಳನ್ನು ನಡೆಸಲಾಗಿದೆ. ಮಾತೆಯರ ಮತ್ತು ಶ್ರಮಿಕರ ಸೇವೆ ನಿಜಕ್ಕೂ ಅಭಿನಂದನಾರ್ಹ ಎಂದು ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ರಂಗೋಲಿ ನುಡಿದರು.
ಪ್ರಧಾನ ಕಾರ್ಯದರ್ಶಿ ಗಣೇಶ್ ಸುವರ್ಣ ತುಂಬೆ, ಅರ್ಚಕ ರಾಧಾಕೃಷ್ಣ ಕಡಂಬಳಿತ್ತಾಯ,
ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸತೀಶ್ ಶೆಟ್ಟಿ ಮೊಡಂಕಾಪು, ದಿವಾಕರ ಶೆಟ್ಟಿ ಕುಪ್ಪಿಲ, ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಅಮಿತಾ ವಿಶ್ವನಾಥ್ ದಾಸರಕೋಡಿ, ಉಮಾ ಲಿಂಗಪ್ಪ ತುಂಬೆ ಪ್ರಮುಖರಾದ ಜನಾರ್ದನ ಸಾಲ್ಯಾನ್ ಮುಂಡಾಜೆ, ಜ್ಯೋತಿಂದ್ರ ಶೆಟ್ಟಿ ಮುಂಡಾಜೆಗುತ್ತು, ನಾರಾಯಣ ಹೊಳ್ಳ ಹೊಳ್ಳರಬೈಲು, ರಾಮಕೃಷ್ಣ ಆಳ್ವ ಪೊನ್ನೋಡಿ, ರಾಘವೇಂದ್ರ ಕಾರಂತ ಕನಪಾಡಿ, ಸೋಮಪ್ಪ ಕೋಟ್ಯಾನ್ ತುಂಬೆ, ಪದ್ಮನಾಭ ರಾವ್ ಕನಪಾಡಿ, ಓಮಯ್ಯ ಜೆ ಕೋಟ್ಯಾನ್ ಮೇಗಿನಮನೆ, ದಿವಾಕರ ಪಂಬದಬೆಟ್ಟು, ಮನೋಜ್ ವಳವೂರು, ಮಾಧವ ವಳವೂರು, ಯೋಗೀಶ್ ದರಿಬಾಗಿಲು, ಉಮಾ ಚಂದ್ರಶೇಖರ್ ತುಂಬೆ, ಯಶೋದಾ ಜಾರಂದಗುಡ್ಡೆ, ಮಣಿಮಾಲ ಶೆಟ್ಟಿ ನುಂಗೂರು, ಪ್ರತಿಭಾ ಶೆಟ್ಟಿ ಪಲ್ಲಮಜಲು ಮತ್ತಿತರರು ಉಪಸ್ಥಿತರಿದ್ದರು. ಕೋಶಾಧಿಕಾರಿ ಕವಿರಾಜ್ ಚಂದ್ರಿಗೆ ಲೆಕ್ಕಪತ್ರ ಮಂಡಿಸಿದರು. ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ದಾಮೋದರ ನೆತ್ತರಕೆರೆ ಕಾರ್ಯಕ್ರಮ ನಿರೂಪಿಸಿದರು. ದೇವಿಪ್ರಸಾದ್ ಎಂ ದೇವಂದಬೆಟ್ಟು ಪ್ರಾರ್ಥಿಸಿದರು.














