ತುಂಬೆ : ಕುಲಾಲ ಸೇವಾ ಸಂಘ ಆಶ್ರಯದಲ್ಲಿ 11ನೇ ವರ್ಷದ ಆಟಿದ ನೆನಪು ಮತ್ತು ವಾರ್ಷಿಕ ಮಹಾಸಭೆ  

Coastal Bulletin
ತುಂಬೆ : ಕುಲಾಲ ಸೇವಾ ಸಂಘ ಆಶ್ರಯದಲ್ಲಿ 11ನೇ ವರ್ಷದ ಆಟಿದ ನೆನಪು ಮತ್ತು ವಾರ್ಷಿಕ ಮಹಾಸಭೆ  

ಬಂಟ್ವಾಳ : ಶ್ರೀ ಶಾರದಾ ಸಭಾಭವನ ರಾಮನಗರ ತುಂಬೆ ಇಲ್ಲಿ ಕುಲಾಲ ಸೇವಾ ಸಂಘ ಹಾಗೂ ಮಹಿಳಾ ಘಟಕ ತುಂಬೆ ಇದರ ಆಶ್ರಯದಲ್ಲಿ 11ನೇ ವರ್ಷದ ಆಟಿದ ನೆನಪು ಕಾರ್ಯಕ್ರಮದ ಕ್ರೀಡಾಕೂಟಕ್ಕೆ ಪುಟಾಣಿ ಗಳು ದೀಪ ಬೆಳಗಿಸಿ ಚಾಲನೆ ನೀಡಿದರು.ಮಧ್ಯಾಹ್ನ ನಡೆದ ಭೋಜನಕ್ಕೆ ಸಂಘದ ಸದಸ್ಯರು ಮನೆಯಲ್ಲಿ ತಯಾರಿಸಿದ ಆಟಿ ತಿಂಗಳ ವಿವಿಧ ಬಗೆಯ ಖಾದ್ಯಗಳನ್ನು ಎಲ್ಲರೂ ಸವಿದರು.

ಅಪರಾನ್ಹ ನಡೆದ ಮಹಾಸಭೆಯ ಅಧ್ಯಕ್ಷ ತೆಯನ್ನು ಸಂಘದ ಅಧ್ಯಕ್ಷರಾದ ಭಾಸ್ಕರ್ ಕುಲಾಲ್ ವಹಿಸಿದ್ದರು. ಮುಖ್ಯ ಅತಿಥಿಯಾದ ಶ್ರೀ ಸುರೇಶ್ ಕುಮಾರ್ ಬಿ. ನಾವೂರು,ವಕೀಲರು ಹಾಗೂ ಮಂಗಳೂರು ವಿಶ್ವ ವಿದ್ಯಾ ನಿಲಯದ ಸಿಂಡಿಕೇಟ್ ಸದಸ್ಯರು, ದೀಪ ಬೆಳಗಿಸಿ ತೆಂಗಿನ ಸಿಂಗಾರ ಅರಳಿಸಿ ಉದ್ಘಾಟಿಸಿ ಮಾತನಾಡಿ ಸಂಘ ಸ್ಥಾಪನೆಯಾಗಿ ಕೆಲವೇ ವರ್ಷವಾದರೂ, ಸಂಘದ ಸಾಧನೆ ಎಲ್ಲರೂ ಮೆಚ್ಚು ವಂತಹುದು. ಹಿರಿಯರು ಕಿರಿಯರು ಜೊತೆಗೂಡಿ ಮಾಡಿದ ಚಟುವಟಿಕೆ ಮತ್ತು ಕಾರ್ಯಕ್ರಮ ಶ್ಲಾಘನೀಯ, ಶೀಘ್ರ ಸಂಘ ಸ್ವಂತ ಕಟ್ಟಡ ಹೊಂದು ವಂತಾಗಲಿ ಎಂದು ಶುಭ ಹಾರೈಸಿದರು.  ಸಂಘದ ಸ್ಥಾಪಕ ಅಧ್ಯಕ್ಷರಾದ ನೀಲಪ್ಪ ಸಾಲಿಯಾನ್ ಮತ್ತು ಅತಿಥಿ ಸುರೇಶ್ ಕುಮಾರ್ ಬಿ. ನಾವೂರು ಇವರನ್ನು  ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ  ಇನ್ನೊರ್ವ ಮುಖ್ಯ ಅತಿಥಿ ಸುಮಿತ್ ಸಾಲಿಯಾನ್ ಸೊರ್ನಾಡು ಅಧ್ಯಕ್ಷರು ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟ ಬಂಟ್ವಾಳ ಘಟಕ,  ಶೇಷಪ್ಪ ಮಾಸ್ಟರ್ ಗೌರವ ಸಲಹೆಗಾರರು, ಶ್ರೀಮತಿ ಪ್ರಿಯಾ ಸತೀಶ್   ಉಪಾಧ್ಯಕ್ಷರು ಮಹಿಳಾ ಘಟಕ,ಶ್ರೀಮತಿ ಶೋಭಾ ಸದಾನಂದ ಪ್ರ.ಕಾರ್ಯದರ್ಶಿ ಮಹಿಳಾ ಘಟಕ  ಉಪಸ್ಥಿತರಿದ್ದರು.

ಎಸ್ ಎಸ್ ಎಲ್ ಸಿ  ಹಾಗೂ ಪಿ

ಯು ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು. ಬಡ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹಧನ ನೀಡಲಾಯಿತು. ವಿದ್ಯಾರ್ಥಿಗಳ ಪಟ್ಟಿಯನ್ನು ದಿನೇಶ್ ಕುಲಾಲ್ ವಾಚಿಸಿದರು.ಪೂರ್ವಾನ್ಹ ನಡೆದ ಆಟೋಟ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿಜೇತರ ಪಟ್ಟಿಯನ್ನು ಕು.ಧನ್ಯ ವಾಚಿಸಿದರು. ಕಾರ್ಯಕ್ರಮ ದಲ್ಲಿ ಮಹಿಳಾ ಘಟಕದ ಸದಸ್ಯರು ಹಾಗೂ ವಿದ್ಯಾ ರ್ಥಿಗಳು ಮನರಂಜನಾ ಕಾರ್ಯಕ್ರಮ ನೀಡಿದರು.ಆಟಿ ತಿಂಗಳ ಮಹತ್ವ ಸಾರುವ ಆಟಿ ಕಳಂಜ ನೃತ್ಯ ವನ್ನು ಶ್ರೀಮತಿ ಪಾರ್ವತಿ ಐತಪ್ಪ ಹಾಗೂ ಶ್ರೀಮತಿ ಮಾಲತಿ ದಿನೇಶ್ ಪ್ರದರ್ಶಿಸಿದರು.ಪ್ರಾರ್ಥನೆಯನ್ನು ಶ್ರೀಮತಿ ಶೋಭಾ ಸದಾನಂದ ಹಾಡಿದರು. ಅಧ್ಯಕ್ಷರಾದ ಭಾಸ್ಕರ ಕುಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ವಾರ್ಷಿಕ ವರದಿಯನ್ನು ಸದಾನಂದ ಕುಲಾಲ್ ವಾಚಿಸಿದರು.  ಶ್ರೀಮತಿ ಲತಾ ಗೋಪಾಲ್ ವಂದಿಸಿದರು.ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಭಾರತಿ ಶೇಸಪ್ಪ ಆಟೋಟ ಸ್ಪರ್ಧೆಯನ್ನು ನಡೆಸಿಕೊಟ್ಟು ಕಾರ್ಯಕ್ರಮ ನಿರೂಪಿಸಿದರು. ವಿಶೇಷ ವಾಗಿ ಹರೀಶ್ ಕುಲಾಲ್,  ಪವನ್ ಕುಮಾರ್ ,  ಅಶೋಕ್ ಕುಲಾಲ್,  ಕೀರ್ತೇಶ್ ಕುಲಾಲ್, ಸಂದೀಪ್ ಮುದಲ್ಮೆ, ಐತಪ್ಪ ಕುಲಾಲ್, ಲಿಂಗಪ್ಪ ಕುಲಾಲ್ , ಪುರುಷ ಹಾಗೂ ಮಹಿಳಾ ಘಟಕದ ಎಲ್ಲಾ ಸದಸ್ಯರು ಸಹಕರಿಸಿದರು.

Leave a Comment