Coastal Bulletin

ಮೇಷ ಕೆಲವರಿಗೆ ರಾಜಕೀಯದಲ್ಲಿ ಸೂಕ್ತ ಸ್ಥಾನಮಾನ ದೊರೆಯುವ ಸಾಧ್ಯತೆ ಇದೆ. ನಿಮ್ಮ ಸಿಡುಕುತನದ ಸ್ವಭಾವದಿಂದ ಹಿರಿಯ ನಾಯಕರುಗಳಿಂದ ದೂರವಾಗುವ ಸಾಧ್ಯತೆ ಇದೆ, ಎಚ್ಚರ. ಹಣದ ಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಅವರಿವರ ಮಾತು ಕೇಳಿ ಬೇರೆಯವರನ್ನು ನಿಂದಿಸುವುದರಿಂದ ನಿಮಗೇ ಹಾನಿ.

ವೃಷಭ

ಮಕ್ಕಳ ಶ್ರೇಯಸ್ಸಿಗಾಗಿ ಅಧಿಕಾರಿಗಳ ಮೊರೆ ಹೋಗುವ ಸಾಧ್ಯತೆ ಇದೆ. ಗುತ್ತಿಗೆ ವ್ಯವಹಾರವನ್ನು ಮಾಡುತ್ತಿರುವವರಿಗೆ ಹೊಸಗುತ್ತಿಗೆಗಳು ದೊರೆಯುವ ಸಂದರ್ಭವಿದೆ. ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳೊಡನೆ ಇದ್ದ ಮನಃಸ್ತಾಪ ದೂರವಾಗುತ್ತದೆ.

ಮಿಥುನ

ಮನಸ್ಸಿನಲ್ಲಿ ಹೆಚ್ಚಿನ ಹುಮ್ಮಸ್ಸು ತುಂಬಿ ಕೆಲಸ ಕಾರ್ಯ ಮಾಡಲು ಮುಂದಡಿ ಇಡುವಿರಿ. ಹೊಸ ವಸ್ತ್ರಗಳನ್ನು ಖರೀದಿ ಮಾಡಲು ಮುಂದಾಗುವಿರಿ. ಆಸ್ತಿ ವಿಚಾರಗಳ ಬಗ್ಗೆ ಬಂಧುಗಳಲ್ಲಿ ಒಮ್ಮತ ಮೂಡಿ ಆಸ್ತಿ ವಿಭಾಗವಾಗುವುದು. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. 

ಕಟಕ

ಕಟ್ಟಡ ನಿರ್ಮಾಣ ಕಾರ್ಯ ಮಾಡುವ ಎಂಜಿನಿಯರುಗಳಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ವಸ್ತ್ರ ವಿನ್ಯಾಸಕಾರರಿಗೆ ಬೇಡಿಕೆ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಚೇತರಿಕೆಯನ್ನು ಕಾಣಬಹುದು. ಖರ್ಚನ್ನು ಮಿತಿಯಲ್ಲಿ ಇಟ್ಟುಕೊಳ್ಳುವುದು ಬಹಳ ಉತ್ತಮ.

ಸಿಂಹ

ಪ್ರೀತಿಪಾತ್ರರೊಂದಿಗೆ ಸಂತೋಷ ಕೂಟಗಳಲ್ಲಿ ಭಾಗವಹಿಸುವಿರಿ. ಹೊಸ ಭಾಷೆಗಳನ್ನು ಕಲಿಯಲು ಹೊಸ ರೀತಿಯ ಆಸಕ್ತಿ ಮೂಡುತ್ತದೆ. ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ಅಲ್ಪಸ್ವಲ್ಪ ಕಾನೂನು ತೊಡಕುಗಳು ಎದುರಾಗಬಹುದು. 

ಕನ್ಯಾ

ಬಾಲ್ಯ ಸ್ನೇಹಿತರೊಂದಿಗೆ ಕೂಡಿ ಹಳೆಯ ನೆನಪುಗಳನ್ನು ಹಂಚಿಕೊಳ್ಳುವ ಸಂದರ್ಭವಿದೆ. ತಾಂತ್ರಿಕ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳು ಒದಗಿಬರುವ ಸಾಧ್ಯತೆ ಇದೆ. ಸರ್ಕಾರಿ ಸಂಸ್ಥೆಗಳೊಂದಿಗೆ ವ್ಯಾಪಾರ ವ್ಯವಹಾರ ಮಾಡುತ್ತಿರುವವರ ವ್ಯವಹಾರಗಳು ಹೆಚ್ಚುತ್ತವೆ. 

ತುಲಾ

ಕಟ್ಟಡ ನಿರ್ಮಾಣ ಕೆಲಸಗಾರರಿಗೆ ಹೆಚ್ಚಿನ ಜಾಗರೂಕತೆಯ ಅಗತ್ಯತೆ ಇದೆ. ಸಾಮಾಜಿಕವಾಗಿ ಗೌರವಗಳು ಕಡಿಮೆಯಾಗಬಹುದು. ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ಪ್ರಗತಿ ಇರುತ್ತದೆ. ಕೆಲವರಿಗೆ ಉದ್ಯೋಗ

ಸ್ಥಳದಲ್ಲಿ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಧಾರ್ಮಿಕ ಕಾರ್ಯಗಳಿಂದ ಸಂಪಾದನೆ ಆಗುತ್ತದೆ

ವೃಶ್ಚಿಕ

ಕೈಬಿಟ್ಟು ಹೋಗಿದ್ದ ಹಿರಿಯರ ಆಸ್ತಿಯನ್ನು ಪುನಃ ಪಡೆಯಬಹುದು. ಯಾವುದೇ ವಿಷಯದಲ್ಲೂ ಅತಿಯಾದ ಉದ್ವೇಗವನ್ನು ಮಾಡಿಕೊಳ್ಳದಿರುವುದು ಬಹಳ ಉತ್ತಮ. ಹಣದ ಒಳಹರಿವು ಸಾಮಾನ್ಯಗತಿಯಲ್ಲಿ ಇರುತ್ತದೆ. ಸಿಮೆಂಟು, ಮರಳು ಇತ್ಯಾದಿ ಕಟ್ಟಡ ನಿರ್ಮಾಣ ವಸ್ತುಗಳನ್ನು ಮಾರಾಟ ಮಾಡುವವರ ಲಾಭ ಹೆಚ್ಚುತ್ತದೆ. 

ಧನು

ರಾಸಾಯನಿಕ ವಸ್ತುಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಲಾಭವಿರುತ್ತದೆ. ಹತ್ತಿರದ ಬಂಧುಗಳೊಡನೆ ಸುಧೀರ್ಘ ಸಮಾಲೋಚನೆಯಿಂದ ಕಾರ್ಯಸಿದ್ದಿ ಆಗುತ್ತದೆ. ಕೆಲವು ಮಹಿಳೆಯರ ಆಸೆ ಆಕಾಂಕ್ಷೆಗಳು ಈಡೇರಬಹುದು. ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳ ಹಿರಿಯ ಅಧಿಕಾರಿಗಳಿಗೆ ವರ್ಗಾವಣೆಯ ಸಾಧ್ಯತೆಯಿದೆ.

ಮಕರ

ವ್ಯಾಪಾರ-ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ಲಾಭವನ್ನು ಕಾಣಬಹುದು. ಬಹಳ ದಿನಗಳಿಂದ ನೀವು ನಿರೀಕ್ಷಿಸುತ್ತಿದ್ದ ಸಮಾಚಾರ ಕೇಳಿಬಂದು ಮನಸ್ಸಿನಲ್ಲಿ ಇದ್ದ ದುಗುಡಗಳು ಮರೆಯಾಗುತ್ತವೆ. ವೈದ್ಯರುಗಳಿಗೆ ಹೆಚ್ಚು ಸಂಪಾದನೆಯಾಗುವ ಕಾಲ.

ಕುಂಭ

ಈ ರಾಶಿಯ ಮಕ್ಕಳು ಮತ್ತು ಯುವಕರು ವಿನಾಕಾರಣ ವಾದವಿವಾದಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಯಿದೆ. ಆಸ್ತಿ ವಿಚಾರದಲ್ಲಿ ಮುನ್ನಡೆಯನ್ನು ಕಾಣಬಹುದು. ಪ್ರವಚನಗಳನ್ನು ನೀಡಲು ದೇವಾಲಯ ಅಥವಾ ಧಾರ್ಮಿಕ ಸಂಸ್ಥೆಗಳಿಗೆ ಹೋಗುವಿರಿ.

ಮೀನ

ತಾಯಿಯ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವನ್ನು ಕಾಣಬಹುದು. ವಿದೇಶಿ ಬಂಧುಗಳ ಆಗಮನವನ್ನು ನಿರೀಕ್ಷೆ ಮಾಡಬಹುದು. ನಿತ್ಯ ಕೆಲಸದ ಜೊತೆಗೆ ಸಂಸಾರದ ಕಡೆಗೂ ಗಮನ ಕೊಡುವುದು ಅತಿ ಅಗತ್ಯ. ಅನಿರೀಕ್ಷಿತ ಪ್ರಯಾಣ ಸಂಭವಿಸಿ ಹೆಚ್ಚು ಖರ್ಚಿಗೆ ನಾಂದಿಯಾಗಬಹುದು. 

Leave a Comment