ಮೇಷ ಒಂದು ರೀತಿಯ ವ್ಯಗ್ರತೆ ನಿಮ್ಮನ್ನು ಕಾಡಬಹುದು. ಹಣದ ಹರಿವು ಅವಶ್ಯಕತೆಗೆ ತಕ್ಕಷ್ಟು ಇರುತ್ತದೆ. ಸರ್ಕಾರಿ ಆಸ್ತಿಗಳನ್ನು ಕೊಳ್ಳುವ ಮನಸ್ಸು ಇರುತ್ತದೆ ಅಥವಾ ಅದರ ವ್ಯವಹಾರದಲ್ಲಿ ಸಾಕಷ್ಟು ಮುನ್ನಡೆಯನ್ನು ಕಾಣಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಮುನ್ನಡೆ ಇರುತ್ತದೆ. ರಕ್ತಸಂಬಂಧಿ ಕಾಯಿಲೆಗಳಿರುವವರು ಎಚ್ಚರ ವಹಿಸಿರಿ.
ವೃಷಭ
ಬಹಳ ಚುರುಕಾಗಿ ಎಲ್ಲ ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ಹಣದ ಒಳಹರಿವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ಎಲ್ಲ ಕಾರ್ಯಗಳಲ್ಲಿ ಭಾಗವಹಿಸಿ ಚುರುಕಾಗಿ ಓಡಾಡುತ್ತೀರಿ. ವಿದ್ಯಾರ್ಥಿಗಳಿಗೆ ಉತ್ತಮ ಅಧ್ಯಯನ ಮಾಡುವ ಯೋಗವಿದೆ. ಉದರಕ್ಕೆ ಸಂಬಂಧಪಟ್ಟ ಕಾಯಿಲೆ ಇರುವವರು ಚಿಕಿತ್ಸೆಗೆ ಹೋಗುವುದು ಒಳ್ಳೆಯದು.
ಮಿಥುನ
ಉಲ್ಲಾಸಕರವಾದ ವಾತಾವರಣ ಇರುತ್ತದೆ. ಆದಾಯದಷ್ಟೇ ಖರ್ಚು ಇರುತ್ತದೆ. ಸ್ವಯಂ ಉದ್ಯೋಗ ಮಾಡುವವರ ವ್ಯವಹಾರ ಹೆಚ್ಚುತ್ತದೆ. ಕಟ್ಟಡಗಳನ್ನು ಕಟ್ಟುವ ಸಂಸ್ಥೆಗಳಿಗೆ ಕಾನೂನು ತೊಡಕುಗಳು ಎದುರಾಗಬಹುದು. ನಿಮ್ಮ ಅಗತ್ಯತೆಗೆ ಬೇಕಾದ ಸಾಲ ಸೌಲಭ್ಯಗಳು ದೊರೆಯುತ್ತವೆ. ಮಕ್ಕಳಿಂದ ಅಗೌರವ ಆಗಬಹುದು.
ಕಟಕ
ಹೊಸ ಜನರ ಪರಿಚಯವಾಗುವ ಸಾಧ್ಯತೆಗಳಿವೆ. ಸರ್ಕಾರಿ ಕೆಲಸಕಾರ್ಯಗಳಲ್ಲಿ ಮುನ್ನಡೆಯನ್ನು ಕಾಣಬಹುದು. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ನಿಮ್ಮ ನಡವಳಿಕೆಯು ಸಂಪೂರ್ಣ ವ್ಯಾವಹಾರಿಕವಾಗಿರುತ್ತದೆ. ಆಸ್ತಿ ಮಾಡುವ ವಿಚಾರದಲ್ಲಿ ಹಿನ್ನಡೆಯನ್ನು ಕಾಣಬಹುದು. ಮಕ್ಕಳ ಸಂತೋಷಕ್ಕಾಗಿ ಹೆಚ್ಚು ಹಣ ಖರ್ಚು ಮಾಡುವಿರಿ.
ಸಿಂಹ
ಸ್ವಲ್ಪ ಆಲಸಿತನ ಹೆಚ್ಚಾಗುವ ಸಾಧ್ಯತೆಗಳಿವೆ. ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು. ಒಡಹುಟ್ಟಿದವರ ಸಂಬಂಧಗಳಲ್ಲಿ ವ್ಯತ್ಯಾಸಗಳು ಆಗುವ ಸೂಚನೆ ಇದೆ. ವಿದೇಶಗಳಿಗೆ ಆಹಾರ ವಸ್ತುಗಳನ್ನು ರಫ್ತು ಮಾಡುವವರ ವ್ಯವಹಾರದಲ್ಲಿ ಸ್ವಲ್ಪ ಕಾನೂನು ತೊಡಕುಗಳು ಆಗಬಹುದು. ಸೂಕ್ತ ದಾಖಲೆಗಳನ್ನು ಒದಗಿಸಿದಲ್ಲಿ ಎಲ್ಲವೂ ಪರಿಹಾರವಾಗುತ್ತದೆ. ಮಕ್ಕಳ ಏಳಿಗೆ ನಿಧಾನಗತಿಯಲ್ಲಿ ಇರುತ್ತದೆ.
ಕನ್ಯಾ
ಸರ್ಕಾರಿ ಸಂಸ್ಥೆಗಳ ಜೊತೆ ಮಾಡುವ ವ್ಯವಹಾರಗಳಲ್ಲಿ ನಿಧಾನಗತಿ ಇರುತ್ತದೆ. ಸ್ವಂತ ವ್ಯವಹಾರಗಳಲ್ಲಿ ಅಭಿವೃದ್ಧಿ ಇರುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಬಂಧು ಬಾಂಧವರಿಂದ ನಿಷ್ಠುರಗಳು ಎದುರಾಗಬಹುದು. ದೈವಭಕ್ತಿ ಹೆಚ್ಚಾಗುವ ಸಾಧ್ಯತೆ ಇದೆ. ಸಾಲಗಾರರ ಕಾಟ ಹೆಚ್ಚಾಗುವ ಸಾಧ್ಯತೆಗಳಿವೆ.
ತುಲಾ
ಮನಸ್ಸಿನಲ್ಲಿ ಪಾಪಪ್ರಜ್ಞೆ ಕಾಡುತ್ತಿರುತ್ತದೆ. ಹಣಕಾಸಿನ ಬಿಕ್ಕಟ್ಟುಗಳು
ಹೆಚ್ಚಾಗಬಹುದು. ನೀವು ನಂಬಿದ್ದ ಜನರು ಕೈಕೊಡುವ ಸಾಧ್ಯತೆಗಳಿವೆ. ತಂದೆಯಿಂದ ಸಿದ್ಧ ಉಡುಪುಗಳ ವ್ಯವಹಾರ ಮಾಡಲು ಹಣಸಹಾಯ ದೊರೆಯುತ್ತದೆ. ಹೈನುಗಾರಿಕೆ ಮಾಡಲು ಹೋದ ಕೆಲವರಿಗೆ ಹಿಂಜರಿಕೆ ಉಂಟಾಗಬಹುದು. ಉದ್ಯೋಗ ಸ್ಥಳದಲ್ಲಿ ಅಭಿವೃದ್ಧಿ ಇರುತ್ತದೆ. ವೃತ್ತಿಯ ಸ್ಥಳದಲ್ಲಿದ್ದ ಗೋಜಲುಗಳು ಮರೆಯಾಗುತ್ತವೆ.
ವೃಶ್ಚಿಕ
ವಿದೇಶದಲ್ಲಿ ಇರುವವರಿಗೆ ಸ್ವದೇಶದಲ್ಲಿ ಆಸ್ತಿ ಮಾಡುವ ಯೋಗವಿದೆ. ಹಣದ ಒಳಹರಿವು ಸಾಮಾನ್ಯಗತಿಯಲ್ಲಿ ಇರುತ್ತದೆ. ಹಿರಿಯರಿಂದ ನಿಮಗೆ ಸಲ್ಲಬೇಕಾದ ಆಸ್ತಿ ಪಾಲು ದೊರೆಯುತ್ತದೆ. ಎಣ್ಣೆ ಕಾಳುಗಳನ್ನು ಬೆಳೆಯುವವರಿಗೆ ಬೇಡಿಕೆ ಹೆಚ್ಚುತ್ತದೆ.
ಧನು
ಆಲಸ್ಯದ ನಡವಳಿಕೆ ನಿಮ್ಮದಾಗಿರುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ತೀಕ್ಷ್ಣವಾಗಿ ಮಾತನಾಡಿ ನಿಮ್ಮತನವನ್ನು ತೋರಿಸಿಕೊಳ್ಳುವಿರಿ. ಆಸ್ತಿ ಮಾಡುವ ವಿಚಾರದಲ್ಲಿ ಪ್ರಗತಿಯನ್ನು ಸಾಧಿಸಬಹುದು. ಮಕ್ಕಳ ನಡುವಳಿಕೆ ಸಾಕಷ್ಟು ಅಚ್ಚರಿಯನ್ನು ಉಂಟುಮಾಡುತ್ತದೆ.
ಮಕರ
ಕೆಲಸದ ಒತ್ತಡ ಅಧಿಕವಾಗಿರುತ್ತದೆ. ಹಣದ ಹರಿವು ಕಡಿಮೆ ಇದ್ದರೂ ಜಾಣ್ಮೆಯಿಂದ ನಿಮ್ಮ ಆರ್ಥಿಕ ನಿರ್ವಹಣೆಯನ್ನು ಮಾಡುವಿರಿ. ನಡವಳಿಕೆಯಲ್ಲಿ ಹೆಚ್ಚಿನ ದೈವಭಕ್ತಿ ಕಂಡುಬರುತ್ತದೆ. ಆಸ್ತಿ ವಿಚಾರದಲ್ಲಿ ಹೆಚ್ಚಿನ ತಗಾದೆ ಬೇಡ. ವಿದ್ಯಾರ್ಥಿಗಳಿಗೆ ಉತ್ತಮ ಕಾಲ.
ಕುಂಭ
ಬೇಕಾಗಿದ್ದ ಎಲ್ಲ ರೀತಿಯ ಸವಲತ್ತುಗಳು ದೊರೆತು ವಿದ್ಯಾರ್ಥಿಗಳಿಗೆ ಸಂತೋಷವಾಗುತ್ತದೆ. ನಿಶ್ಚಿತ ಆಸ್ತಿಯನ್ನು ಖಂಡಿತ ಖರೀದಿ ಮಾಡಬಹುದು. ಕಣ್ಣಿನ ತೊಂದರೆ ಇರುವವರು ಎಚ್ಚರವಹಿಸಿರಿ. ಹಣದ ಒಳಹರಿವು ಉತ್ತಮವಾಗಿದ್ದರೂ ಸಹ ನಿರ್ವಹಣೆ ಅತಿ ಮುಖ್ಯ.
ಮೀನ
ಸರ್ಕಾರಿ ಕೆಲಸಗಳಲ್ಲಿ ಸಾಕಷ್ಟು ಮುನ್ನಡೆ ಇರುತ್ತದೆ. ಲೇವಾದೇವಿ ಅಥವಾ ಬಡ್ಡಿ ವ್ಯವಹಾರ ಖಂಡಿತ ಬೇಡ. ಸಹೋದರಿಯರಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ಭೂ ವ್ಯವಹಾರ ಮಾಡುವವರಿಗೆ ವ್ಯಾಪಾರ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ದರ್ಜೆಯ ವಿದ್ಯಾಸೌಲಭ್ಯ ದೊರೆಯುತ್ತದೆ. ಹೃದಯದ ತೊಂದರೆ ಇರುವವರು ಹೆಚ್ಚಿನ ಎಚ್ಚರಿಕೆ ವಹಿಸಿರಿ.
















