ಮೇಷ ವೃತ್ತಿ ಮತ್ತು ಪ್ರವೃತ್ತಿಗಳಲ್ಲಿ ವ್ಯತ್ಯಾಸಗಳನ್ನು ಅರಿತು ಸಮಾಧಾನಚಿತ್ತದಿಂದ ಇರುವುದು ಬಹಳ ಮುಖ್ಯ. ಪ್ರೇಮ ಪ್ರಕರಣದಲ್ಲಿ ದುಡುಕುತನ ಖಂಡಿತ ಬೇಡ. ಹಣದ ಒಳಹರಿವು ನಿರೀಕ್ಷೆಯ ಮಟ್ಟದ ಹತ್ತಿರ ಇರುತ್ತದೆ. ನೆರೆಹೊರೆಯವರೊಡನೆ ಕಲಹ ಏರ್ಪಡುವ ಸಂಭವವಿದೆ.
ವೃಷಭ
ಗೃಹೋಪಯೋಗಿ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವವರ ವ್ಯವಹಾರ ವಿಸ್ತರಿಸುತ್ತದೆ. ವೃತ್ತಿಯಲ್ಲಿ ನಿಮ್ಮ ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಗೌರವ ದೊರೆಯುತ್ತದೆ. ವ್ಯಾಪಾರ-ವ್ಯವಹಾರಗಳಲ್ಲಿ ನಿಮ್ಮ ಪಾಲಿನ ಲಾಭ ದೊರೆಯುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಂಭವವಿದೆ.
ಮಿಥುನ
ಹೊಸ ವ್ಯಕ್ತಿಗಳಿಂದ ಹೆಚ್ಚಿನ ಸಹಕಾರ ದೊರೆಯುತ್ತದೆ. ಸಿನಿಮಾ ಕಲಾವಿದರುಗಳಿಗೆ ಹೆಚ್ಚಿನ ಅವಕಾಶ ದೊರೆತು ಸಂಪಾದನೆ ಹೆಚ್ಚುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳಲು ಆಲೋಚನೆಯನ್ನು ಮಾಡುವಿರಿ.
ಕಟಕ
ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಅಗತ್ಯ. ಹಣದ ಕೊಡು-ಕೊಳ್ಳುವ ವ್ಯವಹಾರದಲ್ಲಿ ಹೆಚ್ಚು ನೈಪುಣ್ಯತೆಯನ್ನು ಸಾಧಿಸಿತೋರುವಿರಿ. ಹಣದ ಹರಿವು ನಿರೀಕ್ಷೆಯಷ್ಟು ಇದ್ದರೂ ಖರ್ಚಿಗೆ ಕಡಿವಾಣ ಹಾಕಲೇ ಬೇಕಾದ ಅನಿವಾರ್ಯವಿದೆ. ಸಾರ್ವಜನಿಕ ಗೌರವ ಸ್ವೀಕರಿಸಲು ಹೋದಾಗ ಹೊಸ ಜವಾಬ್ದಾರಿ ಒಂದು ಹೆಗಲೇರುತ್ತದೆ.
ಸಿಂಹ
ಗುರುತರವಾದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ ಬಂಧುಗಳ ನಡುವೆ ಭೇಷ್ ಎನಿಸಿಕೊಳ್ಳುವಿರಿ. ಆರ್ಥಿಕ ವಿಷಯದಲ್ಲಿ ಪ್ರಗತಿಯನ್ನು ಕಾಣುವಿರಿ. ಬಂಧುಗಳಲ್ಲಿ ನಿಮ್ಮ ಬಗ್ಗೆ ಭಿನ್ನಾಭಿಪ್ರಾಯಗಳು ಹೆಚ್ಚುತ್ತವೆ. ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸ್ವಲ್ಪ ನಿರಾಳ ಆಗುತ್ತದೆ.
ಕನ್ಯಾ
ಸರ್ಕಾರಿ ಮಟ್ಟದ ಕೆಲಸಕಾರ್ಯಗಳಲ್ಲಿ ಪ್ರಗತಿ ಕಾಣಬಹುದು. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ನಿಮ್ಮ ಕೆಲಸಗಳಿಗೆ ತಾಯಿಯ ಸಹಕಾರ ಸಂಪೂರ್ಣವಾಗಿ ದೊರೆಯುತ್ತದೆ. ಹೆಚ್ಚಿನ ಶ್ರಮವನ್ನು ಹಾಕಲೇಬೇಕಾದ ಪರಿಸ್ಥಿತಿ ವಿದ್ಯಾರ್ಥಿಗಳಿಗೆ ಇದೆ. ಸಾಲಗಾರರು ವಸೂಲಿಗೆ ಬಂದು ಪೀಡಿಸಬಹುದು.
ತುಲಾ
ವಿದ್ಯಾರ್ಥಿಗಳು ಅಧ್ಯಯನದಲ್ಲಿ ಹೆಚ್ಚು ಗಮನ ಹರಿಸುವುದು ಒಳ್ಳೆಯದು. ಹಣದ ಒಳಹರಿವಿನಲ್ಲಿ ಚೇತರಿಕೆಯನ್ನು ಕಾಣಬಹುದು. ಮಹಿಳಾ ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ. ಆದಾಯದ ಹೊಸಮೂಲಗಳ ಹುಡುಕಾಟ ನಡೆಸುವಿರಿ.
ಸಂಗಾತಿಯ ಕೋಪಕ್ಕೆ ತಾಳ್ಮೆಯೇ ಉತ್ತರ.
ವೃಶ್ಚಿಕ
ಆರ್ಥಿಕ ಅಭಿವೃದ್ಧಿ ಬಗ್ಗೆ ಹೊಸಮಾರ್ಗವನ್ನು ಕಂಡುಕೊಳ್ಳುವಿರಿ. ಹಿರಿಯರಿಗೆ ಬಹಳ ದಿನಗಳಿಂದ ಕಿರಿಕಿರಿ ಉಂಟು ಮಾಡುತ್ತಿದ್ದ ಸಮಸ್ಯೆಗಳು ಪರಿಹಾರವಾಗುತ್ತವೆ. ಸಾಮಾಜಿಕ ಸೇವೆಗಳನ್ನು ಮಾಡಿ ಸಂತಸಪಡುವಿರಿ. ಕೆಲವೊಂದು ಕೆಲಸಗಳಿಗೆ ನಿಮ್ಮ ಮಿತ್ರರ ಸಂಪೂರ್ಣ ಸಹಕಾರ ದೊರೆತು ಕೆಲಸವಾಗುತ್ತದೆ. ಆಸ್ತಿ ವಿವಾದಗಳಲ್ಲಿ ಹೊಸ ಆಶಾಕಿರಣವೊಂದು ಮೂಡುತ್ತದೆ.
ಧನು
ವ್ಯವಹಾರವನ್ನು ಚತುರತೆಯಿಂದ ಮಾಡದಿದ್ದಲ್ಲಿ ಲಾಭಾಂಶ ಕಡಿಮೆಯಾಗಬಹುದು. ವಿದೇಶದಲ್ಲಿ ಇರುವವರಿಗೆ ಸ್ಥಿರಾಸ್ತಿ ಖರೀದಿ ಮಾಡುವ ಯೋಗವಿದೆ. ನಿಮ್ಮ ಮಕ್ಕಳಿಂದ ಸಂತೋಷಪಡುವ ಕಾಲ ಬಂದೊದಗಿದೆ. ದೈನಂದಿನ ಚಟುವಟಿಕೆಗಳಲ್ಲಿ ಹೆಚ್ಚಿನ ಉತ್ಸಾಹ ಮೂಡಿ ಸರಾಗವಾಗಿ ಕೆಲಸಗಳು ಆಗುತ್ತವೆ.
ಮಕರ
ಬಂಧು ಬಾಂಧವರೊಡನೆ ಕೂಡಿ ಸಂತೋಷವಾಗಿ ಕಾಲ ಕಳೆಯುವಿರಿ. ಮಹಿಳೆಯರ ಆರೋಗ್ಯ ವಿಚಾರದಲ್ಲಿ ಪ್ರಗತಿಯನ್ನು ಕಾಣಬಹುದು. ಧನದ ಒಳಹರಿವು ಸಾಮಾನ್ಯಗತಿಯಲ್ಲಿ ಇರುತ್ತದೆ. ಮಹಿಳೆಯರಿಗೆ ಆಭರಣಗಳನ್ನು ಖರೀದಿ ಮಾಡುವ ಅವಕಾಶಗಳಿವೆ. ಉದ್ಯೋಗಸ್ಥರಿಗೆ ತಮ್ಮ ಮೇಲಧಿಕಾರಿಗಳಿಂದ ಪ್ರಶಂಸೆಯ ಮಾತನ್ನು ಕೇಳುವ ಅವಕಾಶವಿದೆ.
ಕುಂಭ
ಯುವಕರು ಆತುರತೆಯಿಂದ ಕೆಲಸಮಾಡಲು ಹೋಗಿ ತೊಂದರೆಯನ್ನು ತಂದುಕೊಳ್ಳುವರು. ಅನವಶ್ಯಕ ಮಾತುಗಳಿಗೆ ಅಥವಾ ವ್ಯವಹಾರಗಳಿಗೆ ತಲೆ ಹಾಕದಿರುವುದು ಉತ್ತಮ. ಹಿರಿಯ ಲೇಖಕರಿಗೆ ಗೌರವ ಸನ್ಮಾನಗಳು ದೊರೆಯುವ ಸಾಧ್ಯತೆಗಳಿವೆ. ತಾಯಿಯಿಂದ ಕೆಲಸಕಾರ್ಯಗಳಿಗೆ ಸಾಕಷ್ಟು ಸಹಾಯ ದೊರೆಯುತ್ತದೆ.
ಮೀನ
ಅನೇಕ ದಿನಗಳಿಂದ ನನೆಗುದಿಗೆ ಬಿದ್ದಿದ್ದ ನಿಮ್ಮ ವಿರುದ್ಧದ ವಿಚಾರ ಗರಿಗೆದರುವ ಸಾಧ್ಯತೆ ಇದೆ. ಯಾವುದೇ ಕೆಲಸ ಕಾರ್ಯಗಳಲ್ಲಿ ಆತುರದ ನಿರ್ಧಾರ ಖಂಡಿತ ಬೇಡ. ವೈಯಕ್ತಿಕ ಜೀವನದಲ್ಲಿ ಅಭಿವೃದ್ಧಿ ಇರುತ್ತದೆ. ಲೇವಾದೇವಿ ವ್ಯವಹಾರಗಳು ಖಂಡಿತಬೇಡ. ನೀವು ಬಳಸುವ ಆಯುಧಗಳ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ಅಲಂಕಾರಿಕ ವಸ್ತುಗಳನ್ನು ಕೊಳ್ಳುವ ಸಾಧ್ಯತೆ ಇದೆ.
















