Coastal Bulletin

ಮೇಷ ರಾಶಿ : ಗುರು ನಿಮ್ಮ ರಾಶಿಗೆ ಪ್ರವೇಶ ಮಾಡಿದ್ದಾನೆ. ಹೊಸ ಯೋಜನೆಗಳು ಹೊಸ ಖರ್ಚಿಗೆ ದಾರಿ. ಈಗ ಪ್ರಯತ್ನ ಜಾಸ್ತಿ ಫಲ‌ ಕಡಿಮೆ.‌ ಗುರು ಬಲ ಕಡಿಮೆಯಾದರೂ ಶನಿ ಬಲ ಇದೆ. ಶನಿಯ ಅನುಕೂಲ ಸ್ಥಿತಿಯಿಂದ ಕೆಲ ಸಕಾರ್ಯಗಳು ಸುಲಭ ಎನಿಸುತ್ತದೆ. ಬಹುದಿನಗಳಿಂದ‌ ನೆನೆಗುದಿಗೆ ಬಿದ್ದ ಯೋಜನೆಯೊಂದು ಈಗ ನೆರವೇರುವ ಸಮಯ.‌ ಸೂರ್ಯ ಉಚ್ಛನಾಗಿ ನಿಮ್ಮ ರಾಶಿಯಲ್ಲಿ ಗುರು ಬುಧ ರಾಹುವಿನೊಂದಿಗೆ ಇದ್ದಾನೆ. ನಿಮ್ಮ ರಾಶಿಗೆ ಈ ನಾಲ್ಕು ಗ್ರಹಗಳ ಸಂಯೋಗ ಶುಭಫಲಗಳನ್ನು ನೀಡುತ್ತದೆ.

ವೃಷಭ ರಾಶಿ : ಗುರು ಈಗ ನಿಮ್ಮ ರಾಶಿಯ12 ನೇ ಮನೆಯಲ್ಲಿ‌ಇದ್ದಾನೆ. ಖರ್ಚುಗಳು ತಳಮಳಗಳು‌ಇರುತ್ತದೆ. ಹೊಸ ಸಮಸ್ಯೆಯೊಂದು ಹುಡುಕಿ ಬರುತ್ತದೆ. ಅದನ್ನು ಸಮಸ್ಯೆ ಆಗಿಸದೇ ಸಮಚಿತ್ತದಿಂದ ಸ್ವೀಕರಿಸುವುದು ನಿಮ್ಮ ಕೈಯಲ್ಲೇ ಇದೆ. 12ನೇ ಮನೆಯಲ್ಲಿ ನಾಲ್ಕು ಗ್ರಹಗಳು ಸೇರಿವೆ. ಇದು ನಿಮಗೆ ಖರ್ಚುಗಳನ್ನು ತೋರಿಸದರೂ ನಿಮ್ಮ ರಾಶಿಯಲ್ಲೇ ಇರುವ ಶುಕ್ರ ನಿಮಗೆ ಸೌಖ್ಯವನ್ನು ಕರುಣಿಸುತ್ತಾನೆ. ದೇವರ ದರ್ಶನ ಭಾಗ್ಯ ಇದೆ.

ಮಿಥುನ ರಾಶಿ : ಈಗ ನಿಮಗೆ ದೈವ ಬಲ ಗುರುಬಲ ಎರಡೂ ಇದೆ. ಇದುವರೆಗೂ ಅನುಭವಿಸಿದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ತಾಯಿಯಿಂದ ಸಹಕಾರ ಬೆಂಬಲ‌ ಇದೆ.‌ ಶಿವನ ದರ್ಶನ ಮಾಡಿ. ಮನೆಯ ಸಮಸ್ಯೆಗಳು ಒಂದು ಹಂತಕ್ಕೆ ಪರಿಹಾರ ಕಾಣಲಿದೆ. ಚಂದ್ರನು ಕಟಕ ಸಿಂಹ ರಾಸದಿಯಲ್ಲಿ ಸಂಚರಿಸುವಾಗ ಧನ ಲಾಭ ಆಗುತ್ತದೆ. ಈಗ ವೃತ್ತಿಯಲ್ಲಿ ಯಶಸ್ದು, ಬಡ್ತಿ ಮೊದಲಾದ ಶುಭಫಲಗಳಿವೆ. ವಿದೇಶ ಪ್ರವಾಸ ಯೋಗ ಇದೆ.‌

ಕಟಕ ರಾಶಿ : ಈಗ ಗುರುಬಲ‌ ಇಲ್ಲದಿರುವುದು ಮತ್ತು ಶನಿ ವ್ಯತಿರಿಕ್ತ ಸ್ಥಾನದಲ್ಲಿ ಇರುವುದೂ ನಿಮಗೆ ಸ್ವಲ್ಪಮಟ್ಟಿಗೆ ಕಳವಳಕಾರಿ ಆಗಿದೆ.‌ ಶನಿಯ ದಶನಾಮ‌ಸ್ತೋತ್ರ ಪಠಿಸಿ. ರುದ್ರದೇವರನ್ನು ಆರಾಧಿಸಿ. ‌ಸೂರ್ಯ, ರಾಹು, ಗುರು ಹಾಗೂ ಬುಧ ಹತ್ತನೆಯ ಮನೆಯಲ್ಲಿ ಇದ್ದು ವೃತ್ತಿ ಸಂಬಂಧವಾಗಿ ಯಶಸ್ಸನ್ನು ಕೊಡುತ್ತಾರೆ. ಮನೆಯ ವಾತಾವರಣ ಕೊಂಚ ಗೊಂದಲಗಳಿಂದ ಕೂಡಿರುತ್ತದೆ. ಹಣಕಾಸಿನ ಖರ್ಚು ಇದೆ. ಬೇಡದ ಪ್ರಯಾಣ ಅಲೆದಾಟ ಕಿರಿಕಿರಿ ಇರುತ್ತದೆ. ಬೇಸರಿಸಬೇಡಿ ಒಳ್ಳೆಯ ಸಮಯ ಖಂಡಿತಾ ಮುಂದೆ ಇದೆ.‌

ಸಿಂಹ ರಾಶಿ : ನಿಮಗೆ ಈಗ ಗುರುಬಲ ಪ್ರಾರಂಭವಾಗಿದೆ. ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸಿದೆ. ಧನಾಗಮನ‌ ಸುಗಮವಾಗಿದೆ.‌ ಮನೆಯಲ್ಲಿ ದೈವಕಾರ್ಯ ಶುಭಕಾರ್ಯ ನಡೆಯುವ ಸೂಚನೆಗಳು ಇವೆ. ಆಭರಣ ವಸ್ತ್ರ ಖರೀದಿ ಮಾಡುತ್ತೀರಿ. ಪ್ರವಾಸ ಹೋಗುತ್ತೀರಿ. ವೃತ್ತಿಯಲ್ಲಿ ಯಶಸ್ಸನ್ನು ಗಳಿಸುತ್ತೀರಿ. ಪ್ರಶಂಸೆ ಗಳಿಸುತ್ತೀರಿ.‌ ಅವಿವಾಹಿತರಿಗೆ ವಿವಾಹದ ಮಾತುಕತೆಗಳು ನಡೆಯುತ್ತದೆ.

ಕನ್ಯಾ ರಾಶಿ : ನಿಮಗೆ ಈಗ ಗುರುಬಲ ಕಡಿಮೆ ಆಯಿತು. ಎಂಟನೇ ಮನೆಯಲ್ಲಿ ನಾಲ್ಕು ಗ್ರಹಗಳು ಸೇರಿವೆ. ಕೊಂಚ ಜಾಗ್ರತೆ ವಹಿಸಿ. ದೂರ ಪ್ರಯಾಣಗಳನ್ಜು ಮುಂದೂಡಿ. ಮುಖ್ಯ ತೀರ್ಮಾನಗಳನ್ನೂ ಮುಂದೂಡಿ. ಕೋರ್ಟು ಕೇಸುಗಳಿದ್ದರೆ ಮುಂದಿನ ದಿನಾಂಕ ತೆಗೆದುಕೊಳ್ಳಿ. ಆರೋಗ್ಯ ಜಾಗ್ರತೆ ಶನಿ ಬಲ ಇರುವುದರಿಂದ ಹಣಕ್ಕೆ ಕೊರತೆ ಇಲ್ಲ. ಧನಾಗಮನ ಚೆನ್ನಾಗಿದೆ. ವಿದ್ಯಾರ್ಥಿಗಳಿಗೆ ಕೊಂಚ ಹಿನ್ನಡೆ ಇದೆ.

ತುಲಾ ರಾಶಿ : ಈಗ ನಿಮಗೆ ಗುರುಬಲ ಬಂದಿದೆ. ಯಾವಕೆಲಸ ಮಾಡಲೂ ಅಡ್ಡಿಯಿಲ್ಲ. ಅನುಕೂಲಗಳು ತಾನಾಗಿ

ಒದಗಿ ಬರುತ್ತದೆ. ಹಣದ ಹರಿವು ಉತ್ತಮವಾಗಿದೆ. ಪ್ರಶಸ್ತಿ ಸನ್ಮಾನ ಅರ್ಹರಿಗೆ ಹುಡುಕಿ ಬರುತ್ತದೆ.‌ ಪ್ರವಾಸ ಯೋಗ ಇದೆ. ಆಭರಣ ಖರೀದಿ ಮಾಡುತ್ತೀರಿ.‌ ದೇಹಕ್ಕೆ ಮನಸ್ಸಿಗೆ ಸೌಖ್ಯ ಇದೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ಮನೆಯಲ್ಲಿ ಶುಭ ಕಾರ್ಯದ ಮಾತುಕತೆಗಳು ನಡೆಯುತ್ತವೆ.

ವೃಶ್ಚಿಕ ರಾಶಿ : ಇನ್ನೇನು ಕೈಗೆ ಸಿಕ್ಕಿತು ಎಂದು ಕೊಂಡದ್ದು ದೂರದೂರ ಸರಿಯುತ್ತದೆ. ಮನಸ್ಸಿಗೆ ವ್ಯಾಕುಲ. ಸಂಸಾರದಲ್ಲೂ ನೆಮ್ಮದಿ ಕಡಿಮೆ. ನಿಮ್ಮವರೇ ನಿಮಗೆ ವಿರೋಧವಾಗುತ್ತಾರೆ. ನಿಮ್ಮಿಂದ ಉಪಕಾರ ಪಡೆದವರು ನಿಮಗೆ ತಿರುಗಿ ಬೀಳುತ್ತಾರೆ. ಹಣದ ಹರಿವು ಮಧ್ಯಮ. ಸಾಲ ತೀರಿಸಲು ಅನುಕೂಲವಾಗುತ್ತದೆ. ಮದುವೆ ಮಾತುಕತೆಗಳು ಮುಂದಕ್ಕೆ ಹೋಗುತ್ತದೆ.

ಧನಸ್ಸು ರಾಶಿ : ನೀವು ಏನು ಬಯಸುತ್ತೀರೋ ಅದು ಈಗ ನಿಮ್ಮ ಕೈ ಸೇರುತ್ತದೆ. ವಿರೋಧಿಗಳೆಲ್ಲ ಹತ್ತಿರ ಬರುತ್ತಾರೆ. ಅವಿವಾಹಿತರಿಗೆ ವಿವಾಹ ಸಂಬಂಧ ಮಾತುಕತೆಗಳು ನಡೆದು ಶುಭಕಾರ್ಯ ಮನಸ್ಸಿಗೆ ಮುದ ತರುತ್ತದೆ. ಮಕ್ಕಳಿಂದ ಸುಖ ಇದೆ. ವೃತ್ತಿಯಲ್ಲಿ ನಿಮ್ಮ ನಿರೀಕ್ಷೆಗೂ ಮೀರಿ ಯಶಸ್ಸನ್ನು ಸಾಧಿಸುತ್ತೀರಿ. ಉನ್ನತ ಪದವಿ ಹುದ್ದೆ ನಿಮ್ಮದಾಗುತ್ತದೆ.

ಮಕರ ರಾಶಿ : ಪ್ರಕೃತಿಯ ನಡುವೆ ನಿಮಗೆ ಮನಃಶಾಂತಿ‌ ಲಭಿಸುತ್ತದೆ. ಪ್ರಕೃತಿಯನ್ನು ನೀವು ಇಷ್ಟ ಪಡುವವರಾದ್ದರಿಂದ ಪ್ರಕೃತಿ ನಿಮ್ಮ ಮನಸ್ಸಿಗೆ ಉಲ್ಲಾಸ ಕೊಡುತ್ತದೆ. ಶನಿಯ ಪ್ರಭಾವ ಇನ್ನೂ ಇದೆ ನಿಮ್ಮ‌ ರಾಶಿಯ ಮೇಲೆ. ಹಾಗಾಗಿ‌ ಸಣ್ಣಪುಟ್ಟ ಕಿರಿಕಿರಿ ಗಳು‌ಇರುತ್ತದೆ. ನಿಮಗಾಗಿ‌ ಪ್ರಾರ್ಥನೆ ಮಾಡುವ ಬಂಧು‌ ಸ್ನೇಹಿತರು ಇದ್ದಾರೆ.‌ ಮಕರ ರಾಶಿಯವರ ಸ್ನೇಹ ಬಳಗ ದೊಡ್ಡದು ಹಾಗಾಗಿ ಸ್ನೇಹಿತರ ಒಡನಾಟ ನಿಮಗೆ ಖುಷಿ ಕೊಡುತ್ತದೆ. 

ಕುಂಭ ರಾಶಿ : ತೀರ್ಥಯಾತ್ರೆ ಪುಣ್ಯಕ್ಷೇತ್ರ ದರ್ಶನ ಮುಂತಾದ ಖುಷಿ ಕೊಡುವ ಸಂಗತಿಗಳು‌ಇವೆ. ಗುರು ಈಗ ಮೂರನೇ ಮನೆಗೆ ಬಂದಿದ್ದಾನೆ. ಸಹೋದರರಿಂದ ಲಾಭ ಮತ್ತು ಸಹೋದರರಿಗೂ ಶುಭವಾಗುತ್ತದೆ. ನಾಲ್ಕನೇ ಮನೆಯಲ್ಲಿ ಶುಕ್ರ ನಿಮಗೆ ವಾಹನದಿಂದ ಲಾಭ ಮಾಡಿಸುತ್ತಾನೆ. ವೃತ್ತಿ ಸಂಬಂಧ ಯಶಸ್ಸು ಇದೆ. ಗೃಹ ಅಲಂಕಾರಕ್ಕಾಗಿ ಖರ್ಚು ಮಾಡುತ್ತೀರಿ.‌ ಆಭರಣ ಖರೀದಿ ಯೋಗ ಇದೆ.‌ ಸಹೋದರಿಯರಿಂದ ಮನಸ್ಸಿಗೆ ಕಿರಿಕಿರಿ ಇದೆ. ಹಣದ ಹರಿವು ಉತ್ತಮವಾಗಿದೆ.

ಮೀನ ರಾಶಿ : ಈಗ ನಿಮಗೆ ಸಂಪೂರ್ಣ ಗುರುಬಲ. ಸಾಡೆಸಾತಿ ಶನಿಯ ಪ್ರಭಾವ ಇದ್ದರೂ ಗುರುಬಲ ನಿಮಗೆ ಯಶಸ್ಸನ್ನೂ ತಂದುಕೊಡುತ್ತದೆ. ವೃತ್ತಿಯಲ್ಲಿ ಒಳ್ಳೆಯ ಹೆಸರು ಪ್ರಶಂಸೆ ಸಿಗುತ್ತದೆ. ಹಣದ ಹರಿವು ಉತ್ತಮವಾಗಿದೆ. ಸಹೋದರಿಯರಿಂದ ಲಾಭ ಇದೆ.‌ ನಾಲ್ಕರ ಕುಜ ಮೂರರ ಶುಕ್ರ ಎರಡರ ಗುರು ಹಾಗೂ ಬುಧ ಎಲ್ಲರೂ ಈಗ ನಿಮಗೆ ಅನುಕೂಲವಂತರೇ ಆಗಿದ್ದಾರೆ. 

Leave a Comment