ಮೇಷ : ಮಾತುಗಳಲ್ಲಿ ಕಾಠಿಣ್ಯತೆ ಇರುತ್ತದೆ. ನಿಮ್ಮ ನಡವಳಿಕೆ ತೀರಾ ವೈಯಕ್ತಿಕವಾಗಿರುತ್ತದೆ. ಸಂಸಾರದಲ್ಲಿ ಸ್ವಲ್ಪ ಕಾವೇರಿದ ವಾತಾವರಣ ಮೂಡಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸು ಇರುತ್ತದೆ. ವೃತ್ತಿಯಲ್ಲಿ ಇದ್ದ ಗೋಜಲುಗಳು ಸ್ವಲ್ಪಮಟ್ಟಿಗೆ ನಿವಾರಣೆಯಾಗುತ್ತದೆ. ಸ್ವಂತ ಆರೋಗ್ಯ ಅಥವಾ ಹಿರಿಯರ ಆರೋಗ್ಯಕ್ಕಾಗಿ ಹಣ ಖರ್ಚು ಮಾಡುವಿರಿ. ಸಂಗಾತಿಯ ಬೇಡಿಕೆಯನ್ನು ಈಡೇರಿಸಲು ಒಡವೆ ಕೊಳ್ಳಬೇಕಾಗಬಹುದು.
ವೃಷಭ : ಸಾಹಸ ಪ್ರವೃತ್ತಿ ಹೆಚ್ಚಾಗುತ್ತದೆ. ಅನಿರೀಕ್ಷಿತ ಧನಾಗಮನ ಆಗಬಹುದು. ಸೋದರಿಯರೊಡನೆ ಕಾವೇರಿದ ಮಾತುಗಳಾಗಬಹುದು. ತಂದೆಯಿಂದ ಪಿತ್ರಾರ್ಜಿತ ಆಸ್ತಿ ಬರುವ ಸೂಚನೆ ಇದೆ. ವಿದ್ಯಾರ್ಥಿಗಳಿಗೆ ಇದ್ದ ಸವಲತ್ತು ಕಡಿಮೆಯಾಗಬಹುದು. ಕಣ್ಣಿನ ಬಗ್ಗೆ ಎಚ್ಚರವಹಿಸಿರಿ. ಪಶುಸಂಗೋಪನೆ ಮಾಡುವವರು ಪಶುಗಳ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಸಂಗಾತಿಯೊಡನೆ ಉತ್ತಮ ಹೊಂದಾಣಿಕೆ ಮೂಡುತ್ತದೆ. ಹೊಸ ರೀತಿಯ ವ್ಯವಹಾರಗಳಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ.
ಮಿಥುನ : ನಿಮ್ಮ ವ್ಯಾಪಾರ ವ್ಯವಹಾರಗಳ ಬಗ್ಗೆ ಹೆಚ್ಚು ಚಿಂತನೆ ಮಾಡುವಿರಿ. ಆದಾಯವು ನಿಮ್ಮ ಖರ್ಚನ್ನು ತುಂಬಿಸುವಷ್ಟು ಇರುತ್ತದೆ. ಬಂಧುಗಳ ನಡುವೆ ನಿಮ್ಮ ಗೌರವದ ಮಟ್ಟ ಹೆಚ್ಚಿರುತ್ತದೆ. ವಿದ್ಯಾರ್ಥಿಗಳು ಈಗ ಮಧ್ಯಮ ಫಲಿತಾಂಶದ ನಿರೀಕ್ಷೆಯನ್ನು ಮಾಡಬಹುದು. ಹರಿತವಾದ ವಸ್ತುಗಳಿಂದ ಗಾಯವಾಗಬಹುದು, ಸ್ವಲ್ಪ ಎಚ್ಚರವಹಿಸಿರಿ. ಸಂಗಾತಿ ಜೊತೆ ಸೇರಿ ಮಾಡಿದ ವ್ಯವಹಾರಗಳಲ್ಲಿ ಹೆಚ್ಚಿನ ಲಾಭವಿರುತ್ತದೆ. ಸರ್ಕಾರಿ ಸಂಸ್ಥೆಗಳ ಜೊತೆ ಮಾಡುವ ವ್ಯವಹಾರಗಳಲ್ಲಿ ತೊಡಕುಗಳು ಕಾಣಬಹುದು.
ಕಟಕ : ಯಾವುದೇ ಕೆಲಸದಲ್ಲೂ ಸ್ವಲ್ಪ ದ್ವಂದ್ವ ನಿರ್ಧಾರಗಳಿರುತ್ತವೆ. ಸಂಗಾತಿ ಆದಾಯದಲ್ಲಿ ಸ್ವಲ್ಪಮಟ್ಟಿನ ಹೆಚ್ಚಳವನ್ನು ಕಾಣಬಹುದು. ಸಮೀಪದ ಬಂಧುಗಳಲ್ಲಿ ಯಾರಿಗಾದರೂ ಅನಾರೋಗ್ಯ ಸಂಭವಿಸುವ ಸಂದರ್ಭವಿದೆ. ಆಸ್ತಿ ವಿಚಾರದಲ್ಲಿ ಸ್ಪಷ್ಟ ನಿರ್ಧಾರಗಳಿರುವುದಿಲ್ಲ. ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಉತ್ತಮ ಸೌಲಭ್ಯಗಳು ದೊರೆಯುತ್ತವೆ ಹಾಗೂ ಪ್ರೋತ್ಸಾಹ ಧನ ದೊರೆಯುತ್ತದೆ. ಚರ್ಮ ಕಾಯಿಲೆ ಕೆಲವರನ್ನು ಕಾಡಬಹುದು.
ಸಿಂಹ : ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವವರ ವ್ಯವಹಾರ ವಿಸ್ತರಿಸುತ್ತದೆ. ನಿಮ್ಮ ನಡವಳಿಕೆ ಎಲ್ಲರ ಗಮನ ಸೆಳೆಯುತ್ತದೆ. ವೃತ್ತಿಯಲ್ಲಿ ನಿಮ್ಮ ಕೆಲಸಗಳಿಗೆ ಹೆಚ್ಚಿನ ಬೆಲೆ ದೊರೆತು ನಾಯಕತ್ವ ಬೆಳೆಯತೊಡಗುತ್ತದೆ. ಗಣಿತವನ್ನು ಅಭ್ಯಾಸ ಮಾಡುತ್ತಿರುವವರಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ಸರ್ಕಾರಿ ಸಾಲಗಳನ್ನು ಪಡೆದು ಉಳಿದ ಕೈ ಸಾಲಗಳನ್ನು ತೀರಿಸಬಹುದು. ಸಂಗಾತಿಯ ಬುದ್ಧಿವಂತಿಕೆಯಿಂದ ಹೆಚ್ಚು ಸಾಲದ ಹಣ ತೀರಿಸಬಹುದು.
ಕನ್ಯಾ : ಹಣಕಾಸಿನ ಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸುತ್ತದೆ. ಆದರೂ ಖರ್ಚಿಗೆ ಮಿತಿಹೇರುವುದು ಅತಿ ಅಗತ್ಯ. ಸಮಯಕ್ಕೆ ತಕ್ಕಂತೆ ಬದಲಾಗುವ ಸ್ವಭಾವದವರೂ ಸಿಕ್ಕಿಬೀಳುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಸಾಮಾನ್ಯ ಯಶಸ್ಸು ಇರುತ್ತದೆ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ ತಲೆದೋರಬಹುದು. ಶಾಲಾ ಶಿಕ್ಷಕರಿಗೆ ಬಯಸುತ್ತಿದ್ದ ಜಾಗಕ್ಕೆ ವರ್ಗಾವಣೆ ಸಿಗುವ ಸಾಧ್ಯತೆಗಳಿವೆ. ವಿದೇಶಿ ಭಾಷಾ ಬೋಧಕರಿಗೆ ಹೆಚ್ಚಿನ ಬೇಡಿಕೆ ಬರಬಹುದು. ಕೃಷಿ ವಿಸ್ತರಣೆ ಮಾಡುವ ಆಲೋಚನೆ ನಿಮಗೆ ಬರುತ್ತದೆ.
ತುಲಾ : ಬಹಳ ಪ್ರಶಾಂತವಾಗಿರಲು ಸಾಕಷ್ಟು ಪ್ರಯತ್ನಪಡುವಿರಿ. ಸಂಗೀತಗಾರರು ಅಭ್ಯಾಸದಲ್ಲಿ ಹೆಚ್ಚು ತೊಡಗಿಸಿಕೊಳ್ಳುವರು. ನಿರೀಕ್ಷಿತ
ಧನಾದಾಯ ಇಲ್ಲದಿದ್ದರೂ ತೊಂದರೆ ಇಲ್ಲ. ವ್ಯವಹಾರಿಕ ನಡವಳಿಕೆಯಿಂದ ಪಾಲುದಾರರನ್ನು ಸೆಳೆಯುವಿರಿ. ಭೂ ವ್ಯವಹಾರ ಮಾಡುವವರಿಗೆ ಸ್ವಲ್ಪಮಟ್ಟಿನ ಪ್ರಗತಿ ಇರುತ್ತದೆ. ಆಡಳಿತಾತ್ಮಕ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿರುವವರು ಹೆಚ್ಚಿನ ಶ್ರದ್ಧೆವಹಿಸಬೇಕಾದ ಅಗತ್ಯವಿದೆ. ಪಿತ್ತ ವಿಕಾರಗಳು ಸ್ವಲ್ಪ ಮಟ್ಟಿಗೆ ಕಾಡಬಹುದು.
ವೃಶ್ಚಿಕ : ನಿಮ್ಮ ಪ್ರಯತ್ನದಲ್ಲಿ ಹೆಚ್ಚಿನ ನಂಬಿಕೆ ಇಡಿರಿ. ಧನಾದಾಯವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ನಿಮ್ಮ ಶತ್ರುಗಳನ್ನು ಅವರದೇ ತಂತ್ರಗಳಿಂದ ಮಣಿಸುವಿರಿ. ಕುಲುಮೆ ಕೆಲಸ ಮಾಡುವವರಿಗೆ ಹೆಚ್ಚು ಕೆಲಸ ದೊರೆಯುತ್ತದೆ. ವಿದ್ಯಾರ್ಥಿಗಳು ಅಪೇಕ್ಷಿತ ವಿಷಯಗಳ ಬಗ್ಗೆ ಅಭ್ಯಾಸ ಮುಂದುವರಿಸಬಹುದು. ವಿದೇಶದಲ್ಲಿ ವೈದ್ಯರಾಗಿರುವವರಿಗೆ ಬೇಡಿಕೆ ಬರುತ್ತದೆ. ಬಂಧುಗಳಲ್ಲಿ ವಿವಾಹ ಸಂಬಂಧ ಬೆಳೆಯುವ ಸಾಧ್ಯತೆ ಇದೆ.
ಧನು : ವ್ಯಾಪಾರ ವ್ಯವಹಾರಗಳಲ್ಲಿ ಬಹಳ ಚತುರತೆಯನ್ನು ಪ್ರದರ್ಶಿಸಿ ಸೂಕ್ತವಾಗಿ ಮುನ್ನಡೆಯುವಿರಿ. ನಿಮ್ಮ ಚತುರತೆಯನ್ನು ಮೆಚ್ಚಿ ನಿಮ್ಮ ಪಾಲುದಾರರು ನಿಮಗೆ ಮುಖ್ಯ ಸ್ಥಾನವನ್ನು ಕೊಡುವರು. ವೆಚ್ಚದಲ್ಲಿ ಸಾಕಷ್ಟು ಕಡಿಮೆ ಮಾಡಿ ವ್ಯವಹಾರವನ್ನು ಲಾಭದತ್ತ ಹೊರಳುವಂತೆ ಮಾಡುವಿರಿ. ನಿಮ್ಮ ಗಟ್ಟಿ ನಿರ್ಧಾರಗಳು ಹಾಗೂ ಕಠಿಣ ಕ್ರಮಗಳು ಪ್ರಶಂಸಿಸಲ್ಪಡುತ್ತವೆ. ವಿದ್ಯುತ್ ಉತ್ಪಾದನೆ ಮಾಡುತ್ತಿರುವವರಿಗೆ ಹೆಚ್ಚು ಲಾಭವಿರುತ್ತದೆ.
ಮಕರ: ನಿಮ್ಮ ಯೋಜನೆಗಳ ಬಗ್ಗೆ ನೀವು ಸರಿಯಾಗಿ ತಿಳಿದು ನಂತರ ಅದನ್ನು ಇತರರಿಗೆ ತಿಳಿಸುವ ಪ್ರಯತ್ನ ಮಾಡಿರಿ. ಕುಕ್ಕುಟೋದ್ಯಮವನ್ನು ಮಾಡುತ್ತಿರುವವರಿಗೆ ಲಾಭವಿರುತ್ತದೆ. ಗೋವಿನ ಉತ್ಪನ್ನಗಳನ್ನು ಸಂಸ್ಕರಿಸಿ ಮಾರಾಟ ಮಾಡುವವರಿಗೆ ಹೆಚ್ಚು ಬೇಡಿಕೆ ಬರುತ್ತದೆ. ನಿಮ್ಮ ಸಭ್ಯ ನಡವಳಿಕೆಯಿಂದ ಜನರನ್ನು ಗೆಲ್ಲುವಿರಿ. ವಿದೇಶಿ ವಸ್ತುಗಳನ್ನು ತರಿಸಿ ಮಾರಾಟ ಮಾಡಬಹುದು.
ಕುಂಭ : ಸ್ವಲ್ಪ ಆಲಸೀತನ ಕಾಡಬಹುದು. ಉತ್ತಮ ಮಾತಿನಿಂದ ಜನರನ್ನು ಸೆಳೆಯುವಿರಿ. ವೈರಿಗಳನ್ನು ಮಟ್ಟ ಹಾಕಲು ಹೊಸ ತಂತ್ರ ಹೆಣೆಯುವಿರಿ. ಕೃಷಿ ಮಾಡಲು ಅತಿಯಾದ ಆಸಕ್ತಿ ಮೂಡುತ್ತದೆ. ತೆರಿಗೆ ತಜ್ಞರಿಗೆ ಹೆಚ್ಚು ಬೇಡಿಕೆ ಬರುತ್ತದೆ ಹಾಗೂ ಕೈತುಂಬಾ ಸಂಪಾದನೆ ಇರುತ್ತದೆ. ತಾಯಿಯ ಆರೋಗ್ಯಕ್ಕಾಗಿ ಹೆಚ್ಚಿನ ಶ್ರಮವಹಿಸುವಿರಿ. ಸಂಗಾತಿಯೊಡನೆ ಪ್ರವಾಸ ಮಾಡುವಿರಿ. ಕಾನೂನು ಪಂಡಿತರಿಗೆ ಹೆಚ್ಚಿನ ಮಾನ್ಯತೆ ದೊರೆಯುತ್ತದೆ. ಧರ್ಮಪ್ರಚಾರಕರಿಗೆ ಆದ್ಯತೆಯ ಮೇಲೆ ಸಹಕಾರ ಸಿಗುತ್ತದೆ.
ಮೀನ : ವಿದೇಶದಲ್ಲಿರುವವರಿಗೆ ಹೆಚ್ಚಿನ ಧನ ಸಂಪಾದನೆ ಆಗುತ್ತದೆ. ಕಚೇರಿ ಕೆಲಸಗಳಲ್ಲಿ ಚುರುಕುತನ ತೋರಿ ಬಡ್ತಿಯನ್ನು ದೃಢಪಡಿಸಿಕೊಳ್ಳುವಿರಿ. ವೃತ್ತಿಯಲ್ಲಿ ಹೊಸ ಲೆಕ್ಕಾಚಾರಗಳೊಡನೆ ಹೊಸ ಹೆಜ್ಜೆ ಹಾಕುವಿರಿ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆಯನ್ನು ಕಾಣಬಹುದು. ಮಕ್ಕಳ ಸಂತೋಷಕ್ಕಾಗಿ ಧನವ್ಯಯ ಮಾಡುವಿರಿ. ಹಿರಿಯ ಆಯುರ್ವೇದ ವೈದ್ಯರಿಗೆ ಬೇಡಿಕೆ ಬರಲಿದೆ ಹಾಗೂ ಕೈಗುಣದ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿ ಬರುತ್ತವೆ.














